ಖ್ಯಾತ ಉದ್ಯಮಿ, ಸಾಮಾಜಿಕ ಪ್ರವರ್ತಕ ರತನ್ ಟಾಟಾ ಅವರಿಂದ ಮತ ಹಕ್ಕು ಚಲಾವಣೆ: ವಿಡಿಯೋ - Ratan Tata - RATAN TATA
Published : May 20, 2024, 3:41 PM IST
ಮುಂಬೈ: 2024ರ ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು ನಡೆಯುತ್ತಿದೆ. 8 ರಾಜ್ಯಗಳ 49 ಲೋಕಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 36.73 ಮತದಾನವಾಗಿದೆ.
ಟಾಟಾ ಸಮೂಹದ ಮಾಜಿ ಅಧ್ಯಕ್ಷ, ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ದಕ್ಷಿಣ ಮುಂಬೈನಲ್ಲಿ ತಮ್ಮ ಮತ ಹಕ್ಕನ್ನು ಚಲಾಯಿಸಿದರು. ಜೊತೆಗೆ ಶಾಸಕ ಅಸ್ಲಂ ಶೇಖ್ ಅವರೂ ತಮ್ಮ ಮತ ಹಕ್ಕನ್ನು ಚಲಾಯಿಸಿದರು.
ಇಂದು ನಡೆಯುತ್ತಿರುವ 8 ರಾಜ್ಯಗಳ ಪೈಕಿ ಈವರೆಗೂ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಶೇಕಡಾ 27.78 ರಷ್ಟು ಜನರು ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಲಡಾಖ್ನಲ್ಲಿ ಅತ್ಯಧಿಕ ಎಂದರೆ ಶೇ. 52.02 ಮತದಾನ ಪ್ರಮಾಣ ದಾಖಲಾಗಿದೆ.
ಮತದಾನಕ್ಕೂ ಒಂದು ದಿನ ಮುಂಚೆ ಅಂದರೆ ಮೇ 19 ರಂದು ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಮತದಾನ ಮಾಡಲು ಮುಂಬೈ ಜನರಲ್ಲಿ ಕೋರಿದ್ದರು. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಜಾಗೃತಿ ಸಂದೇಶ ಹಂಚಿಕೊಂಡಿದ್ದ ಅವರು, ಮೇ 20 ರಂದು 5ನೇ ಹಂತದ ಮತದಾನ ನಡೆಯಲಿದೆ. ಮಹಾರಾಷ್ಟ್ರದ ಎಲ್ಲ ಜನರು ಜವಾಬ್ದಾರಿಯುತವಾಗಿ ಮತದಾನ ಮಾಡಿ ಎಂದು ಕರೆ ನೀಡಿದ್ದರು.
ಮುಂಬೈನ 6 ಲೋಕಸಭಾ ಸ್ಥಾನಗಳಾದ ಮುಂಬೈ ಉತ್ತರ, ಮುಂಬೈ ವಾಯುವ್ಯ, ಮುಂಬೈ ಈಶಾನ್ಯ, ಮುಂಬೈ ಉತ್ತರ ಸೆಂಟ್ರಲ್, ಮುಂಬೈ ದಕ್ಷಿಣ ಮತ್ತು ಮುಂಬೈ ದಕ್ಷಿಣ ಸೆಂಟ್ರಲ್ ಸೇರಿದಂತೆ ಧುಲೆ, ದಿಂಡೋರಿ, ನಾಸಿಕ್, ಪಾಲ್ಘರ್, ಭಿವಂಡಿ, ಕಲ್ಯಾಣ್, ಥಾಣೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಇದನ್ನೂ ಓದಿ: 1 ಗಂಟೆಯವರೆಗೆ 36.73% ಮತದಾನ; ಮಹಾರಾಷ್ಟ್ರದಲ್ಲಿ ಅತಿ ಕಡಿಮೆ, ಲಡಾಖ್ನಲ್ಲಿ ಅತಿ ಹೆಚ್ಚು - Voting Turnout