ಕಾರವಾರ (ಉತ್ತರ ಕನ್ನಡ): ಅನ್ನಭಾಗ್ಯ ಯೋಜನೆಯಡಿ ಪಡಿತರದ ಬದಲು ಡಿಬಿಟಿ ಮೂಲಕ ಜಮೆ ಮಾಡುತ್ತಿದ್ದ ಹಣ ಕಳೆದ 4 ತಿಂಗಳಿಂದ ಸ್ಥಗಿತಗೊಂಡಿದೆ. ಪರಿಣಾಮ ಜಿಲ್ಲೆಯ 2.88 ಲಕ್ಷಕ್ಕೂ ಹೆಚ್ಚು ಪಡಿತರದಾರರಿಗೆ ಪಾವತಿಯಾಗಬೇಕಿದ್ದ 69 ಕೋಟಿ ರೂ.ಗೂ ಅಧಿಕ ಹಣ ಬಾಕಿಯಾದಂತಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಪಡಿತರದಾರರಿಗೆ ಆಗಸ್ಟ್ ತಿಂಗಳಲ್ಲಿ 288,076 ಪಡಿತರದಾರರಿಗೆ 17 ಕೋಟಿ 24 ಲಕ್ಷ ರೂ. ಜಮೆ ಮಾಡಲಾಗಿತ್ತು. ಇದೀಗ ಸೆಪ್ಟೆಂಬರ್‌ನಿಂದ ಹಣ ಸ್ಥಗಿತವಾಗಿದ್ದು, ಸುಮಾರು 69 ಕೋಟಿ ರೂ.ಗೂ ಅಧಿಕ ಹಣ ಪಾವತಿಯಾಗಬೇಕಾಗಿದೆ. ಇದರೊಂದಿಗೆ 4 ತಿಂಗಳಿನಿಂದ ಪಡಿತರ ಪಡೆಯದ ಹಾಗೂ ಅಂತ್ಯೋದಯ ಪಡಿತರ ಚೀಟಿಗಳಲ್ಲಿ 4 ಸದಸ್ಯರಿಗಿಂತ ಕಡಿಮೆ ಇರುವ ಪಡಿತರದಾರರ ಸಂಖ್ಯೆ ಹೆಚ್ಚಳವಾಗಿದ್ದು, ಈವರೆಗೆ 11,014 ಪಡಿತರದಾರರ ಹಣಕ್ಕೆ ಕತ್ತರಿ ಬಿದ್ದಿದೆ ಎಂದು ವರದಿಯಾಗಿದೆ.
ಸರ್ಕಾರ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಪಡಿತರ ಅಕ್ಕಿ ಬದಲು ಹಣ ನೀಡುತ್ತಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ 20 ಸಾವಿರಕ್ಕೂ ಅಧಿಕ ಪಡಿತರದಾರರಿಗೆ ನಾನಾ ಕಾರಣಗಳಿಂದ ಹಣ ಜಮೆಯಾಗುತ್ತಿಲ್ಲ. ಅಲ್ಲದೆ ಇನ್ನೊಂದೆಡೆ ಕಳೆದ ನಾಲ್ಕು ತಿಂಗಳ ಹಣ ಅರ್ಹ ಪಡಿತರದಾರರಿಗೆ ಜಮೆಯಾಗಬೇಕಿದೆ. ಅಂತ್ಯೋದಯ ಪಡಿತರ ಚೀಟಿ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು, ಬಳಿಕ ಅಕ್ಕಿ ಬದಲಿಗೆ ಹಣ ಜಮೆ ಮಾಡಲಾಗುತ್ತಿದೆ. ಪ್ರತಿ ಕೆಜಿಗೆ 34 ರೂ.ನಂತೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 10,712 ಅಂತ್ಯೋದಯ ಹಾಗೂ 277,364 ಪಡಿತರ ಕಾರ್ಡ್ ಸೇರಿದಂತೆ ಒಟ್ಟು 288,076 ಪಡಿತರದಾರರು ಇದ್ದಾರೆ. ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ 288,076 ಪಡಿತರ ಚೀಟಿ ಮುಖ್ಯಸ್ಥರ ಖಾತೆಗೆ 17 ಕೋಟಿ 24 ಲಕ್ಷ ರೂ. ಜಮಾವಣೆಯಾಗಿತ್ತು. ಆದರೆ, ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ಅನ್ನಭಾಗ್ಯ ಹಣ ಬಂದಿಲ್ಲ. ಜಿಲ್ಲೆಯಲ್ಲಿ ಜುಲೈ 2013ರಿಂದ ಆಗಸ್ಟ್ 2024ರ ವರೆಗೆ ಒಟ್ಟು ಅಂದಾಜು 103 ಕೋಟಿ ರೂ. ಹಣವನ್ನು ಪಡಿತರ ಚೀಟಿದಾರರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪಡಿತರ ಕಾರ್ಡ್ಗಳ ಪೈಕಿ ಅಂತ್ಯೋದಯ ಪಡಿತರ ಚೀಟಿಗಳಲ್ಲಿ 4 ಸದಸ್ಯರಿಗಿಂತ ಕಡಿಮೆ ಇರುವ ಹಾಗೂ ಸತತ ಮೂರು ತಿಂಗಳು ಆಹಾರ ಧಾನ್ಯಗಳನ್ನು ಪಡೆಯದವರಿಗೆ ಹಣ ಜಮಾವಣೆ ಕಡಿತ ಮಾಡಲಾಗಿದೆ. ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಸಮಸ್ಯೆಯಿಂದ ಇನ್ನೂ ಹಣ ಜಮಾವಣೆ ಸಾಧ್ಯವಾಗಿಲ್ಲ. ಪಡಿತರ ಚೀಟಿಗಳ ಮುಖ್ಯಸ್ಥರ ಬ್ಯಾಂಕ್ ಖಾತೆ ಹೊಂದಿಲ್ಲದ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ, ಬ್ಯಾಂಕ್‌ನಲ್ಲಿ ಇಕೆವೈಸಿ ಮಾಡಿಸದ, ಆಧಾರ್ ಕಾರ್ಡ್ನಲ್ಲಿ ಹೆಸರು ಹೊಂದಾಣಿಕೆಯಾಗದ, ಕುಟುಂಬ ಮುಖ್ಯಸ್ಥರನ್ನು ಹೊಂದಿಲ್ಲದ 8,993 ಪಡಿತರದಾರರ ಮುಖ್ಯಸ್ಥರಿಗೆ ಹಣ ಸಂದಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೂ 3 ತಿಂಗಳ ಪಡಿತರ ಪಡೆಯದ ಹಾಗೂ ಎಎವೈ ಪಡಿತರ ಚೀಟಿಯಲ್ಲಿ ನಾಲ್ಕು ಸದಸ್ಯರಿಗಿಂತ ಕಡಿಮೆ ಇರುವ 11,014 ಕುಟುಂಬಗಳ ಮುಖ್ಯಸ್ಥರ ಖಾತೆಗೆ ಹಣ ಜಮಾವಣೆ ಸ್ಥಗಿತವಾಗಿದೆ.
''ಜಿಲ್ಲೆಯಲ್ಲಿ ಈವರೆಗೆ 103 ಕೋಟಿ ಹಣ ಬಿಡುಗಡೆಯಾಗಿದ್ದು, ಆ ಹಣವನ್ನು ಪಡಿತರದಾರರ ಖಾತೆಗೆ ಜಮಾ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆಯಾಗಿದ್ದು ಅದನ್ನು ಕೂಡ ಪಡಿತರದಾರರಿಗೆ ನೀಡಲಾಗುತ್ತಿದೆ. ಅಕ್ಟೋಬರ್ ತಿಂಗಳಿನ ಪಡಿತರದಾರರ ಮಾಹಿತಿ ಹಾಗೂ ದಾಖಲಾತಿಗಳು ಸಲ್ಲಿಕೆಯಾಗಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಜಿಲ್ಲೆಯಲ್ಲಿ 288076 ಪಡಿತರದಾರರಿದ್ದು ಪ್ರತಿ ತಿಂಗಳು ಸುಮಾರು 17 ಕೋಟಿ ಹಣ ಪಡಿತರದಾರರಿಗೆ ನೀಡಲಾಗುತ್ತಿದೆ. ಇದರಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗಲಿದೆ. ಇನ್ನುಳಿದ ತಿಂಗಳ ಮಾಹಿತಿಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದು, ಹಣ ಬಿಡುಗಡೆ ಬಾಕಿಯಿದೆ'' ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರೀಯಾ ಮಾಹಿತಿ ನೀಡಿದ್ದಾರೆ.
ಕೆಲವು ಕಾರಣಾಂತರಗಳಿಂದ ಪ್ರತಿ ಜಿಲ್ಲೆಯಲ್ಲಿ ಪಡಿತರದಾರರಿಗೆ ಹಣ ಜಾಮಾವಣೆ ಆಗುವುದು ಒಂದೆರಡು ತಿಂಗಳು ಹೆಚ್ಚು ಕಡಿಮೆ ಆಗುವುದು ಸಾಮಾನ್ಯ. ಉತ್ತರ ಕನ್ನಡ ಜಿಲ್ಲೆಯ ಪಡಿತರದಾರರಿಗೆ ಪಾವತಿಯಾಗಬೇಕಿದ್ದ ಹಣವನ್ನು ಆದಷ್ಟು ಬೇಗ ಜಮಾ ಮಾಡುವ ವ್ಯವಸ್ಥೆ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ