ಕರ್ನಾಟಕ

karnataka

ಬೋನಾಳ ಉತ್ಸವ: ಕೋಳಿಗೆ ನೇಲ್ ಪಾಲಿಶ್, ಕಿವಿಯೋಲೆ, ಕೊರಳಿಗೆ ಮದ್ಯದ ಬಾಟಲಿ! - Cock Makeover In Bonalu Festival

By ETV Bharat Karnataka Team

Published : Aug 12, 2024, 4:29 PM IST

ಕೋಳಿಗೆ ವಿಶೇಷ ಅಲಂಕಾರ (ETV Bharat)

ಹೈದರಾಬಾದ್‌ (ತೆಲಂಗಾಣ): ತೆಲುಗು ನಾಡಿನ ಪ್ರಸಿದ್ಧ ಜಾನಪದ ಆಚರಣೆ ಬೋನಾಳ ಉತ್ಸವದಲ್ಲಿ ಭಕ್ತರೊಬ್ಬರು ದೇವಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ಮಹಬೂಬಾಬಾದ್ ಜಿಲ್ಲೆಯ ಕೇಸಮುದ್ರಂ ತಾಲೂಕು ಕೇಂದ್ರದಲ್ಲಿ ಭಾನುವಾರ ಸಂಜೆ ಮುತ್ಯಾಲಮ್ಮ ದೇವಿಗೆ ಬೋನಾಳ ಅರ್ಪಿಸುವ ವೇಳೆ ಲಕ್ಷ್ಮೀನಗರದ ತೊಡೇಟಿ ವೆಂಕಟೇಶ್ವರಲು ಕೋಳಿಯನ್ನು ಮಧುಮಗಳಂತೆ ರೆಡಿ ಮಾಡಿದ್ದರು.

ಕೋಳಿಯ ಕಾಲ್ಬೆರಳಿಗೆ ನೇಲ್ ಪಾಲಿಶ್ ಹಚ್ಚಿದ್ದರು. ಕಿವಿಗೆ ಓಲೆ ಹಾಕಿದ್ದರು. ಅಷ್ಟೇ ಅಲ್ಲ, ಕೋಳಿಯ ಕೊರಳಿಗೆ ಮದ್ಯದ ಬಾಟಲಿ ಕಟ್ಟಿದ್ದರು. ನಂತರ ಡೊಳ್ಳಿನೊಂದಿಗೆ ಮೆರವಣಿಗೆ ಗ್ರಾಮದ ಮುತ್ಯಾಲಮ್ಮ ದೇವಸ್ಥಾನ ತಲುಪಿತು.

ಕೋಳಿಯನ್ನು ಮಧುಮಗಳಂತೆ ಅಲಂಕರಿರುವುದು ಎಲ್ಲರ ಗಮನ ಸೆಳೆಯಿತು. ಯುವಕರು ಕೋಳಿಯೊಂದಿಗೆ ಸೆಲ್ಫಿ ಮತ್ತು ಫೋಟೋಗಳನ್ನು ತೆಗೆದುಕೊಂಡರು. 

ಈ ಕುರಿತು ಭಕ್ತ ವೆಂಕಣ್ಣ ಮಾತನಾಡಿ, "ಕಳೆದ ಕೆಲವು ವರ್ಷಗಳಿಂದ ಪ್ರತಿ ಬೋನಾಳ ಹಬ್ಬಕ್ಕೂ ಕೋಳಿಯನ್ನು ಹೀಗೆ ಅಲಂಕರಿಸುತ್ತಿದ್ದೇವೆ" ಎಂದರು. ಸದ್ಯ ವಿಶೇಷವಾಗಿ ಅಲಂಕರಿಸಿರುವ ಕೋಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಇಲಾಖೆಗೆ 5 ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸೇರ್ಪಡೆ - Royal Enfield Bikes To Police Dept 

ABOUT THE AUTHOR

...view details