ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬರ್ತಡೇ : ದೇವಾಲಯದಲ್ಲಿ ವಿಶೇಷ ಪೂಜೆ - ರಾಘವೇಂದ್ರ ಸ್ವಾಮಿಗಳ ಮಠ
Published : Feb 27, 2024, 7:57 PM IST
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಇಂದು 81ನೇ ವಸಂತಕ್ಕೆ ಕಾಲಿಟ್ಟರು. ಹುಟ್ಟು ಹಬ್ಬದ ಸಲುವಾಗಿ ಶಿಕಾರಿಪುರದ ಮಾಳೇರ ಕೇರಿಯ ಮನೆಯಿಂದ ತಮ್ಮ ಆರಾಧ್ಯ ದೈವ ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶಿಕಾರಿಪುರಕ್ಕೆ ಭೇಟಿ ನೀಡಿದಾಗಲೆಲ್ಲಾ ಯಡಿಯೂರಪ್ಪನವರು ಹುಚ್ಚರಾಯ ದೇವಾಲಯಕ್ಕೆ ಭೇಟಿ ನೀಡುವುದು ಸಾಮಾನ್ಯ. ಇಂದು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಹುಚ್ಚರಾಯ ದೇವಾಲಯದ ಅರ್ಚಕರು ವಿಶೇಷ ಪೂಜೆ ನಡೆಸಿ, ಯಡಿಯೂರಪ್ಪನವರಿಗೆ ಫಲಪುಷ್ಪ, ದೇವರ ಪ್ರಸಾದ ನೀಡಿ ಆಶೀರ್ವದಿಸಿದರು.
ಈ ದೇವಾಲಯದ ನಂತರ ರಾಘವೇಂದ್ರ ಸ್ವಾಮಿಗಳ ಮಠಕ್ಕೂ ಭೇಟಿ ನೀಡಿ, ಗುರು ರಾಘವೇಂದ್ರ ದೇವರ ದರ್ಶನ ಪಡೆದರು. ಈ ವೇಳೆ ಸಂಸದ ಬಿ. ವೈ ರಾಘವೇಂದ್ರ ದಂಪತಿ, ಯಡಿಯೂರಪ್ಪನವರ ಪುತ್ರಿ ಅರುಣಾದೇವಿ ಹಾಗೂ ಮೊಮ್ಮಕ್ಕಳು ಪೂಜೆಯಲ್ಲಿ ಭಾಗಿಯಾಗಿದ್ದರು. ಇಂದು ಬಿಎಸ್ವೈ ಅವರು ಶಿಕಾರಿಪುರದಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರನ್ನು ತಮ್ಮ ನಿವಾಸದಲ್ಲಿಯೇ ಭೇಟಿ ಮಾಡಿದರು.
ಇದನ್ನೂ ಓದಿ : 82ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ: ಅಮಿತ್ ಶಾ ಸೇರಿ ಪಕ್ಷದ ನಾಯಕರಿಂದ ಶುಭಾಶಯ