ETV Bharat / snippets

ಕಾಣೆಯಾದ ಮಗುವನ್ನು ಪೊಲೀಸ್ ಠಾಣೆಗೆ ತಂದುಕೊಟ್ಟ ಮಹಿಳೆ: ಪೊಲೀಸರ ಶ್ಲಾಘನೆ

Kadooru Police Station
ಕಡೂರು ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Oct 25, 2024, 8:06 PM IST

ಚಿಕ್ಕಮಗಳೂರು: ಕೆಲ ದಿನಗಳ ಹಿಂದೆ ಕಡೂರು ತಾಲೂಕಿನಲ್ಲಿ ಕಾಣೆಯಾಗಿದ್ದ ಎರಡು ವರ್ಷದ ಮಗುವನ್ನು ಮಹಿಳೆಯೊಬ್ಬರು ಕಡೂರು ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ. ಪ್ರಕರಣ ಸುಖಾಂತ್ಯ ಕಂಡಿದ್ದು, ಮಹಿಳೆಯ ಕಾರ್ಯಕ್ಕೆ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಗು ಟಾಟಾ ಏಸ್ ವಾಹನದಲ್ಲಿ ಮಲಗಿದ್ದಾಗ ತಂದೆ ಬೇರೆ ಕೆಲಸದ ನಿಮಿತ್ತ ಬಿಟ್ಟು ಹೋಗಿದ್ದ. ಆದರೆ ಮಗು ನಿದ್ದೆಯಿಂದ ಎದ್ದಾಗ ತಂದೆ ಕಾಣಿಸದ ಹಿನ್ನೆಲೆಯಲ್ಲಿ ವಾಹನದಿಂದ ಇಳಿದು ಹೊರಬಂದಿತ್ತು. ಕಡೂರು ಪುರಸಭೆ ಸಮೀಪ ಅಳುತ್ತಿದ್ದ ಮಗುವನ್ನು ಕಂಡ ಮಹಿಳೆಯೊಬ್ಬರು, ಮಗುವನ್ನು ಕರೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಂದು ಅದೇ ಮಹಿಳೆ ಮಗುವನ್ನು ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಪೋಷಕರನ್ನು ಕರೆಸಿ ಮಗುವನ್ನು ಹಸ್ತಾಂತರಿಸಿ, ತಂದೆ- ತಾಯಿ ನಿರ್ಲಕ್ಷ್ಯಕ್ಕೆ ಬುದ್ಧಿ ಹೇಳಿ ಕಳುಹಿಸಿದರು.

ಮಗು ಕಾಣೆಯಾದ ಕುರಿತು ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕೂಡಲೇ ಪೊಲೀಸರು ತನಿಖೆ ಕೈಗೊಂಡಿದ್ದರು.

ಇದನ್ನೂ ಓದಿ: ಮೇಕೆ ಸಮೇತ ಕಾಡಿಗೆ ಹೋದ ರೈತ ನಾಪತ್ತೆ: ಗ್ರಾಮಸ್ಥರು ಕಂಗಾಲು, 70 ಮಂದಿ ಸೇರಿ ಹುಡುಕಿದರೂ ಸಿಗಲಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.