ETV Bharat / snippets

ಧರ್ಮದ್ವೇಷ ಭಾಷಣ ಆರೋಪ: ಪ್ರಾಧ್ಯಾಪಕ ಅರುಣ್ ಉಳ್ಳಾಲ್ ವಿರುದ್ಧ ಎಫ್‌ಐಆರ್‌

author img

By ETV Bharat Karnataka Team

Published : 5 hours ago

FIR
ಸಾಂದರ್ಭಿಕ ಚಿತ್ರ (ETV Bharat)

ಮಂಗಳೂರು: ಧರ್ಮದ್ವೇಷದ ಭಾಷಣ ಮಾಡಿರುವ ಆರೋಪದ ಮೇಲೆ ಪ್ರಾಧ್ಯಾಪಕ, ಧಾರ್ಮಿಕ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ವಿರುದ್ಧ ಮಂಗಳೂರಿನ ಸೆನ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಡಾ.ಅರುಣ್ ಉಳ್ಳಾಲ್ ಮಾಡಿರುವ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಧರ್ಮ ದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಇದೀಗ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, "ಧರ್ಮ ದ್ವೇಷದ ಭಾಷಣ ಮಾಡಿದ ಆರೋಪದಡಿ ಶಿಕ್ಷಕ ಡಾ.ಅರುಣ್ ಉಳ್ಳಾಲ್ ಮೇಲೆ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಅ.ಕ್ರ.ನಂ 118/2024 ಕಲಂ, 66(C) IT ACT AND 196, 351 (BNS), 2023ರಂತೆ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಲ್ ಮಾಡಿ ಒಟಿಪಿ ಕೇಳ್ತಾರೆ, ನಿಮ್ಮ ದುಡ್ಡು ಹೊಡಿತಾರೆ: ಬಾಣಂತಿಯರೇ ಎಚ್ಚರ, ಎಚ್ಚರ! - Cyber Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.