ಕರ್ನಾಟಕ

karnataka

ETV Bharat / videos

ಮೈಸೂರು : ಗೋಡೆಗೆ ತಲೆ ಸಿಲುಕಿಸಿಕೊಂಡು ಒದ್ದಾಡುತ್ತಿದ್ದ ಗೂಳಿಯ ರಕ್ಷಣೆ - BULL RESCUED

By ETV Bharat Karnataka Team

Published : Dec 28, 2024, 8:41 PM IST

ಮೈಸೂರು : ಮೇವು ಮೇಯಲು ಬಂದ ಹರಕೆ ಗೂಳಿಯೊಂದು ಗೋಡೆಯ ಕಿಂಡಿಗೆ ತನ್ನ ಕತ್ತನ್ನ ಸಿಲುಕಿಸಿಕೊಂಡು ಆಚೆ ಬರಲಾಗದೆ ಪರದಾಡುತ್ತಿದ್ದಾಗ ರಕ್ಷಣೆ ಮಾಡಿರುವ ಘಟನೆ ನಂಜನಗೂಡು ನಗರದ ಲಿಂಗಭಟ್ಟರ ಗುಡಿಯ ಬಳಿ ನಡೆದಿದೆ. 

ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಗೆ ಭಕ್ತರು ಹರಕೆ ಹೊತ್ತು ಬಿಡುವ ಗೂಳಿ ಇದಾಗಿದೆ. ಮೇಯಲು ಹೋದ ಗೂಳಿಯು ಗೋಡೆಯ ಕಿಂಡಿಗೆ ತನ್ನ ತಲೆಯನ್ನು ಹಾಕಿ ಸಿಲುಕಿಕೊಂಡಿದೆ. ಅದರಿಂದ ಹೊರಬರಲು ಹರಸಾಹಸ ಪಟ್ಟಿದ್ದು, ಸ್ಥಳೀಯರೊಬ್ಬರು ಇದನ್ನು ಗಮನಿಸಿ ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದರು.  

ವಿಷಯ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಗೋಳೂರು ಸ್ನೇಕ್ ಬಸವರಾಜ್ ಅವರು ಗೋಡೆಯನ್ನು ಒಡೆದು ಗೂಳಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಸ್ನೇಕ್ ಬಸವರಾಜು ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ : ರೈಲ್ವೆ ಬ್ಯಾರಿಕೇಡ್​ನಲ್ಲಿ ಸಿಲುಕಿದ ಸಲಗ: ಒದ್ದಾಡುತ್ತಿದ್ದ ಆನೆ ಕೊನೆಗೂ ಬಚಾವ್​- ವಿಡಿಯೋ - elephant rescue - ELEPHANT RESCUE

ABOUT THE AUTHOR

...view details