ಬಹುನಿರೀಕ್ಷಿತ 'ಜುರಾಸಿಕ್ ವರ್ಲ್ಡ್ : ರೀಬರ್ತ್' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಐಕಾನಿಕ್ ಡೈನೋಸಾರ್ ಸಾಹಸಗಾಥೆಯ ಮುಂದಿನ ಅಧ್ಯಾಯದ ಟ್ರೇಲರ್ಗಾಗಿ ಕೋಟ್ಯಂತರ ಸಿನಿಪ್ರಿಯರು ಕಾದು ಕುಳಿತಿದ್ದರು. ಫೈನಲಿ, ಜುಲೈ 2 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಟ್ರೇಲರ್ ಇಂದು ರಿಲೀಸ್ ಆಗಲಿದೆ. ಫ್ರಾಂಚೈಸಿಯ ಏಳನೇ ಭಾಗವು ಕೊನೆಯ ಭಾಗ ಬಿಡುಗಡೆಯಾಗಿ 3 ವರ್ಷಗಳ ನಂತರ ಬರುತ್ತಿದೆ. ಟ್ರೇಲರ್ ಆ್ಯಕ್ಷನ್ನಿಂದ ತುಂಬಿದ್ದು, ಜಬರ್ದಸ್ತ್ ಆಗಿದೆ. ಟ್ರೇಲರ್ ಜೊತೆಗೆ, ಚಿತ್ರದ ನಿರ್ಮಾಪಕರು ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದಾರೆ. ಸೈನ್ಸ್ ಫಿಕ್ಷನ್ ಆ್ಯಕ್ಷನ್ ಸಿನಿಮಾ ಜುಲೈ 2ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ಪೂರೈಸುವ ಭರವಸೆ ನೀಡಿದೆ.
'ಜುರಾಸಿಕ್ ವರ್ಲ್ಡ್ ರೀಬರ್ತ್' ಚಿತ್ರದ ಟ್ರೇಲರ್‌ನಲ್ಲಿ ಡೈನೋಸಾರ್‌ಗಳು ಅಳಿವಿನಂಚಿನಲ್ಲಿವೆ ಎಂಬುದನ್ನು ತೋರಿಸಲಾಗಿದೆ. ಡೈನೋಸಾರ್ ಡಿಎನ್ಎ ಸಂಗ್ರಹಿಸಲು ಜನರಿಗೆ ಇರುವ ಕೊನೆಯ ಅವಕಾಶ ಇದು. ಟ್ರೇಲರ್‌ನ ಆರಂಭದಲ್ಲಿ, ಸ್ಕಾರ್ಲೆಟ್ ಜೋಹಾನ್ಸನ್‌ಗೆ ಜೀವಂತ ಡೈನೋಸಾರ್‌ನ ಡಿಎನ್‌ಎ ಸಂಗ್ರಹಿಸುವ ಕೆಲಸವನ್ನು ನೀಡಲಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಡಾ. ಹೆನ್ರಿ ಲೂಮಿಸ್ ಮತ್ತು ಡಂಕನ್ ಕಿನ್‌ಕೈಡ್ ಕೂಡಾ ಅವರನ್ನು ಬೆಂಬಲಿಸುತ್ತಾರೆ. ಚಿತ್ರದಲ್ಲಿ ಡೈನೋಸಾರ್‌ಗಳು ಮತ್ತು ಮನುಷ್ಯರ ನಡುವೆ ಅದ್ಭುತ ಆಕ್ಷನ್ ದೃಶ್ಯಗಳು ಇರಲಿದ್ದು, ಡೈನೋಸಾರ್‌ಗಳ ಘರ್ಜನೆ ಅದ್ಭುತ ಸಿನಿಮೀಯ ಅನುಭವ ಒದಗಿಸುವ ಭರವಸೆ ಇದೆ. ಈ ಚಿತ್ರ ಜುಲೈ 2, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: 'ವಿದಾಮುಯಾರ್ಚಿ': ನಟ ಅಜಿತ್ ಕುಮಾರ್ ವೃತ್ತಿಜೀವನದಲ್ಲೇ ಬಿಗ್ ಹಿಟ್?
ಜುರಾಸಿಕ್ ವರ್ಲ್ಡ್ ಫ್ರಾಂಚೈಸಿಯ ಮೊದಲ ಚಿತ್ರ 31 ವರ್ಷಗಳ ಹಿಂದೆ ತೆರೆಗಪ್ಪಳಿಸಿತ್ತು. 'ಜುರಾಸಿಕ್ ಪಾರ್ಕ್' 1993ರಲ್ಲಿ ಬಿಡುಗಡೆಯಾಯಿತು ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಅದರ ನಂತರ 'ದಿ ಲಾಸ್ಟ್ ವರ್ಲ್ಡ್: ಜುರಾಸಿಕ್ ಪಾರ್ಕ್' (1997), 'ಜುರಾಸಿಕ್ ಪಾರ್ಕ್ 3' (2001), 'ಜುರಾಸಿಕ್ ವರ್ಲ್ಡ್' (2015), 'ಜುರಾಸಿಕ್ ವರ್ಲ್ಡ್: ಫಾಲೆನ್ ಕಿಂಗ್‌ಡಮ್' (2018), 'ಜುರಾಸಿಕ್ ವರ್ಲ್ಡ್ ಡೊಮಿನಿಯನ್' (2022) ಬಿಡುಗಡೆಯಾದವು. ಈಗ ಜುರಾಸಿಕ್ ವರ್ಲ್ಡ್ ಫ್ರಾಂಚೈಸಿಯ 7ನೇ ಭಾಗ 'ಜುರಾಸಿಕ್ ವರ್ಲ್ಡ್ ರೀಬರ್ತ್' ಬಿಡುಗಡೆ ಹೊಸ್ತಿಲಿನಲ್ಲಿದೆ.
ಇದನ್ನೂ ಓದಿ: ಅಮೀರ್ ಖಾನ್ ಪುತ್ರ ಜುನೈದ್ 'ಲವ್ಯಾಪ‘ ಈವೆಂಟ್ನಲ್ಲಿ ಶಾರುಖ್, ಸಲ್ಮಾನ್: ಖಾನ್ಸ್ ವಿಡಿಯೋ ಇಲ್ಲಿದೆ
ಮೊಸಾಸೌರ್, ವೆಲೋಸಿರಾಪ್ಟರ್, ಸ್ಪೈನೋಸಾರಸ್ನಂತಹ ಡೈನೋಸಾರ್ ಪ್ರಭೇದಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿವೆ. ಚಿತ್ರವನ್ನು ಗ್ಯಾರೆತ್ ಎಡ್ವರ್ಡ್ಸ್ ನಿರ್ದೇಶಿಸಿದ್ದು, ಸ್ಕಾರ್ಲೆಟ್ ಜೋಹಾನ್ಸನ್, ಜೊನಾಥನ್ ಬೈಲಿ, ರೂಪರ್ಟ್ ಫ್ರೆಂಡ್, ಮಹೆರ್ಷಲಾ ಅಲಿ, ಮ್ಯಾನುಯೆಲ್ ಗಾರ್ಸಿಯಾ-ರುಲ್ಫೊ, ಲೂನಾ ಬ್ಲೇಸ್, ಎಡ್ ಸ್ಕ್ರೈನ್, ಡೇವಿಡ್ ಐಕೊನೊ ಸೇರಿ ಮೊದಲಾದ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.