ರಾಯಚೂರು: ಕಲಿಯುಗದ ಕಾಮಧೇನು ಪ್ರಸಿದ್ಧಿಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಧ್ಯಾರಾಧನಾ ಮಹೋತ್ಸವ ವೈಭವದಿಂದ ನಡೆಯಿತು. ರಾಯರ 353ನೇ ಆರಾಧನಾ ಮಹೋತ್ಸವದ ನಾಲ್ಕನೇ ದಿನವಾದ ಇಂದು ಬೆಳಗ್ಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ಜರುಗಿದವು.
ರಾಯರ ಮೂಲ ಬೃಂದಾವನದಲ್ಲಿ ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ವಿಶೇಷ ಅಭಿಷೇಕ ನೆರವೇರಿಸಿದರು. ಹಣ್ಣು-ಹಂಪಲು, ಹಾಲು, ಮೊಸರು, ತುಪ್ಪ, ಜೇನು ತುಪ್ಪ ಹಾಗು ಒಣಗಿದ ಹಣ್ಣುಗಳ ಅಭಿಷೇಕ ಮಾಡಿದರು.