ETV Bharat / education-and-career

ನಾವ್​ ಯಾರಿಗೇನು ಕಮ್ಮಿಯಿಲ್ಲ: ಐಐಟಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಹೆಚ್ಚಳ - Increase Girls Admitted to IITs - INCREASE GIRLS ADMITTED TO IITS

ಮಹಿಳೆಯರು ಈಗ ಎಲ್ಲ ಕ್ಷೇತ್ರಗಳನ್ನು ಆಕ್ರಮಿಸುತ್ತಿದ್ದಾರೆ. ಎಕ್ಸಾಂನಲ್ಲಿ ಮುಂದಿರುವಂತೆ ಐಐಟಿ ಪ್ರವೇಶದಲ್ಲೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ವರದಿಯೊಂದು ಐಐಟಿಗಳಿಂದ ಹೊರ ಬಿದ್ದಿದೆ. ಅದೇನು ವರದಿ ತಿಳಿದುಕೊಳ್ಳೋಣ.

Increase in Percentage of Girls Admitted to IITs: 3,495 Seats Out of 17,695 Filled by Girls
ನಾವ್​ ಯಾರಿಗೇನು ಕಮ್ಮಿಯಿಲ್ಲ: ಐಐಟಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಹೆಚ್ಚಳ (ETV Bharat (ಸಾಂಕೇತಿಕ ಚಿತ್ರ))
author img

By ETV Bharat Karnataka Team

Published : Sep 17, 2024, 4:02 PM IST

ಹೈದರಾಬಾದ್: ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ಪ್ರವೇಶ ಪಡೆಯುವ ಬಾಲಕಿಯರ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಹೆಚ್ಚಳವಾಗಿದೆ. JEE ಅಡ್ವಾನ್ಸ್ಡ್-2024ರ ಜಂಟಿ ಅನುಷ್ಠಾನ ಸಮಿತಿಯ ಇತ್ತೀಚಿನ ವರದಿಯ ಪ್ರಕಾರ, 23 IIT ಗಳಲ್ಲಿ ಲಭ್ಯವಿರುವ 17,695 ಸೀಟುಗಳಲ್ಲಿ ಬರೋಬ್ಬರಿ 3,495 ಹುಡುಗಿಯರು ಪ್ರವೇಶ ಪಡೆದುಕೊಂಡಿದ್ದಾರೆ. ಇದು ಒಟ್ಟು ಪ್ರವೇಶದ ಶೇ 19.75ರಷ್ಟಾಗಿದೆ. ಕಳೆದ ವರ್ಷ ಶೇ 19.70 ರಷ್ಟು ವಿದ್ಯಾರ್ಥಿನಿಯರು ಐಐಟಿಗೆ ಪ್ರವೇಶ ಪಡೆದುಕೊಂಡಿದ್ದರು. ಈ ವರ್ಷ ಆ ಪ್ರಮಾಣ 0.5ರಷ್ಟು ಹೆಚ್ಚಳವಾದಂತಾಗಿದೆ.

ವರದಿಯ ಪ್ರಮುಖ ಅಂಶಗಳು:

  • ಒಟ್ಟು ಸೀಟುಗಳು: ದೇಶದಲ್ಲಿ ಒಟ್ಟು 23 ಐಐಟಿಗಳು ಇದ್ದು, ಇದರಲ್ಲಿ 3,566 ಸೂಪರ್‌ನ್ಯೂಮರರಿ ಸೀಟುಗಳನ್ನು ಒಳಗೊಂಡಂತೆ 17,760 ಸೀಟುಗಳಿವೆ. ಇವುಗಳಲ್ಲಿ 17,695 ಭರ್ತಿಯಾಗಿದ್ದು, 3,495 ಸ್ಥಾನಗಳನ್ನು ಹುಡುಗಿಯರೇ ಆಕ್ರಮಿಸಿಕೊಂಡಿದ್ದಾರೆ.
  • ಜೆಇಇ ಅಡ್ವಾನ್ಸ್ಡ್ ಭಾಗವಹಿಸುವಿಕೆ ಪ್ರಮಾಣ: ಜೆಇಇ ಅಡ್ವಾನ್ಸ್ಡ್-2024 ಗೆ ಅರ್ಹತೆ ಪಡೆದ 2,50,284 ಅಭ್ಯರ್ಥಿಗಳಲ್ಲಿ 1,80,200 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
  • ಕೌನ್ಸೆಲಿಂಗ್ ಡೇಟಾ: ಜಂಟಿ ಸೀಟು ಹಂಚಿಕೆ ಪ್ರಾಧಿಕಾರ- JoSAA ಕೌನ್ಸೆಲಿಂಗ್‌ಗೆ ಅರ್ಹರಾಗಿರುವ 48,248 ಅಭ್ಯರ್ಥಿಗಳಲ್ಲಿ, 7,964 ಹುಡುಗಿಯರಿದ್ದಾರೆ. ಶೇಕಡಾವಾರು ಹೇಳುವುದಾದರೆ ಅವರ ಸಂಖ್ಯೆ ಒಟ್ಟು ಶೇ 16.50ರಷ್ಟಿದೆ. ಇದು ಕಳೆದ ವರ್ಷದ ಶೇ 17.22 (43,596 ರಲ್ಲಿ 7,509)ರಷ್ಟಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ.

ಅತಿ ಹೆಚ್ಚು ವಿದ್ಯಾರ್ಥಿನಿಯರಿರುವ ಸಂಸ್ಥೆಗಳು:

  • ಐಐಟಿ ಖರಗ್‌ಪುರದಲ್ಲಿ ಗರಿಷ್ಠ ಸಂಖ್ಯೆಯ ಹುಡುಗಿಯರು ಅಂದರೆ 363 ಜನರಿದ್ದಾರೆ. ಇನ್ನು ಐಐಟಿ ಹೈದರಾಬಾದ್ ನಲ್ಲಿ 120 ಮತ್ತು ಐಐಟಿ ತಿರುಪತಿಯಲ್ಲಿ 50 ವಿದ್ಯಾರ್ಥಿನಿಯರಿದ್ದಾರೆ.
  • ಅಗ್ರ ಶ್ರೇಯಾಂಕಿತರ ಆದ್ಯತೆ ಯಾವುದು?: ಟಾಪ್ 1,000 ರ‍್ಯಾಂಕರ್‌ಗಳಲ್ಲಿ ಹೆಚ್ಚಿನವರು ಐಐಟಿ ಬಾಂಬೆ (246 ವಿದ್ಯಾರ್ಥಿಗಳು), ಐಐಟಿ ದೆಹಲಿ (204), ಮತ್ತು ಐಐಟಿ ಮದ್ರಾಸ್ (128) ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇತರ ಉನ್ನತ ಸಂಸ್ಥೆಗಳಲ್ಲಿ ಐಐಟಿ ಕಾನ್ಪುರ (117), ಖರಗ್‌ಪುರ (82), ಮತ್ತು ಹೈದರಾಬಾದ್ (41) ಸೇರಿವೆ.
  • ಐಐಟಿಗೆ ಪ್ರವೇಶಿಸುವ ಹುಡುಗಿಯರ ಶೇಕಡಾವಾರು ಪ್ರಮಾಣದಲ್ಲಿ ಈ ವರ್ಷ ಸ್ವಲ್ಪ ಹೆಚ್ಚಳ ಕಂಡು ಬಂದಿದೆ. ಈ ಉನ್ನತ-ಶ್ರೇಣಿಯ ಸಂಸ್ಥೆಗಳಲ್ಲಿ ಹೆಚ್ಚು ಲಿಂಗ ಸಮತೋಲನದ ಕಡೆಗೆ ಕ್ರಮೇಣ ಬದಲಾವಣೆ ಕಂಡು ಬರುತ್ತಿದೆ. ಆದಾಗ್ಯೂ ಅರ್ಹ ಹುಡುಗಿಯರ ಒಟ್ಟಾರೆ ಸಂಖ್ಯೆಯು ಅಲ್ಪ ಇಳಿಕೆ ಕಂಡಿದೆ.

ಇದನ್ನು ಓದಿ: ಎಚ್​ಎಎಲ್​ನಲ್ಲಿ ಟ್ರೇಡ್ ಅಪ್ರೆಂಟಿಸ್​ ಹುದ್ದೆ: ITI ಆದವರಿಗೆ ಅವಕಾಶ - HAL Trade Apprenticeship

ETV Bharat Logo

Copyright © 2025 Ushodaya Enterprises Pvt. Ltd., All Rights Reserved.