ರಾಮನ ಆದರ್ಶ ಪಾಲನೆ: ಪುತ್ರರಿಂದ ಪೋಷಕರ ಪಾದ ಪೂಜೆ-ವಿಡಿಯೋ - ವಿಜಯಪುರ
Published : Jan 23, 2024, 11:00 AM IST
ವಿಜಯಪುರ: ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ಯ ಸೋಮವಾರ ಇಲ್ಲಿನ ಶ್ರೀ ನರಸಿಂಹ ದೇವಸ್ಥಾನದಲ್ಲಿ ಶಿವಸೇನಾ ಪಕ್ಷದ ವತಿಯಿಂದ ಸಾಮೂಹಿಕವಾಗಿ ತಂದೆ, ತಾಯಿಯ ಪಾದ ಪೂಜಾ ಕಾರ್ಯಕ್ರಮ ನೆರವೇರಿತು. ಈ ಮೂಲಕ ಶ್ರೀರಾಮನ ಮೊದಲ ದೈವಿ ಆದರ್ಶವಾದ ತಂದೆ, ತಾಯಿಯ ಆಜ್ಞಾಪಾಲಕ ಮೌಲ್ಯವನ್ನು ಸಮಾಜಕ್ಕೆ ನೆನಪಿಸಿಕೊಡಲಾಯಿತು.
ಶಿವಸೇನಾ ಮುಖಂಡ ಸತೀಶ ಪಾಟೀಲ ಮಾತನಾಡಿ, "ತಂತ್ರಜ್ಞಾನದ ಈ ಯುಗದಲ್ಲಿ ಮಕ್ಕಳಿಗೆ ಕೇವಲ ವ್ಯಾವಹಾರಿಕ ಶಿಕ್ಷಣ ಸಿಗುತ್ತಿದೆ. ಆದರೆ ನೈತಿಕ ಶಿಕ್ಷಣ ಕೊರತೆ ಇದೆ. ಹೀಗಾಗಿ ತಂದೆ ತಾಯಂದಿರು ಮಕ್ಕಳ ಪ್ರೀತಿ ಕಾಣದೆ ವೃದ್ಧಾಶ್ರಮಗಳು ಅಲ್ಲಲ್ಲಿ ತಲೆಎತ್ತಿವೆ. ಮಕ್ಕಳು ಇರುವಾಗಲೇ ಈ ಪರಿಸ್ಥಿತಿ ಉದ್ಭವವಾಗುತ್ತಿರುವುದು ಖೇದಕರ ಸಂಗತಿ. ಮಕ್ಕಳು ಯಾವುದೇ ಸಂದರ್ಭದಲ್ಲೂ ತಂದೆ, ತಾಯಂದಿರಿಂದ ದೂರವಾಗಬಾರದು. ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ನಡೆ, ನುಡಿ ಅನುಸರಿಸಿಕೊಳ್ಳಬೇಕು. ಪಾದಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಜೀವಗಳು ಸಂತೋಷ ವ್ಯಕ್ತಪಡಿಸಿದ್ದು ಹೆಮ್ಮೆಯ ಸಂಗತಿ" ಎಂದರು.
ಕಾರ್ಯಕ್ರಮದಲ್ಲಿ ನೇಮಿನಾಥ ಬಾಗೇವಾಡಿ, ವಿಶ್ವನಾಥ ದೇಶಪಾಂಡೆ, ಸಾಹೇಬಗೌಡ ವಿಜಾಪುರ, ಪ್ರಶಾಂತ ಕಕ್ಕಳಮೇಲಿ, ಆನಂದ ಪಾಟೀಲ, ಶ್ರೀಧರ ಪೂಜಾರಿ, ಪ್ರಶಾಂತ ಬಿಜಾಪುರ, ಭೀಮಾಶಂಕರ, ವಿಜಯಕುಮಾರ, ಸಚೀನ ಕಾಳೆ, ಅನೀಲ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಪರಶುರಾಮ ಮಲಕಣ್ಣವರ, ಪ್ರಭು ಖೇಡಗಿ ಕುಟುಂಬದ ಹಿರಿಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಂಡ್ಯದಲ್ಲಿಯೂ ರಾಮಮಂದಿರ ಉದ್ಘಾಟನೆ, ಶಿಲ್ಪಿ ಯೋಗಿರಾಜ್ ಕೆತ್ತಿದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ