ಕರ್ನಾಟಕ

karnataka

ETV Bharat / videos

ರಾಂಗ್​ ಸೈಡ್​ನಿಂದ ಬಂದು ಬೈಕ್​ಗೆ​ ಡಿಕ್ಕಿ ಹೊಡೆದ ಕಾರು: ವಿಡಿಯೋ ನೋಡಿ - Horrible accident

By ETV Bharat Karnataka Team

Published : Sep 20, 2024, 7:37 PM IST

ಗುರುಗ್ರಾಮ(ಹರಿಯಾಣ): ಕಾರು ಚಾಲಕನೊಬ್ಬ ರಾಂಗ್ ಸೈಡ್​ನಲ್ಲಿ ಬಂದು ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.  ಮಾಹಿತಿ ಪ್ರಕಾರ, ಸೆ.15ರಂದು ಬೆಳಗ್ಗೆ 7 ಗಂಟೆಗೆ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಬೈಕ್ ಸವಾರರ ಗುಂಪೊಂದು ಹೋಗುತ್ತಿತ್ತು. ಈ ವೇಳೆ, ಅತಿವೇಗದಲ್ಲಿ ರಾಂಗ್ ಸೈಡ್ ನಿಂದ ಬಂದ ಮಹೀಂದ್ರಾ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಹಿಂದೆ ಮತ್ತೊಂದು ಬೈಕ್​ನಲ್ಲಿ ಬರುತ್ತಿದ್ದ ಯುವಕರ ಗೋಪ್ರೊ ಕ್ಯಾಮೆರಾದಲ್ಲಿ ಈ ಅಪಘಾತದ ಭಯಾನಕ ದೃಶ್ಯ ಸೆರೆ ಹಿಡಿದಿದೆ.

ಸದ್ಯ ಕಾರು ಸವಾರನನ್ನು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೃತನ ತಾಯಿ ಪ್ರತಿಕ್ರಿಯಿಸಿ, ನನ್ನ ಮಗ ಸಾವನ್ನಪ್ಪಿದ್ದಾನೆ. ಆದರೆ ಆರೋಪಿಯನ್ನು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪೊಲೀಸರು ಮತ್ತು ವ್ಯವಸ್ಥೆ ನಮಗೆ ಏಕೆ ಸಹಾಯ ಮಾಡುತ್ತಿಲ್ಲ?. ನನ್ನ ಏಕೈಕ ಬೇಡಿಕೆ ಎಂದರೆ ನನ್ನ ಮಗನಿಗೆ ನ್ಯಾಯ ಸಿಗಬೇಕು. ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಆದರೆ ಆತ (ಆರೋಪಿ) ಆ ರಾತ್ರಿ ನಿಶ್ಚಿಂತೆಯಿಂದ ಮಲಗಿದ್ದೇಕೆ? ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ಸಿಎನ್‌ಜಿ ಕಾರು ಅಗ್ನಿಗಾಹುತಿ: ಚಾಲಕ ಪಾರು - CNG Car Caught Fire

ABOUT THE AUTHOR

...view details