ಕರ್ನಾಟಕ

karnataka

ETV Bharat / videos

ವಯನಾಡು ದುರಂತವನ್ನು ಕಂಡು ಮರುಗಿದ ಪ್ರಧಾನಿ ಮೋದಿ: ಹಾನಿ ಸ್ಥಳದಲ್ಲಿ ನಡೆದಾಡಿ ಮಾಹಿತಿ ಸಂಗ್ರಹ - Narendra Modi In Wayanad

By ETV Bharat Karnataka Team

Published : Aug 10, 2024, 8:59 PM IST

ವಯನಾಡು(ಕೇರಳ): ಭೂ ಕುಸಿತಕ್ಕೆ ತುತ್ತಾಗಿ ಜೀವ, ಆಸ್ತಿ ಹಾನಿಗೀಡಾಗಿರುವ ಕೇರಳದ ವಯನಾಡಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊದಲು ಭೂಕುಸಿತ ಪ್ರದೇಶವನ್ನು ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ದುರಂತದ ಸ್ಥಳದಲ್ಲಿ ನಡೆದುಕೊಂಡು ಸಾಗಿದ ಪ್ರಧಾನಿ, ಭಾರತೀಯ ಸೇನೆ ನಿರ್ಮಾಣ ಮಾಡಿರುವ 190 ಅಡಿ ಉದ್ದದ ಬೈಲಿ ಸೇತುವೆ ಮೇಲೆ ನಡೆದು ಸೇನಾ ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹಿಸಿದರು.

ಇದಾದ ಬಳಿಕ ಮೆಪ್ಪಾಡಿಯಲ್ಲಿನ ನಿರಾಶ್ರಿತ ಶಿಬಿರಕ್ಕೆ ತೆರಳಿ ದುರಂತದಲ್ಲಿ ಗಾಯಗೊಂಡವರು ಮತ್ತು ಆಶ್ರಯ ಪಡೆದ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಮತ್ತು ಧೈರ್ಯ ತುಂಬಿದರು. ಸಂತ್ರಸ್ತರ ಅಹವಾಲುಗಳನ್ನು, ಸಂಕಟವನ್ನು ಕಾಳಜಿಯಿಂದ ಆಲಿಸಿದರು.

ಭೂ ಕುಸಿತದಿಂದ ಹಾನಿಗೊಳಗಾದ ಕಲಪೆಟ್ಟ ಶಾಲೆಗೆ ಭೇಟಿ ನೀಡಿದರು. ಈ ವೇಳೆ ರಾಜ್ಯಪಾಲ ಅರೀಫ್​ ಮೊಹಮ್ಮದ್​ ಖಾನ್​, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ಕೇಂದ್ರ ಸಚಿವ ಸುರೇಶ್​ ಗೋಪಿನಾಥ್​, ಕೇಂದ್ರ ತಂಡ ಜೊತೆಗಿದ್ದರು. ಕೊನೆಯಲ್ಲಿ ಮುಖ್ಯಮಂತ್ರಿ, ರಾಜ್ಯಪಾಲ, ಇತರೆ ಅಧಿಕಾರಿಗಳೊಂದಿಗೆ ಅವರು ಉನ್ನತ ಮಟ್ಟದ ಸಭೆ ನಡೆಸಿದರು. ಪುನರ್ವಸತಿ ಮತ್ತು ರಕ್ಷಣಾ ಕಾರ್ಯಕ್ಕೆ 2 ಸಾವಿರ ಕೋಟಿ ಆರ್ಥಿಕ ಸಹಾಯವನ್ನು ಕೇಂದ್ರದಿಂದ ಕೇರಳ ಸಿಎಂ ಕೋರಿದ್ದಾರೆ.

ಇದನ್ನೂ ಓದಿ; 'ಘಟನೆಯಲ್ಲಿ ಎಷ್ಟು ಮಕ್ಕಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ'; ಗದ್ಗದಿತರಾದ ಪ್ರಧಾನಿ - Modi visit disaster affected areas

ABOUT THE AUTHOR

...view details