ETV Bharat / sports

ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ ಟೆಸ್ಟ್​ ದಾಖಲೆ ಹೇಗಿದೆ?: ಇಲ್ಲಿವೆ 5 ಬೆಸ್ಟ್​ ಇನ್ನಿಂಗ್ಸ್​ - VIRAT KOHLI BEST TEST INNINGS

ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್​ ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಬೃಹತ್​ ಇನ್ನಿಂಗ್ಸ್​​ಗಳನ್ನು ಆಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)
author img

By ETV Bharat Sports Team

Published : Nov 21, 2024, 12:06 PM IST

Virat Kohli Records In Australia: ಶುಕ್ರವಾರ (ನಾಳೆ)ದಿಂದ ಬಹುನಿರೀಕ್ಷಿತ ಬಾರ್ಡರ್​-ಗವಾಸ್ಕರ್​ ಟ್ರೋಫಿ ಆರಂಭವಾಗಲಿದೆ. 5 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ಪರ್ತ್​ ಮೈದಾನದಲ್ಲಿ ನಡೆಯಲಿದೆ. ಇತ್ತೀಚೆಗೆ ತವರಿನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿ ಸರಣಿ ಕೈಚೆಲ್ಲಿದ್ದ ಟೀಂ ಇಂಡಿಯಾಗೆ ಈ ಸರಣಿ ಮಹತ್ವದ್ದಾಗಿದೆ. ಆಸ್ಟ್ರೇಲಿಯಾವನ್ನು 4 ಪಂದ್ಯಗಳಲ್ಲಿ ಮಣಿಸಿದರೆ ಮಾತ್ರ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ನೇರವಾಗಿ ಪ್ರವೇಶ ಪಡೆಯಲಿದೆ.

ಬಲಿಷ್ಠ ತಂಡದೊಂದಿಗೆ ಆಸ್ಟ್ರೇಲಿಯಾಗೆ ತೆರಳಿರುವ ಭಾರತದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಅದರಲ್ಲೂ ಅಗ್ರ ಬ್ಯಾಟರ್​ ವಿರಾಟ್​ ಕೊಹ್ಲಿ ಈ ಸರಣಿಯಲ್ಲಿ ಕಮ್​ಬ್ಯಾಕ್​ ಮಾಡುವ ನಿರೀಕ್ಷೆ ಅಭಿಮಾನಿಗಳದ್ದು. ಕಾಂಗರೂ ನಾಡಲ್ಲಿ ನಡೆದ ಟೆಸ್ಟ್​ಗಳಲ್ಲಿ ಕೊಹ್ಲಿ ಕೆಲವು ಬೆಸ್ಟ್​ ಇನ್ನಿಂಗ್ಸ್ ಆಡಿದ್ದಾರೆ. ಕೊಹ್ಲಿ ಆಸೀಸ್​ ನೆಲದಲ್ಲಿ ಎಷ್ಟು ಶತಕ ಸಿಡಿಸಿದ್ದಾರೆ, ಅವರ ಬೆಸ್ಟ್​ ಇನ್ನಿಂಗ್ಸ್​ ಯಾವುದು ನೋಡೋಣ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)

ಅಡಿಲೇಡ್ ಟೆಸ್ಟ್​, 2012​: ಆಸ್ಟ್ರೇಲಿಯಾ ವಿರುದ್ಧ 2011-12ರಲ್ಲಿ ಅಡಿಲೇಡ್​ ಮೈದಾನದಲ್ಲಿ ನಡೆದಿದ್ದ 4ನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 604 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ 272 ರನ್​ ಗಳಿಸಲಷ್ಟೇ ಶಕ್ತವಾಯಿತು. ಆದರೆ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಘರ್ಜಿಸಿದ್ದರು. ತಮ್ಮ ಇನ್ನಿಂಗ್ಸ್​ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್​ ಸಹಾಯದಿಂದ 116 ರನ್​ ಕಲೆಹಾಕಿದ್ದರು. ಆದ್ರೆ ಈ ಪಂದ್ಯವನ್ನು ಭಾರತ 298 ರನ್​ಗಳಿಂದ ಸೋತಿತ್ತು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)

ಅಡಿಲೆಡ್​ ಟೆಸ್ಟ್, 2014​: 2014ರಲ್ಲಿ ಅಡಿಲೇಡ್‌ನಲ್ಲಿ ನಡೆದಿದ್ದ ರೋಚಕ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಇದು ಅವರ ಬೆಸ್ಟ್​ ನಾಕ್‌ಗಳಲ್ಲಿ ಒಂದಾಗಿತ್ತು. ಟೆಸ್ಟ್​ನ ಕೊನೆಯ ದಿನದಲ್ಲಿ 364 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತಕ್ಕೆ ಕೊಹ್ಲಿ ಆಸರೆಯಾಗಿದ್ದರು. 16 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 141 ರನ್ ಗಳಿಸಿದ್ದರು.​ ಆದರೆ ಈ ಪಂದ್ಯವನ್ನು ಭಾರತ 48 ರನ್‌ಗಳಿಂದ ಸೋತಿತ್ತು.

ಸಿಡ್ನಿ ಟೆಸ್ಟ್, 2014 : 2014ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ 140 ರನ್​ಗಳನ್ನು ಸಿಡಿಸಿದ್ದರು. ಈ ಇನ್ನಿಂಗ್ಸ್​ನಲ್ಲಿ 20 ಬೌಂಡರಿಗಳಿದ್ದವು. ಆಸ್ಟ್ರೇಲಿಯಾ ನೀಡಿದ್ದ 572 ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿದ್ದ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)

ಮೆಲ್ಬೋರ್ನ್​ ಟೆಸ್ಟ್, 2014​: 2014ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದಿದ್ದ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅತ್ಯಧಿಕ ಸ್ಕೋರ್​ ದಾಖಲಿಸಿದ್ದರು. 18 ಬೌಂಡರಿ ಸಹಾಯದಿಂದ 169 ರನ್​ ಪೇರಿಸಿದ್ದರು.

ಪರ್ತ್​ ಟೆಸ್ಟ್​, 2018: ಟೆಸ್ಟ್​ನಲ್ಲಿ ಕೊಹ್ಲಿ ಆಡಿದ್ದ ಬೆಸ್ಟ್​ ಇನ್ನಿಂಗ್ಸ್​ಗಳಲ್ಲಿ ಪರ್ತ್​ ಮೈದಾನದಲ್ಲಿ ಆಡಿದ್ದು ಕೂಡ ಒಂದಾಗಿದೆ. ಸ್ವತಃ ಕೊಹ್ಲಿ ಅವರೇ ಈ ಬಗ್ಗೆ ತಿಳಿಸಿದ್ದಾರೆ. 2018ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಪರ್ತ್​ನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಕೊಹ್ಲಿ ಕೊಹ್ಲಿ 13 ಬೌಂಡರಿಗಳು ಮತ್ತು 1 ಸಿಕ್ಸರ್‌ ಸಮೇತ 123 ಗಳಿಸಿದ್ದರು.

ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್​ನಲ್ಲಿ ಒಟ್ಟು 6 ಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ 54ರ ಬ್ಯಾಟಿಂಗ್​ ಸರಾಸರಿಯೊಂದಿಗೆ 1300 ರನ್​ ಗಳಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಪಾಕ್‌ಗೆ ಹೋಗದಿರಲು 1989ರಲ್ಲಿ ನಡೆದ ಕರಾಳ ಘಟನೆಯೂ ಪ್ರಮುಖ ಕಾರಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.