ಕರ್ನಾಟಕ

karnataka

ETV Bharat / snippets

ಹೊಸ 37 ನರ್ಸಿಂಗ್ ಕಾಲೇಜು ಮಂಜೂರು : 1,315 ಸೀಟು ಸೇರ್ಪಡೆ

KEA
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ETV Bharat)

By ETV Bharat Karnataka Team

Published : 11 hours ago

ಬೆಂಗಳೂರು :ರಾಜ್ಯ ಸರ್ಕಾರ ಹೊಸದಾಗಿ 37 ನರ್ಸಿಂಗ್ ಕಾಲೇಜುಗಳಿಗೆ ಮಂಜೂರಾತಿ ನೀಡಿ 1,315 ಸೀಟುಗಳನ್ನು ಸೇರ್ಪಡೆ ಮಾಡಿರುವ ಕಾರಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಸೀಟುಗಳ ಹಂಚಿಕೆಗೆ ವಿಶೇಷ ಸುತ್ತಿನ ಕೌನ್ಸೆಲಿಂಗ್ ನಡೆಸಲಿದೆ.

ಆಸಕ್ತರು ಅ.28 ರಿಂದ 29ರ ಮಧ್ಯಾಹ್ನ 12 ಗಂಟೆವರೆಗೆ ಆಪ್ಷನ್ಸ್ ದಾಖಲಿಸಬಹುದು. ಅದೇ ದಿನ ಸಂಜೆ 6ಕ್ಕೆ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೀಟು‌ ಹಂಚಿಕೆಯಾದ ಅಭ್ಯರ್ಥಿಗಳು ಅ. 30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು‌ ವಿವರಿಸಿದ್ದಾರೆ. ಹೊಸ 37 ಕಾಲೇಜುಗಳಿಗೆ‌ ಸಂಬಂಧಿಸಿದ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಈ ಕಾಲೇಜುಗಳಿಗೆ ಮಾತ್ರ ಆಪ್ಷನ್ಸ್ ದಾಖಲಿಸಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :ಸ್ನಾತಕೋತ್ತರ ಆಯುಷ್ ಕೋರ್ಸ್: ಅ.28ರಿಂದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ

ABOUT THE AUTHOR

...view details