ETV Bharat / state

ಚಾಮರಾಜನಗರ: ಸಾವಯವ ಸಂತೆ ತೆರೆದು ಮದುವೆಯಾದ ಪ್ರಗತಿಪರ ರೈತ

ವಸಂತ ಕುಮಾರ್ ಎನ್ನುವ ರೈತ ಯಾವುದೇ ಶಾಸ್ತ್ರ- ಸಂಪ್ರದಾಯಗಳಿಲ್ಲದೇ, ಸಾವಯವ ಸಂತೆ ಏರ್ಪಡಿಸಿ, ವಿಶೇಷ ವಚನ ಕಲ್ಯಾಣ ಮಹೋತ್ಸವದ ಮೂಲಕ ರಾಧಿಕಾ ಎನ್ನುವವರನ್ನು ಕೈಹಿಡಿದಿದ್ದಾರೆ.

A farmer who organized an organic fair and got married in Chamarajanagar
ಚಾಮರಾಜನಗರ: ಸಾವಯವ ಸಂತೆ ತೆರೆದು ಮದುವೆಯಾದ ಪ್ರಗತಿಪರ ರೈತ (ETV Bharat)
author img

By ETV Bharat Karnataka Team

Published : Oct 27, 2024, 10:36 PM IST

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಸಾವಯವ ರೈತನೊಬ್ಬ ವಿಶೇಷವಾಗಿ, ಅರ್ಥಪೂರ್ಣವಾಗಿ ಮದುವೆ ಆಗುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕೆಲಸೂರುಪುರದ ವಸಂತ ಕುಮಾರ್ (ಅಕ್ಷಯ್) ಭಾನುವಾರದಂದು ಯಾವುದೇ ಶಾಸ್ತ್ರ- ಸಂಪ್ರದಾಯಗಳಿಲ್ಲದೇ, ಸಾವಯವ ಸಂತೆ ಏರ್ಪಡಿಸಿ, ವಿಶೇಷ ವಚನ ಕಲ್ಯಾಣ ಮಹೋತ್ಸವದ ಮೂಲಕ ರಾಧಿಕಾ (ಪಾರ್ವತಿ)ಅವರ ಜೊತೆ ಬಾಳ ಪಯಣ ಆರಂಭಿಸಿದರು.

ಗುಂಡ್ಲುಪೇಟೆ ಜೆಎಸ್‍ಎಸ್ ಅನುಭವ ಮಂಟಪದಲ್ಲಿ ನಡೆದ ಈ ವಿಶೇಷ ಮದುವೆಯಲ್ಲಿ ಸಂತೆಯೇ ಕೇಂದ್ರ ಬಿಂದುವಾಗಿತ್ತು. ಕಲ್ಯಾಣಮಂಟಪದ ಪ್ರವೇಶದ್ವಾರದಲ್ಲಿ ನೈಸರ್ಗಿಕ ಕೃಷಿಕರು ಸಾವಯವ ಮಳಿಗೆ ತೆರೆದಿದ್ದರು. ವಚನ ಕಲ್ಯಾಣ ಮಹೋತ್ಸವಕ್ಕೆ ಬಂದಿದ್ದ ವಧು-ವರನ ಕಡೆಯವರು ಸಾವಯವ ಪದಾರ್ಥಗಳನ್ನು ಖರೀದಿಸಿ ರೈತರನ್ನು ಪ್ರೋತ್ಸಾಹಿಸಿದರು. ಸ್ಥಳದಲ್ಲಿ ಹಾಜರಿದ್ದ ಸಾವಯವ ಕೃಷಿಕರು ಕೃಷಿಯ ಮಹತ್ವದ ಬಗ್ಗೆ ತಿಳಿಸಿಕೊಡುವ ಮೂಲಕ ಕೃಷಿ ಜ್ಞಾನದ ಪ್ರಸಾರವೂ ಆಯಿತು‌.

A farmer who organized an organic fair and got married in Chamarajanagar
ಚಾಮರಾಜನಗರ: ಸಾವಯವ ಸಂತೆ ತೆರೆದು ಮದುವೆಯಾದ ಪ್ರಗತಿಪರ ರೈತ (ETV Bharat)

ವಚನ ಗಾಯನ, ಸಹಜ ಶಿವಯೋಗ ಮತ್ತು ಸಾವಯವ ಕೃಷಿಯ ಮಹತ್ವ ಮದುವೆ ಮೆರಗು ಹೆಚ್ಚಿಸಿತು‌. ಶರಣ ತತ್ವ ಚಿಂತಕರಾದ ಬಸವಯೋಗಿಪ್ರಭು ಸ್ವಾಮೀಜಿ, ಮೂಡುಗೂರು ಇಮ್ಮಡಿ ಉದ್ದಾನ ಸ್ವಾಮೀಜಿ ಮತ್ತು ಬಸವತತ್ವ ಪ್ರಚಾರಕ ಚೌಡಹಳ್ಳಿ ನಿಂಗರಾಜಪ್ಪರ ನೇತೃತ್ವದಲ್ಲಿ ಲಿಂಗಪೂಜೆ, ವಚನಗಾಯನ ನಂತರ ಮಾಂಗಲ್ಯಧಾರಣೆ ನೆರವೇರಿಸಲಾಯಿತು.

ಇದನ್ನೂ ಓದಿ: ಪ್ರೀತಿಸಿದ ತೃತೀಯಲಿಂಗಿ ಕೈಹಿಡಿದ ಯುವಕ; ಕುಟುಂಬದ ಆಶೀರ್ವಾದ, ಬೆಂಬಲದಿಂದ ಅದ್ಧೂರಿ ವಿವಾಹ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.