ISRO SpaDeX Docking Postponed: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಸ್ಪಡೆಕ್ಸ್ ಮಿಷನ್‌ನ್ನಿನ ಬಾಹ್ಯಾಕಾಶ ನೌಕೆಯನ್ನು ಸಂಪರ್ಕಿಸುವ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಇಸ್ರೋದ ಪ್ರಾಥಮಿಕ ಯೋಜನೆಯ ಪ್ರಕಾರ, ಈ ಡಾಕಿಂಗ್ ಪ್ರಕ್ರಿಯೆ ಜನವರಿ 7ರಂದು ಅಂದ್ರೆ ಇಂದು ನಡೆಯಬೇಕಾಗಿತ್ತು. ಆದರೆ ಈಗ ಡಾಕಿಂಗ್ ವೇಳಾಪಟ್ಟಿಯನ್ನು ಜನವರಿ 9ಕ್ಕೆ ಬದಲಾಯಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಡಿಸೆಂಬರ್ 30ರ ರಾತ್ರಿ 10:00:15ಕ್ಕೆ ಡಾಕಿಂಗ್ ಪ್ರಯೋಗವನ್ನು (SPDEX) ಇಸ್ರೋ ಪ್ರಾರಂಭಿಸಿದೆ. ಈ ಕಾರ್ಯಾಚರಣೆಯಲ್ಲಿ ವಿಜ್ಞಾನಿಗಳು PSLV-C60 ಮೂಲಕ ಎರಡು ಉಪಗ್ರಹಗಳನ್ನು SDX01 (ಚೇಸರ್) ಮತ್ತು SDX02 (ಟಾರ್ಗೆಟ್) ಬಾಹ್ಯಾಕಾಶಕ್ಕೆ ಕಳುಹಿಸಿದ್ದಾರೆ. ಎರಡು ಉಪಗ್ರಹಗಳ ತೂಕ 440 ಕೆ.ಜಿ. ಆಗಿದೆ.
The SpaDeX Docking scheduled on 7th is now postponed to 9th.
— ISRO (@isro) January 6, 2025
The docking process requires further validation through ground simulations based on an abort scenario identified today.
Stay tuned for updates.
ಸ್ಪಡೆಕ್ಸ್ ಪ್ರಯೋಗದ ಮೂಲಕ ಪಿಎಸ್‌ಎಲ್‌ವಿ-ಸಿ60 ರಾಕೆಟ್, ಎರಡು ಉಪಗ್ರಹಗಳನ್ನು ಸ್ಥಿರ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಿದೆ. ಎರಡೂ ಉಪಗ್ರಹಗಳ ಮೂಲಕ ಬಾಹ್ಯಾಕಾಶದಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ನಡೆಸಲಾಗುತ್ತದೆ. ವಿಜ್ಞಾನಿಗಳು 2 ಉಪಗ್ರಹಗಳನ್ನು ವೃತ್ತಾಕಾರದ ಕಕ್ಷೆಯಲ್ಲಿ ಏಕಕಾಲದಲ್ಲಿ ಡಾಕ್ ಮಾಡುವ ಯೋಜನೆ ಸಿದ್ಧಪಡಿಸಿದ್ದಾರೆ. ಈ ಸಂಪರ್ಕ ಪ್ರಕ್ರಿಯೆಯನ್ನು ಭೂಮಿಯ ಮೇಲ್ಮೈಯಿಂದ 470 ಕಿ.ಮೀ ಎತ್ತರದಲ್ಲಿ ನಡೆಸಲಾಗುತ್ತದೆ.
ಬಾಹ್ಯಾಕಾಶ ನೌಕೆಯ ಡಾಕಿಂಗ್ ಪ್ರಕ್ರಿಯೆ ಇಂದು ನಡೆಯಬೇಕಾಗಿತ್ತು. ಆದ್ರೆ ನಿನ್ನೆ ಮಿಷನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದೆ ಎಂದು ಇಸ್ರೋ ಹೇಳಿದೆ. ಹೀಗಾಗಿ, ಡಾಕಿಂಗ್ ಪ್ರಕ್ರಿಯೆಯ ಕುರಿತು ಇನ್ನೂ ಕೆಲವು ಸಂಶೋಧನೆಗಳ ಅಗತ್ಯವಿದೆ. ಈ ಪ್ರಕ್ರಿಯೆಯ ಮುಂದಿನ ದಿನಾಂಕವನ್ನು ಬದಲಾಯಿಸಲಾಗುತ್ತಿದೆ ಎಂದು ಇಸ್ರೋ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಮೂಲಕ ತಿಳಿಸಿದೆ.
Sharing SPADEX onboard video showcasing SDX02 launch restraint release & docking ring extension.
— ISRO (@isro) January 6, 2025
#SPADEX #ISRO pic.twitter.com/bZkpGVyF9s
ಈ ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ, ಇಸ್ರೋ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದೆ. 13-ಸೆಕೆಂಡ್ ವಿಡಿಯೋದಲ್ಲಿ, ನೀವು Spadexನ ಎರಡನೇ ಉಪಗ್ರಹ SDX02 (ಟಾರ್ಗೆಟ್) ಉಡಾವಣೆಯನ್ನು ನೋಡಬಹುದು. ಈ ವಿಡಿಯೋ SDX02 ಲಾಂಚ್ ರೆಸಿಸ್ಟೆಂಟ್ ರಿಲೀಸ್ ಮತ್ತು ಡಾಕಿಂಗ್ ರಿಂಗ್ ಎಕ್ಸ್ಟೆನ್ಷನ್ ತೋರಿಸುತ್ತದೆ. ಉಡಾವಣೆ ಸಮಯದಲ್ಲಿ SDX02ನಲ್ಲಿನ ವಿಶೇಷ ಹಿಡಿತವನ್ನು Spadex ಹೇಗೆ ತೆಗೆದುಹಾಕಿತು ಮತ್ತು ನಂತರ ಡಾಕಿಂಗ್ ರಿಂಗ್ ಅನ್ನು ಅಭಿವೃದ್ಧಿಪಡಿಸಿತು ಎಂಬುದನ್ನು ಇದರಲ್ಲಿ ಕಾಣಬಹುದು.
ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸಿ, ಚಂದ್ರನಿಂದ ಮಣ್ಣನ್ನು ತಂದು ತನ್ನದೇ ಆದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ನಿರ್ಮಿಸುವ ಭಾರತದ ಕನಸು ನನಸಾಗಬೇಕಾದರೆ ಈ ಡಾಕಿಂಗ್ ಮತ್ತು ಅನ್‌ಕಾಕಿಂಗ್ ಪ್ರಕ್ರಿಯೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಸಂಪರ್ಕಿಸುವ ಉದ್ದೇಶದಿಂದ ಸ್ಪಡೆಕ್ಸ್ ಪ್ರಯೋಗವನ್ನು ಕೈಗೊಳ್ಳಲಾಗಿದೆ.
- ಡಾಕಿಂಗ್- ಅನ್‌ಡಾಕಿಂಗ್ ಎಂದರೇನು?:
ಡಾಕಿಂಗ್: ಡಾಕಿಂಗ್ ಎನ್ನುವುದು ಸತತವಾಗಿ ಎರಡು ವಸ್ತುಗಳನ್ನು ಪರಸ್ಪರ ಸಂಪರ್ಕಿಸುವ ಪ್ರಕ್ರಿಯೆ. ಈಗ, ಇಸ್ರೋದಿಂದ ಸ್ಪಡೆಕ್ಸ್ ಮಿಷನ್‌ನಲ್ಲಿ ಉಡಾವಣೆಯಾದ ಚೇಸರ್ ಉಪಗ್ರಹವು ಅದೇ ಬಾಹ್ಯಾಕಾಶಕ್ಕೆ ಕಳುಹಿಸಲಾದ ಟಾರ್ಗೆಟ್ ಎಂಬ ಮತ್ತೊಂದು ಉಪಗ್ರಹವನ್ನು ಹುಡುಕುತ್ತದೆ ಮತ್ತು ಸಂಪರ್ಕಿಸುತ್ತದೆ. ಈ ಸಂಪರ್ಕವು ಎರಡು ರೈಲು ಕೋಚ್‌ಗಳನ್ನು ಪರಸ್ಪರ ಸಂಪರ್ಕಿಸುವಂತಿರುತ್ತದೆ.
ಅನ್‌ಡಾಕಿಂಗ್: ಡಾಕಿಂಗ್‌ನ ವಿರುದ್ಧದ ಪ್ರಕ್ರಿಯೆಯನ್ನು ಅನ್‌ಡಾಕಿಂಗ್ ಎಂದು ಕರೆಯಲಾಗುತ್ತದೆ. ಎರಡು ಉಪಗ್ರಹಗಳು ಪರಸ್ಪರ ಬೇರ್ಪಡುವ ಪ್ರಕ್ರಿಯೆಯನ್ನು ಅನ್‌ಡಾಕಿಂಗ್ ಎನ್ನುವರು. ಈ ಸಂಪೂರ್ಣ ಪ್ರಕ್ರಿಯೆಯನ್ನು ಆಟೋಮೆಟಿಕ್ ಆಗಿ ಮಾಡಲಾಗುತ್ತದೆ. ಇದನ್ನು ಅಟಾನಮಸ್ ಡಾಕಿಂಗ್ ಎಂದು ಕರೆಯಲಾಗುತ್ತದೆ.
ಸ್ಪಡೆಕ್ಸ್ ಮಿಷನ- ಮುಖ್ಯಾಂಶಗಳು:
- ಮಿಷನ್ ಎರಡು ಸಣ್ಣ ಉಪಗ್ರಹಗಳನ್ನು SDX01 (ಚೇಸರ್) ಮತ್ತು SDX02 (ಟಾರ್ಗೆಟ್) ಒಳಗೊಂಡಿದೆ.
- ಪ್ರತಿಯೊಂದು ಉಪಗ್ರಹವು ಸುಮಾರು 220 ಕೆ.ಜಿ. ತೂಗುತ್ತದೆ.
- ಈ ಉಪಗ್ರಹಗಳು ಭೂಮಿಯ ಮೇಲ್ಮೈಯಿಂದ 470 ಕಿಮೀ ಎತ್ತರದಲ್ಲಿ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತವೆ.
- ನಂತರ, ಇವುಗಳನ್ನು ಗುರುತಿಸಲಾಗುತ್ತದೆ ಮತ್ತು ಅತ್ಯಾಧುನಿಕ ಸೆನ್ಸಾರ್ಗಳು ಮತ್ತು ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ಪರಸ್ಪರ ಸಂಪರ್ಕಿಸಲಾಗುತ್ತದೆ.
ಇದುವರೆಗೆ ಕೆಲವು ದೇಶಗಳು ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಇಸ್ರೋದ ಈ ಪ್ರಯೋಗ ಯಶಸ್ವಿಯಾದರೆ ಅಟಾನಮಸ್ ಡಾಕಿಂಗ್ ಸಾಮರ್ಥ್ಯ ಹೊಂದಿರುವ ಅಮೆರಿಕ, ರಷ್ಯಾ, ಚೀನಾ ದೇಶಗಳ ಸಾಲಿಗೆ ಭಾರತವೂ ಸೇರಲಿದೆ. ಈ ಉಡಾವಣೆಯೊಂದಿಗೆ, ಭಾರತ ಅಂತಹ ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಜನವರಿ 9, 2024ರಂದು ಇಸ್ರೋ ಈ ಕಾರ್ಯಾಚರಣೆಯ ಬಗ್ಗೆ ಯಾವ ರೀತಿಯ ಅಪ್ಡೇಟ್ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮೊಳಕೆಯೊಡೆದ ಅಲಸಂದೆ ಬೀಜ! ಇಸ್ರೋ ಮಹತ್ವದ ಪ್ರಯೋಗ