ETV Bharat / bharat

ಯೂಟ್ಯೂಬರ್ ದಂಪತಿ ಮನೆಯಲ್ಲಿ ಶವವಾಗಿ ಪತ್ತೆ! - COUPLE FOUND DEAD

ಯೂಟ್ಯೂಬರ್ ದಂಪತಿ ತಮ್ಮ ಬೆಡ್​ರೂಮ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

YouTuber Couple Found Dead
ಯೂಟ್ಯೂಬರ್ ದಂಪತಿ ಮನೆಯಲ್ಲಿ ಶವವಾಗಿ ಪತ್ತೆ (ETV Bharat File photo)
author img

By ETV Bharat Karnataka Team

Published : Oct 27, 2024, 11:04 PM IST

ತಿರುವನಂತಪುರ(ಕೇರಳ): ಯೂಟ್ಯೂಬ್​ ವ್ಲಾಗರ್ ದಂಪತಿ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಪಾರಶಾಲ ಚೆರುವಾರಕೋಣಂನ ಪಯಸ್ ನಗರದ ನಿವಾಸಿಗಳಾದ ಸೆಲ್ವರಾಜ್ (45) ಮತ್ತು ಪ್ರಿಯಾ ಲತಾ (40) ಎಂದು ಗುರುತಿಸಲಾಗಿದೆ. ತಾವು ಮಲಗುವ ಕೋಣೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ.

ಸೆಲ್ವರಾಜ್ ಅವರು ನಿರ್ಮಾಣ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಯೂಟ್ಯೂಬ್ ಚಾನಲ್‌ನಲ್ಲಿ ವಿರಾಮದ ಸಮಯದಲ್ಲಿ ತಮ್ಮ ಪತ್ನಿಯೊಂದಿಗೆ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಮುಖ್ಯವಾಗಿ ಅಡುಗೆ ಖಾದ್ಯಗಳನ್ನು ತಯಾರಿಸುವ ವಿಡಿಯೋಗಳನ್ನು ಅವರು ಮಾಡುತ್ತಿದ್ದರು. ಎರಡು ದಿನಗಳ ಹಿಂದೆ, ಅವರು ತಮ್ಮ ಕೊನೆಯ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು, ಇದರಲ್ಲಿ ದಂಪತಿ ಚಿತ್ರಗಳೊಂದಿಗೆ ಸಾವನ್ನು ಸಂಕೇತಿಸುವ ಹಾಡನ್ನು ಸೇರಿಸಲಾಗಿದೆ.

ಎರ್ನಾಕುಲಂನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಅವರ ಮಗ ಸೇತು, ಫೋನ್ ಮೂಲಕ ಅಪ್ಪ-ಅಮ್ಮನನ್ನು ಸಂಪರ್ಕಿಸಲು ಸಾಧ್ಯವಾಗದೇ ಇದ್ದಾಗ ನಂತರ ಶನಿವಾರ ರಾತ್ರಿ ಅವರ ಸಾವಿನ ಸುದ್ದಿ ತಿಳಿದಿದೆ. ಹತ್ತು ಗಂಟೆಗೆ ಮನೆಗೆ ಹಿಂದಿರುಗಿದಾಗ ಗೇಟಿಗೆ ಬೀಗ ಹಾಕಿರುವುದು ಕಂಡು ಬಂತು. ಬಾಗಿಲು ತೆರೆದಾಗ ಮೃತದೇಹಗಳು ಕಾಣಿಸಿಕೊಂಡಿವೆ.

ದಂಪತಿ ಸಾವನ್ನಪ್ಪಿ ಎರಡು ದಿನಗಳು ಕಳೆದಿರಬಹುದು. ಪತ್ನಿಯನ್ನು ಕೊಂದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪಾರಶಾಲ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲಿಸಿತು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವನಂತಪುರ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಸಾಗಿಸಲಾಯಿತು.

ಇದನ್ನೂ ಓದಿ: ಉದ್ಯಮಿ ಪತ್ನಿ ಜೊತೆ ಪರಸಂಗ ಪ್ರೀತಿ; ಮಹಿಳೆ ಕೊಂದು ಡಿಸಿ ಕಚೇರಿ ಆವರಣದಲ್ಲಿ ಹೂತಿಟ್ಟಿದ್ದ ಜಿಮ್​ ಟ್ರೈನರ್​ ಅಂದರ್!​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.