ETV Bharat / entertainment

ಭ್ರಷ್ಟಾಚಾರ, ಕೋಮು ಶಕ್ತಿಗಳೇ ನಮ್ಮ ಪಕ್ಷದ ಪ್ರಮುಖ ಶತ್ರುಗಳು: ವಿಜಯ್​ ದಳಪತಿ - VIJAY THALAPATHY

ಸಂಪೂರ್ಣವಾಗಿ ರಾಜಕೀಯಕ್ಕೆ ಧುಮುಕಿರುವ ನಟ ವಿಜಯ್​ ದಳಪತಿ ಅವರು ಇಂದು ನಡೆದ ತಮ್ಮ ಪಕ್ಷದ ಮೊದಲ ರಾಜ್ಯ ಸಮಾವೇಶದಲ್ಲಿ ಪಕ್ಷದ ತತ್ವ, ಸಿದ್ಧಾಂತಗಳು ಸೇರಿದಂತೆ, ವೈಚಾರಿಕತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಒತ್ತಿ ಹೇಳಿದರು.

Actor Vijay Thalapathy
ನಟ ವಿಜಯ್​ ದಳಪತಿ (ETV Bharat)
author img

By ETV Bharat Karnataka Team

Published : Oct 27, 2024, 10:58 PM IST

ವಿಲ್ಲುಪುರಂ(ತಮಿಳುನಾಡು): ಫೆಬ್ರವರಿ 2024 ರಲ್ಲಿ "ತಮಿಳಿಗ ವೆಟ್ರಿ ಕಳಗಂ" ಎಂಬ ಹೆಸರಿನಲ್ಲಿ ಪಕ್ಷವನ್ನು ಘೋಷಿಸಿದ ನಟ ವಿಜಯ್ ಪೂರ್ಣಾವಧಿಯ ರಾಜಕಾರಣಿಯಾಗಿ ವೇದಿಕೆ ಏರಿದ್ದಾರೆ. ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿ ವಿ.ಸಲೈ ಗ್ರಾಮದಲ್ಲಿ ನಡೆದ ಪಕ್ಷದ ಮೊದಲ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ವಿಜಯ್, ಈ ಸಮಾವೇಶವನ್ನು ಪಕ್ಷದ "ವಿಜಯ ನೀತಿ ಉತ್ಸವ" ಎಂದು ಹೆಸರಿಸಿದ್ದಾರೆ. ತಮ್ಮ ಭಾಷಣದಲ್ಲಿ, ಪಕ್ಷದ ಸಿದ್ಧಾಂತ ಹಾಗೂ ನೀತಿಗಳನ್ನು ವಿವರಿಸಿದ ವಿಜಯ್​, ಯಾರ ವಿರುದ್ಧ ತಮ್ಮ ರಾಜಕೀಯ ಎನ್ನುವುದನ್ನು ಹೇಳಿದ್ದಾರೆ.

ತಮ್ಮ ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲಿ ನಟ ವಿಜಯ್ ಅವರು ವೈಚಾರಿಕತೆ ಮತ್ತು ಸಾಮಾಜಿಕ ನ್ಯಾಯದಂತಹ ಪ್ರಮುಖ ಮೌಲ್ಯಗಳಿಗೆ ಒತ್ತು ನೀಡಿದರು. ಅವರು ತಮ್ಮ ಪಕ್ಷದ ತತ್ವಗಳಿಗೆ ಪೆರಿಯಾರ್ ಅವರನ್ನು ಪ್ರಮುಖ ವ್ಯಕ್ತಿ ಎಂದು ಬಣ್ಣಿಸಿದರು. ಆದರೆ ತಮ್ಮ ಪಕ್ಷ ಪೆರಿಯಾರ್ ಅವರ ನಾಸ್ತಿಕತೆಯನ್ನು ಒಪ್ಪುವುದಿಲ್ಲ. ಪ್ರತಿಯೊಬ್ಬರ ದೇವರ ಮೇಲಿರುವ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ "ಒಂದೇ ಕುಲ ಮತ್ತು ಒಬ್ಬನೇ ದೇವರು" (ಒಂಡ್ರೆ ಕುಲಂ ಒರುವಾನೆ ದೇವನ್) ಎಂಬ ಮಾತನ್ನು ಉಲ್ಲೇಖಿಸಿದರು.

ಕಾಮರಾಜ್ ಅವರ ಪ್ರಾಮಾಣಿಕತೆ ಮತ್ತು ಜಾತ್ಯತೀತತೆಯನ್ನು ಶ್ಲಾಘಿಸಿದ ಅವರು, ಜಾತಿ ದಬ್ಬಾಳಿಕೆಯ ವಿರುದ್ಧ ಅಂಬೇಡ್ಕರ್ ಅವರ ಕಾರ್ಯವನ್ನು ಎತ್ತಿ ತೋರಿಸಿದರು. ವೇಲುನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರಂತಹ ಐತಿಹಾಸಿಕ ವ್ಯಕ್ತಿಗಳನ್ನು ಸ್ಫೂರ್ತಿಯಾಗಿ ಉಲ್ಲೇಖಿಸಿದ ದಳಪತಿ, ತಮ್ಮ ಪಕ್ಷ ಟಿವಿಕೆ ಮಹಿಳೆಯರ ನಾಯಕತ್ವವನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.

ಭ್ರಷ್ಟಾಚಾರ ಮತ್ತು ಒಡೆದು ಆಳುವ ರಾಜಕೀಯದ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ‘ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವೇ ಎಂದು ನನಗೆ ಇನ್ನೂ ತಿಳಿದಿಲ್ಲ. ಸಮಾಜವನ್ನು ನೋಯಿಸುವ ಪ್ರಬಲ ಶಕ್ತಿ ಅದು. ಭ್ರಷ್ಟ ಆಚರಣೆಗಳು ಮತ್ತು ಕೋಮುವಾದಿ ಶಕ್ತಿಗಳು ನಮ್ಮ ಪಕ್ಷದ ಪ್ರಮುಖ ಶತ್ರುಗಳು" ಎಂದರು.

"ನಮ್ಮ ಪಕ್ಷ ಪ್ರಾಮಾಣಿಕವಾಗಿರುತ್ತದೆ ಮತ್ತು ಯಾವತ್ತೂ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲ" ಎಂದು ಭರವಸೆ ನೀಡಿದರು.

"ಸದ್ಯ ಅಸ್ತಿತ್ವದಲ್ಲಿರುವ ಯಾವುದೇ ರಾಜಕೀಯ ಗುಂಪುಗಳಿಗೆ ನಾನು ಸೇರಿಲ್ಲ. ಮತ್ತು ಸಕಾರಾತ್ಮಕ ಬದಲಾವಣೆ ಬಯಸುವವರಿಗೆ ಸಹಾಯ ಮಾಡಲು ನಾನು ರಾಜಕೀಯಕ್ಕೆ ಬಂದಿದ್ದೇನೆ" ಎಂದು 2026ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

ತಮಿಳು ಮತ್ತು ಇಂಗ್ಲಿಷ್ ದ್ವಿಭಾಷಾ ನೀತಿಯನ್ನು ಇಟ್ಟುಕೊಂಡು ಸರ್ಕಾರ ಮತ್ತು ಶಿಕ್ಷಣದಲ್ಲಿ ತಮಿಳಿಗೆ ಆದ್ಯತೆ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪ್ರಸ್ತುತ ರಾಜಕೀಯ ವ್ಯವಸ್ಥೆಯು ಜನರಿಗೆ ಹಾನಿಕಾರಕವಾಗಿದೆ ಎಂದು ಬಣ್ಣಿಸಿದ ವಿಜಯ್​, ಟಿವಿಕೆ ತನ್ನದೇ ಆದ ಗುರುತನ್ನು ಉಳಿಸಿಕೊಳ್ಳುತ್ತದೆ. ದ್ರಾವಿಡವಾದ ಮತ್ತು ತಮಿಳು ರಾಷ್ಟ್ರೀಯವಾದ ನಮ್ಮ ಕೇಂದ್ರಬಿಂದುವಾಗಿದೆ ಮತ್ತು ಎಲ್ಲರನ್ನು ಒಳಗೊಂಡಿರುವ ಜಾತ್ಯತೀತ ವಿಧಾನ ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ನನಸಾಯ್ತು ಜಗ್ಗೇಶ್ 40 ವರ್ಷಗಳ ಹಿಂದಿನ ಕನಸು: ಸಿನಿಮಾ ಇಂಡಸ್ಟ್ರಿ ಸೇವೆಗಾಗಿ 'ಜಗ್ಗೇಶ್ ಸ್ಟುಡಿಯೋಸ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.