ಕರ್ನಾಟಕ

karnataka

ETV Bharat / snippets

ಬಾಯಿ ಕ್ಯಾನ್ಸರ್​​​ನಿಂದ ಬಳಲುತ್ತಿದ್ದ ಸಿಪಿಐ ಬಾಪುಗೌಡ ಆತ್ಮಹತ್ಯೆಗೆ ಶರಣು

By ETV Bharat Karnataka Team

Published : Jul 2, 2024, 8:41 PM IST

committed suicide  CPI Bapugowda  Mouth cancer  Kalaburagi
ಸಿಪಿಐ ಬಾಪುಗೌಡ (ETV Bharat)

ಕಲಬುರಗಿ:ಸರ್ಕಲ್ ಇನಸ್ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯ ರೈಲ್ವೆ ಹಳಿ ಮೇಲೆ ನಡೆದಿದೆ.

ಬಾಪುಗೌಡ (45) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿಯಾಗಿದ್ದು, ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವೈಯರಲೆಸ್ ವಿಭಾಗದಲ್ಲಿ ಸಿಪಿಐ ಆಗಿದ್ದ ಬಾಪುಗೌಡ, ಕೆಲ ದಿನಗಳಿಂದ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕ್ಯಾನ್ಸರ್ ಕಾಯಿಲೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಅವರು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.‌

ಸದ್ಯ ಮೃತದೇಹವನ್ನು ಕಲಬುರಗಿ ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಕಾರು ಪಲ್ಟಿಯಾಗಿ ಅಯೋಧ್ಯೆ ಪ್ರವಾಸದಿಂದ ಮನೆಗೆ ಮರಳುತ್ತಿದ್ದ ಮಹಿಳೆ ಸಾವು

ABOUT THE AUTHOR

...view details