ಬೆಂಗಳೂರು : ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಬೆಂಗಳೂರು ನಗರದ ಎರಡು ಹಾಗೂ ಮಂಡ್ಯ, ಚಿಕ್ಕಬಳ್ಳಾಪುರದ ತಲಾ ಒಂದೊಂದು ಕಡೆಗಳಲ್ಲಿ ಬೆಳಗ್ಗೆ ತನಿಖಾಧಿಕಾರಿಗಳ ತಂಡ ದಾಖಲೆಗಳ ಶೋಧ ಕಾರ್ಯ ಕೈಗೊಂಡಿತ್ತು. ಇದೀಗ ಈ ದಾಳಿಯ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ.
ಅವರು ನೀಡಿರುವ ಅಧಿಕೃತ ಮಾಹಿತಿಯ ವಿವರ ಇಂತಿದೆ.
1 ಕೃಷ್ಣವೇಣಿ ಎಂ.ಸಿ, ಹಿರಿಯ ಭೂ ವಿಜ್ಞಾನಿ, ಮಂಗಳೂರು
- ದಾಳಿ ಮಾಡಲಾದ ಸ್ಥಳಗಳು - 5
- 3 ನಿವೇಶನಗಳು, ಬೆಂಗಳೂರಿನ ಯಲಹಂಕದಲ್ಲಿ 1 ಫ್ಲ್ಯಾಟ್ಸ್, ನಿರ್ಮಾಣ ಹಂತದಲ್ಲಿರುವ 1 ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು(ಕಾಫಿ ಪ್ಲಾಂಟೇಷನ್) ಸೇರಿದಂತೆ ಒಟ್ಟು ಸ್ಥಿರಾಸ್ತಿ 10.41 ಕೋಟಿ ರೂ.
- 56 ಸಾವಿರ ನಗದು, 66.71 ಲಕ್ಷ ಮೌಲ್ಯದ ಚಿನ್ನಾಭರಣಗಳು, 60 ಲಕ್ಷ ಬೆಲೆಬಾಳುವ ವಾಹನಗಳು, 24.40 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆ
- ಒಟ್ಟು ಆಸ್ತಿಯ ಮೌಲ್ಯ - 11.93 ಕೋಟಿ
- ಚಿಕ್ಕಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲು.
2 ಮಹೇಶ್, ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ, ಬೆಂಗಳೂರು
- ದಾಳಿ ಮಾಡಲಾದ ಸ್ಥಳಗಳು - 7
- 25 ನಿವೇಶನಗಳು, 1 ವಾಸದ ಮನೆ, 25 ಎಕರೆ ಕೃಷಿ ಜಮೀನು ಸೇರಿದಂತೆ 4.76 ಕೋಟಿ ಮೌಲ್ಯದ ಸ್ಥಿರಾಸ್ತಿ 1.82 ಲಕ್ಷ ನಗದು, 15 ಲಕ್ಷ ಮೌಲ್ಯದ ಚಿನ್ನಾಭರಣ, 25 ಲಕ್ಷ ಮೌಲ್ಯದ ವಾಹನಗಳು, ರೂ. 1.71 ಕೋಟಿ ಮೌಲ್ಯದ ಇತರ ವಸ್ತುಗಳು ವಶಕ್ಕೆ
- ಒಟ್ಟು ಆಸ್ತಿಯ ಮೌಲ್ಯ - 6.89 ಕೋಟಿ
- ಮಂಡ್ಯ ಠಾಣೆಯಲ್ಲಿ ಪ್ರಕರಣ ದಾಖಲು
3 ಮೋಹನ್.ಕೆ, ಅಬಕಾರಿ ಅಧೀಕ್ಷಕರು, ಅಬಕಾರಿ ಜಂಟಿ ಆಯುಕ್ತರ ಕಛೇರಿ, ಬೆಂಗಳೂರು ದಕ್ಷಿಣ
- ದಾಳಿ ಮಾಡಲಾದ ಸ್ಥಳಗಳು - 5
- 3 ನಿವೇಶನಗಳು, 2 ವಾಸದ ಮನೆಗಳು, 2-25 ಎಕರೆ ಕೃಷಿ ಜಮೀನು ಸೇರಿದಂತೆ 3.22 ಕೋಟಿ ಮೌಲ್ಯದ ಸ್ಥಿರಾಸ್ತಿ 44.58 ಲಕ್ಷ ಮೌಲ್ಯದ ಚಿನ್ನಾಭರಣ, 35 ಲಕ್ಷ ಮೌಲ್ಯದ ವಾಹನಗಳು, ಬ್ಯಾಂಕ್ ಎಫ್.ಡಿ 35 ಲಕ್ಷ ರೂ ಇರುವುದು ಪತ್ತೆ
- ಒಟ್ಟು ಆಸ್ತಿಯ ಮೌಲ್ಯ - 4.37 ಕೋಟಿ
- ಬೆಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು
4 ತಿಪ್ಪೇಸ್ವಾಮಿ ಎನ್.ಕೆ, ನಿರ್ದೇಶಕರು, ನಗರ ಯೋಜನೆ, ಬೆಂಗಳೂರು
- ದಾಳಿ ಮಾಡಲಾದ ಸ್ಥಳಗಳು - 5
- 1 ನಿವೇಶನ, 2 ವಾಸದ ಮನೆಗಳು, 7-5 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2.50 ಕೋಟಿ ಮೌಲ್ಯದ ಸ್ಥಿರಾಸ್ತಿ
- 8 ಲಕ್ಷ ನಗದು, 58.73 ಲಕ್ಷ ಮೌಲ್ಯದ ಚಿನ್ನಾಭರಣ, 29.10 ಲಕ್ಷ ಮೌಲ್ಯದ ವಾಹನಗಳು, 15 ಸಾವಿರ ರೂ ಮೌಲ್ಯದ ಇತರೆ ವಸ್ತುಗಳು
- ಒಟ್ಟು ಆಸ್ತಿಯ ಮೌಲ್ಯ - 3.46 ಕೋಟಿ
- ಬೆಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲು
ಇದನ್ನೂ ಓದಿ : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ; ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ