ಕರ್ನಾಟಕ

karnataka

ETV Bharat / videos

ಬಾದಾಮಿಯಲ್ಲಿ ಧುಮ್ಮುಕ್ಕುತ್ತಿದೆ ಅಕ್ಕ ತಂಗಿಯರ ಫಾಲ್ಸ್ - WATCH VIDEO - Akka Thangi Falls - AKKA THANGI FALLS

By ETV Bharat Karnataka Team

Published : Jun 7, 2024, 1:33 PM IST

ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆಯ ಚಾಲುಕ್ಯರ ನಾಡು ಬಾದಾಮಿಯಲ್ಲಿ ಅಕ್ಕ ತಂಗಿಯರ ಫಾಲ್ಸ್ ಧುಮ್ಮುಕ್ಕುತ್ತಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಬಾದಾಮಿ ಭೂತನಾಥ ದೇವಾಲಯದ ಹಿಂದೆ ಇರುವ ಬೆಟ್ಟದ ಮೇಲಿಂದ ನೀರು ಬೀಳುತ್ತಿದೆ. 

ಜೋಡಿಯಾಗಿ ಫಾಲ್ಸ್​ನ ಎರಡು ಕಡೆಯಿಂದ ನೀರು ಬೀಳುವುದರಿಂದ ಈ ಫಾಲ್ಸ್​​ನ್ನು ಅಕ್ಕ ತಂಗಿಯರ ಫಾಲ್ಸ್ ಎಂದೇ ಕರೆಯಗುತ್ತದೆ. ಬಿಳಿಬಿಳಿಯಾಗಿ ಹಾಲಿನ ನೊರೆಯಂತೆ ಬೀಳುತ್ತಿರುವ ಈ ಜಲಪಾತವ​ನ್ನು ನೋಡುವುದೇ ಕಣ್ಣಿಗೆ ಹಬ್ಬ. ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆಂದು ಬರುವ ಪ್ರವಾಸಿಗರಿಗೆ ಅಕ್ಕತಂಗಿಯರ ಫಾಲ್ಸ್​ ಸಹ ಮೆರೆಗು ನೀಡುತ್ತಿದೆ. ಬೆಟ್ಟದ ಮೇಲಿಂದ ನೀರು ಅಗಸ್ತತೀರ್ಥ ಹೊಂಡಕ್ಕೆ ಬರುತ್ತಿದ್ದು, ಮೈ ದುಂಬಿ ಹರಿಯುತ್ತಿದೆ. ಐತಿಹಾಸಿಕ ಸ್ಮಾರಕಗಳ ಜೊತೆಗೆ ಪ್ರಕೃತಿಯ ರಮಣೀಯ ಸೌಂದರ್ಯದ ಮಧ್ಯೆ ಅಕ್ಕ-ತಂಗಿ ಫಾಲ್ಸ್ ನೋಡುವುದೇ ಕಣ್ಣಿಗೆ ಸೋಜಿಗ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ - Chikkamagaluru Rains

ಇದನ್ನೂ ಓದಿ:ಕಾಫಿನಾಡಿನಲ್ಲಿ ವರುಣನ ಆರ್ಭಟ: ಹಳ್ಳದಲ್ಲಿ ಮುಳುಗಿದ ಹಿಟಾಚಿ, ಧುಮ್ಮಿಕ್ಕುತ್ತಿರುವ ಕಲ್ಲತ್ತಿಗಿರಿ ಫಾಲ್ಸ್​ - hevy rain in chikkamagaluru

ABOUT THE AUTHOR

...view details