ಕರ್ನಾಟಕ

karnataka

ಮೂಲನಂದೀಶ್ವರ ಜಾತ್ರಾ ಮಹೋತ್ಸವ: ರೋಮಾಂಚನಕಾರಿಯಾಗಿ ನಡೆದ ಟ್ರ‍್ಯಾಕ್ಟರ್ ಜಗ್ಗುವ ಸ್ಪರ್ಧೆ - Moolandishwar fair

By ETV Bharat Karnataka Team

Published : Sep 1, 2024, 11:00 PM IST

ರೋಮಾಂಚಕಾರಿಯಾಗಿ ನಡೆದ ಟ್ರ‍್ಯಾಕ್ಟರ್ ಜಗ್ಗುವ ಸ್ಪರ್ಧೆ (ETV Bharat)

ವಿಜಯಪುರ: ಬಸವನಬಾಗೇವಾಡಿ ಪಟ್ಟಣದ ಆರಾಧ್ಯ ದೈವ ಮೂಲನಂದೀಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ 55 ಹೆಚ್‌ಪಿ ಟ್ರ್ಯಾಕ್ಟರ್ ಜಗ್ಗುವ ಸ್ಫರ್ಧೆ ನೆರೆದಿದ್ದ ಜನರನ್ನ ರೋಮಾಂಚನಗೊಳಿಸಿತು.

ವಿವಿಧ ಭಾಗಗಳಿಂದ 30ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು. ಆಯೋಜಕರು ಹೆಸರು ನೋಂದಾಯಿಸಿದ ಸ್ಪರ್ಧಾಳುಗಳಲ್ಲಿ ಚೀಟಿ ಎತ್ತುವ ಮೂಲಕ ಸ್ಪರ್ಧಿ ಮತ್ತು ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡುತ್ತಿದ್ದರು. ಬಳಿಕ ಎರಡು ಟ್ರ್ಯಾಕ್ಟರ್​ಗಳ ಹಿಂಭಾಗದ ಹುಕ್ಕಿಗೆ ಕಬ್ಬಿಣದ ರಾಡ್ ನಿಂದ ಜೋಡಿಸಿ ಜಗ್ಗಾಟದ ಸ್ಪರ್ಧೆಗೆ ಬಿಡುತ್ತಿದ್ದರು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ಜನರು ಸಿಳ್ಳೆ ಕೇಕೆ ಹಾಕಿ ಸ್ಫರ್ಧಾಳುಗಳನ್ನ ಹುರಿದುಂಬಿಸಿದರು. 

ಸ್ವಾಮೀಜಿ ಶಿವಪ್ರಕಾಶ ಶಿವಾಚಾರ್ಯ ಮಾತನಾಡಿ, ಮೂಲನಂದೀಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬಸವನಬಾಗೇವಾಡಿ ಗೆಳೆಯರ ಬಳಗದ ವತಿಯಿಂದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಯನ್ನು ಎರಡನೇ ಬಾರಿಗೆ ಆಯೋಜಿಸಲಾಗಿದೆ. ಸ್ಪರ್ಧೆಯನ್ನು ನೋಡಲು ಬಂದ ಜನರಿಗೆ ಅನುಕೂಲತೆ ಮಾಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥಿತವಾಗಿ ಸ್ಪರ್ಧೆ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಅಶೋಕ ಹಾರಿವಾಳ ಮಾತನಾಡಿ, ಇಲ್ಲಿ ಬಸವ ಜನ್ಮಸ್ಥಳ ಇರುವುದರಿಂದ ಇಲ್ಲಿ ಎತ್ತಿನಗಾಡಿ ರೇಸ್​ ಮತ್ತು ಪ್ರಾಣಿಗಳನ್ನು ಬಳಸಿ ಯಾವುದೇ ಸ್ಪರ್ಧೆ ನಡೆಸುವುದಿಲ್ಲ. ಹೀಗಾಗಿ ಬಸವನಬಾಗೇವಾಡಿ ಗೆಳೆಯರ ಬಳಗ ಟ್ರ್ಯಾಕ್ಟರ್ ಜಗ್ಗುವ ಸ್ಫರ್ಧೆ ಆಯೋಜಿಸುತ್ತಿದೆ ಎಂದರು. 

ಇದನ್ನೂ ಓದಿ: ಹಾವೇರಿ: ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಬೇಸರ; ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮುದ್ದು ಮಕ್ಕಳು - Teacher Transfer

ABOUT THE AUTHOR

...view details