ಕರ್ನಾಟಕ

karnataka

ನೂರಾರು ವರ್ಷದ ಸಂಪ್ರದಾಯ: ಒಂದಲ್ಲಾ ಎರಡಲ್ಲ, ಈ ಊರಲ್ಲಿ 75 ದಿನ ಹಬ್ಬ ಆಚರಣೆ

By ETV Bharat Karnataka Team

Published : Feb 14, 2024, 12:24 PM IST

ಚಾಮರಾಜನಗರ: ಹಬ್ಬ ಎಂದರೆ ಒಂದು ದಿನ ಇಲ್ಲವೇ ಎರಡು ದಿನ ಆಚರಿಸಲಾಗುತ್ತದೆ. ಆದರೆ, ‌ಈ ಊರಲ್ಲಿ ಬರೋಬ್ಬರಿ 75 ದಿನಗಳ ಕಾಲ ನಡೆಯುವ ವಿಶೇಷ ಹಬ್ಬ ಸೋಮವಾರದಿಂದ ಆರಂಭಗೊಂಡಿದೆ. 

ಹೌದು, ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಫೆ.12 ರಿಂದ ಏಪ್ರಿಲ್ 26 ತನಕ ಮಾರಮ್ಮನ‌ ಹಬ್ಬ ಆಚರಣೆ ಮಾಡಲಿದ್ದು, ಸೋಮವಾರ ರಾತ್ರಿ ಹಾಲೆರೆವ ಉತ್ಸವದ ಮೂಲಕ ಹಬ್ಬ ಆರಂಭಗೊಂಡಿದೆ. ಕಳೆದ ನೂರಾರು ವರ್ಷಗಳಿಂದ ಈ ದೊಡ್ಡ ಹಬ್ಬ ಆಚರಿಸಿಕೊಂಡು ಬರಲಾಗುತ್ತಿತ್ತು. 5 ವರ್ಷಗಳಿಗೊಮ್ಮೆ ನಡೆಯುವ ಈ ಹಬ್ಬದಲ್ಲಿ ಗ್ರಾಮದ 12 ಸಮುದಾಯಗಳು ಪಾಲ್ಗೊಂಡು ಒಂದೊಂದು ಪೂಜೆ, ಆಚರಣೆಯಲ್ಲಿ ಪಾಲ್ಗೊಳ್ಳಲಿವೆ.

ಈ 75 ದಿನಗಳ ಅವಧಿಯಲ್ಲಿ ದೇವರಿಗೆ ವಿಶೇಷ, ವಿಭಿನ್ನ ಪೂಜೆಗಳನ್ನು ಮಾಡಲಿದ್ದು ಶಿವರಾತ್ರಿ, ಯುಗಾದಿ ದಿನಗಳಂದು ವಿಶೇಷ ಕೈಂಕರ್ಯ ನಡೆಯಲಿದೆ. ಮಾರಿ ಕುಣಿತವು ಈ ಹಬ್ಬದ ಒಂದು ಭಾಗವಾಗಿದ್ದು, ಕೆಸ್ತೂರು ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಮಾರಮ್ಮನ ಹಬ್ಬದಲ್ಲಿ ಭಾಗಿಯಾಗಲಿದ್ದಾರೆ. 

ಕೆಸ್ತೂರು ಗ್ರಾಮದ ಮಂಟೆಲಿಂಗಯ್ಯ ಈ ಕುರಿತು ಪ್ರತಿಕ್ರಿಯಿಸಿ, "ನಮ್ಮ ಊರಿನಲ್ಲಿ ನಡೆಯುವ ವಿಶೇಷ ಆಚರಣೆ ಇದಾಗಿದ್ದು, ಇಷ್ಟು ಧೀರ್ಘವಾಗಿ ಬೇರೆಡೆ ಹಬ್ಬ-ಉತ್ಸವ ನಡೆಯುವುದಿಲ್ಲ, ಗ್ರಾಮದ 12 ಸಮುದಾಯಗಳ ಜನರು ಇದರಲ್ಲಿ ಪಾಲ್ಗೊಂಡು ಒಂದೊಂದು ಆಚರಣೆ ಮಾಡಲಿದ್ದಾರೆ" ಎಂದು ತಿಳಿಸಿದರು. ಒಟ್ಟಿನಲ್ಲಿ ದೀರ್ಘವಾಗಿ ನಡೆಯುವ ಈ ಕೆಸ್ತೂರು ಮಾರಮ್ಮನ ಹಬ್ಬ ಮತ್ತೆ ಬಂದಿದ್ದು ಊರಲ್ಲಿ ಹಬ್ಬದ ಸಡಗರ ಜೋರಾಗಿದೆ.

ಇದನ್ನೂ ನೋಡಿ: ಸುತ್ತೂರು ಜಾತ್ರೆಯಲ್ಲಿ ಗಮನ ಸೆಳೆದ ಕೋಟಿ ಮೌಲ್ಯದ ಹಳ್ಳಿಕಾರ್ ಹೋರಿ: ವಿಶೇಷತೆಗಳೇನು?

ABOUT THE AUTHOR

...view details