ETV Bharat / sports

ಬಾಂಗ್ಲಾ ವಿರುದ್ಧ ಟಿ20: ಭಾರತ ತಂಡದಿಂದ ಸ್ಟಾರ್​ ಆಲ್​ರೌಂಡರ್​ ಔಟ್​! - India Bangladesh T20 Series - INDIA BANGLADESH T20 SERIES

ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಭಾರತದ ಸ್ಟಾರ್​ ಆಲ್​ರೌಂಡರ್​ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗಿದೆ.

ಭಾರತ ಕ್ರಿಕೆಟ್​ ತಂಡ
ಭಾರತ ಕ್ರಿಕೆಟ್​ ತಂಡ (IANS)
author img

By ETV Bharat Sports Team

Published : Oct 6, 2024, 11:27 AM IST

ನವದೆಹಲಿ: ಗ್ವಾಲಿಯರ್​ ಮೈದಾನದಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಆಲ್​ರೌಂಡರ್ ಶಿವಂ ದುಬೆ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ.

ಬೆನ್ನು ನೋವಿನಿಂದಾಗಿ ದುಬೆ ಇಡೀ ಸರಣಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ. ಇದರ ಬೆನ್ನಲ್ಲೇ ಆಯ್ಕೆ ಸಮಿತಿ ಬದಲಿ ಆಟಗಾರನಾಗಿ ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡಿದ್ದು, ಇಂದು ಬೆಳಗ್ಗೆ ತಂಡ ಸೇರಿದ್ದಾರೆ.

ಅನುಭವಿ ಯುವ ಬ್ಯಾಟರ್ ತಿಲಕ್ ವರ್ಮಾ, 2023ರಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯೊಂದಿಗೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 16 ಟಿ20 ಪಂದ್ಯಗಳನ್ನು ಆಡಿದ್ದಾರೆ. 139.42 ಸ್ಟ್ರೈಕ್ ರೇಟ್‌ನೊಂದಿಗೆ ಈ ಸ್ವರೂಪದಲ್ಲಿ ಒಟ್ಟು 336 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಗರಿಷ್ಠ ಸ್ಕೋರ್ 55 ರನ್ ಆಗಿದೆ.

ಇಂದು ಆರಂಭಿಕರು ಯಾರು?: ಇಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ಸೂರ್ಯ ಕುಮಾರ್ ಯಾದವ್ ತಿಳಿಸಿದ್ದಾರೆ.

ತಂಡಗಳು- ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್

ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತಂಜೀದ್ ಹಸನ್ ತಮೀಮ್, ಪರ್ವೇಜ್ ಹುಸೇನ್ ಎಮೋನ್, ತೌಹಿದ್ ಹೃದಯ್, ಮಹ್ಮುದುಲ್ಲಾ, ಲಿಟ್ಟನ್ ಕುಮಾರ್ ದಾಸ್, ಜಾಕರ್ ಅಲಿ ಅನಿಕ್, ಮೆಹದಿ ಹಸನ್ ಮಿರಾಜ್, ಮೆಹದಿ ಹಸನ್, ರಿಶಾದ್ ಹುಸೇನ್, ಮುಸ್ತಫಿಜುರ್ ರಹಮನ್, ತಸ್ರಿಕಿನ್.

ಇದನ್ನೂ ಓದಿ: ಸಂಡೇ ಡಬಲ್​ ಧಮಾಕ!: ಎಂಟು ಗಂಟೆಗಳಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿರುವ ಟೀಮ್​ ಇಂಡಿಯಾ; ಎಲ್ಲಿ, ಯಾರ ಜೊತೆ? - T20 Cricket

ETV Bharat Logo

Copyright © 2024 Ushodaya Enterprises Pvt. Ltd., All Rights Reserved.