ಹೈದರಾಬಾದ್: ಎಕ್ಸ್ ಮೈಕ್ರೋಬ್ಲಾಗಿಂಗ್ ಸೈಟ್ ಅನ್ನು ಮತ್ತಷ್ಟು ಬಳಕೆದಾರಸ್ನೇಹಿ ಹಾಗೂ ಅಭಿವ್ಯಕ್ತಿ ತಾಣವಾಗಿ ರೂಪಿಸಲು ಮುಂದಾಗಿರುವ ಎಲೋನ್ ಮಸ್ಕ್ ಇದೀಗ ಡಿಸ್ಲೈಕ್ ಬಟನ್ ಪರಿಚಯಿಸಲು ಮುಂದಾಗಿದ್ದಾರೆ.
ಸದ್ಯ ಎಕ್ಸ್ನಲ್ಲಿ ಕೇವಲ ಲೈಕ್ ಬಟನ್ ಇದ್ದು, ಅದನ್ನು ಒತ್ತುವ ಮೂಲಕ ಮಾತ್ರ ಪೋಸ್ಟ್ ಕುರಿತು ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಂದು ಪೋಸ್ಟ್ಗೆ ಇಷ್ಟ ಮತ್ತು ಕಷ್ಟದ ಎರಡು ಬಳಕೆದಾರರು ಇರುತ್ತಾರೆ. ಇದನ್ನು ಮನಗಂಡು ಈ ರೀತಿಯ ಪ್ರಯೋಗಕ್ಕೆ ಇದೀಗ ಬಿಲಿಯನೇರ್ ಮುಂದಾಗಿದ್ದಾರೆ.
ಈ ಸಂಬಂಧ ಸಂಸ್ಥೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ ಇತ್ತೀಚಿಗೆ ಡಿಸ್ಲೈಕ್ ರೀತಿಯಲ್ಲಿಯೇ ಡೌನ್ವೋಟಿಂಗ್ ಫೀಚರ್ ಬಳಕೆ ಮಾಡಲು ಪ್ರಸ್ತಾಪ ಹೊಂದಿದೆ ಎನ್ನಲಾಗಿದೆ.
ಸದ್ಯ ಅಮೆರಿಕದ ಸಾಮಾಜಿಕ ಜಾಲತಾಣ ರೆಡ್ಡಿಟ್ನಲ್ಲಿ ಡೌನ್ವೋಟ್ ಐಕಾನ್ ಇದೆ. ಅದೇ ರೀತಿಯಲ್ಲಿ ಇದೀಗ ಎಕ್ಸ್ಗೆ ಡಿಸ್ಲೈಕ್ ಅಂದರೆ, ಪೋಸ್ಟ್ ಇಷ್ಟವಾಗಿಲ್ಲ ಎಂಬ ಬಟನ್ ತರಲು ಮುಂದಾಗಿದೆ ಎಂದು ಟೆಕ್ಕ್ರಂಚ್ ವರದಿ ಮಾಡಿದೆ.
ಎಕ್ಸ್ನ ಐಒಎಸ್ ಆ್ಯಪ್ನ ಪತ್ತೆಯಾದ ಕೋಡ್ ಪರಿಶೀಲನೆ ಪ್ರಕಾರ, ಇದೀಗ ಎಕ್ಸ್ನಲ್ಲಿ ಲೈಕ್ಗೆ ಹೃದಯದ ಆಕಾರದ ಬಟನ್ ನೀಡಲಾಗಿದೆ. ಮುಂದಿನ ದಿನದಲ್ಲಿ ಡಿಸ್ಲೈಕ್ ಒಡೆದ ಹೃದಯಾಕಾರದ ಬಟನ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ತಿಂಗಳ ಮುಂದೆ ಎಕ್ಸ್ನ ರಿವರ್ಸ್ ಇಂಜಿನಿಯರ್ ಅರೋನ್ ಪೆರ್ರಿಸ್ ತಮ್ಮ ಎಕ್ಸ್ ಜಾಲತಾಣದಲ್ಲಿ ಈ ಡೌನ್ವೋಟ್ ಅಭಿವೃದ್ಧಿ ಕುರಿತು ಸುಳಿವು ನೀಡಿದ್ದರು. ಇದೀಗ ಒಡೆದ ಹೃದಯಾಕಾರದ ಇಮೋಜಿ ಕಂಡುಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.
ಆರಂಭದಲ್ಲಿ ಸಂಸ್ಥೆ, ಅಪ್ವೋಟಿಂಗ್ ಮತ್ತು ಡೌನ್ವೋಟಿಂಗ್ ಎರಡು ಬಟನ್ ಅನ್ನು ಎಲ್ಲಾ ಪೋಸ್ಟ್ಗಳಲ್ಲಿ ಬಳಕೆ ಮಾಡಿದೆ. ಈ ಕುರಿತು ಅಂತಿಮ ನಿರ್ಣಯವನ್ನು ಸಂಸ್ಥೆ ನಡೆಸಲಿದೆ.
ಇತ್ತೀಚೆಗಷ್ಟೇ ಎಕ್ಸ್ನಲ್ಲಿನ ಎಲ್ಲಾ ಪೋಸ್ಟ್ಗಳಲ್ಲಿ ಲೈಕ್ ಬಟನ್ ಅನ್ನು ಡಿಫಾಲ್ಟ್ ಆಗಿ ಹೈಡ್ ಹೊಸ ಫೀಚರ್ ಪರಿಚಯಿಸಲಾಗಿದೆ. ಬಳಕೆದಾರರ ಖಾಸಗಿತನವನ್ನು ರಕ್ಷಿಸುವ ಉದ್ದೇಶದಿಂದ 'ಲೈಕ್' ಮರೆಮಾಚಲಾಗಿದೆ. ಇದೀಗ ಬಳಕೆದಾರರು ಮಾತ್ರ ತಾವು ಲೈಕ್ ಮಾಡಿದ ಪೋಸ್ಟ್ ನೋಡಬಹುದು. ಆದರೆ, ಇತರರು ನೋಡಲು ಸಾಧ್ಯವಿಲ್ಲ. ಬಳಕೆದಾರರ ಪ್ರೊಫೈಲ್ ಪೇಜ್ನಲ್ಲಿ ಮಾತ್ರ ಲೈಕ್ ಟ್ಯಾಬ್ ಕಾಣಿಸುತ್ತದೆ. (ಐಎಎನ್ಎಸ್)
ಇದನ್ನೂ ಓದಿ:ನನ್ನ ಕಂಪನಿಗಳಿಂದ ಆ್ಯಪಲ್ನ ಎಲ್ಲ ಸಾಧನಗಳನ್ನು ನಿಷೇಧಿಸಲಾಗುವುದು": ಎಲೋನ್ ಮಸ್ಕ್ ಎಚ್ಚರಿಕೆ