₹2 ಕೋಟಿ 70 ಲಕ್ಷ ಕರೆನ್ಸಿ ನೋಟುಗಳಿಂದ ಗಣೇಶನಿಗೆ ಅದ್ಧೂರಿ ಸಿಂಗಾರ!: ಎಲ್ಲಿ ಗೊತ್ತಾ? - Decoration by currency notes - DECORATION BY CURRENCY NOTES

🎬 Watch Now: Feature Video

thumbnail

By ETV Bharat Karnataka Team

Published : Sep 14, 2024, 9:31 PM IST

ಆಂಧ್ರಪ್ರದೇಶ: ದೇಶಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಜೋರಾಗಿದೆ. ಹಳ್ಳಿಯಿಂದ ದಿಲ್ಲಿಯ ವರೆಗೆ ಬೀದಿ ಬೀದಿಗಳಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಗಣೇಶನನ್ನು ಕೂರಿಸುವ ಮಂಟಪಕ್ಕೆ ಅದ್ದೂರಿಯಾಗಿ ಅಲಂಕಾರ ಮಾಡಲಾಗಿದೆ. ಆದರೆ, ಎಲ್ಲದಕ್ಕಿಂತ ಭಿನ್ನವಾಗಿ ಆಂಧ್ರಪ್ರದೇಶದ ಎನ್​ಟಿಆರ್ ಜಿಲ್ಲೆಯ ನಂದಿಗಾಮದ ವಾಸವಿ ಮಾರುಕಟ್ಟೆ ಬಳಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ಮಂಟಪವನ್ನು 2 ಕೋಟಿ 70 ಲಕ್ಷ ರೂಪಾಯಿ ಕರೆನ್ಸಿ ನೋಟುಗಳಿಂದ ಸಿಂಗರಿಸಲಾಗಿದೆ.

ನಂದಿಗಾಮದ ವಾಸವಿ ಬಜಾರ್​ನ ಸಮಿತಿ ಸದಸ್ಯರು 42ನೇ ಗಣೇಶೋತ್ಸವದ ಪ್ರಯುಕ್ತ ರಾಜ ದರ್ಬಾರ್ ಗಣಪತಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸುತ್ತಿದ್ದಾರೆ. ಇದರ ಭಾಗವಾಗಿ ಶುಕ್ರವಾರ ವಿವಿಧ ಮುಖಬೆಲೆಯ 2 ಕೋಟಿ 70 ಲಕ್ಷ ರೂಪಾಯಿ ಹಣದಿಂದ ಗಣೇಶ ಸೇರಿದಂತೆ ಇಡೀ ಮಂಟಪವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಈ ವಿಭಿನ್ನ ಅಲಂಕಾರ ಕಾಣ್ತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

ಮತ್ತೊಂದೆಡೆ, ಗುಂಟೂರು ಜಿಲ್ಲೆಯ ಮಂಗಳಗಿರಿಯ ಪ್ರಮುಖ ಬೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶಮೂರ್ತಿಯನ್ನು  2 ಕೋಟಿ 30 ಲಕ್ಷ ರೂಪಾಯಿಗಳ ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದೆ. ಇದಕ್ಕಾಗಿ 10, 20, 50, 100, 200, 500 ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ. ಸಚಿವ ನಾರಾ ಲೋಕೇಶ್ ಅವರು ಈ ಕರೆನ್ಸಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: ಸತ್ಯಗಣಪತಿ ದೇವಸ್ಥಾನದಲ್ಲಿ ವೈಭವದ ರೈತ ಗಣೇಶೋತ್ಸವ: ತರಕಾರಿ, ಹೂಗಳಿಂದ ಸಿಂಗಾರ - Sathyaganapati Temple

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.