How to Make Palak Dosa Recipe: ಪಾಲಕ್ ಆರೋಗ್ಯಕರವಾದ ಸೊಪ್ಪುಗಳಲ್ಲಿ ಒಂದು. ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪೋಷಕಾಂಶಗಳು ಪಾಲಕ್ನಲ್ಲಿದೆ. ಆದಾಗ್ಯೂ, ಅನೇಕ ಜನರು ಪಾಲಕ್ನೊಂದಿಗೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ. ಆದರೆ, ಮಕ್ಕಳು ಕೆಲವೊಮ್ಮೆ ಪಾಲಕ್‌ನಿಂದ ಮಾಡಿದ ಭಕ್ಷ್ಯಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ 'ಪಾಲಾಕ್ ದೋಸೆ' ಮಾಡಿದರೆ, ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ.
ಈ ದೋಸೆ ನೋಡಲು ಸುಂದರವಾಗಿರುವುದಷ್ಟೇ ಅಲ್ಲ, ಸೂಪರ್ ಟೇಸ್ಟಿಯಾಗಿರುತ್ತದೆ. ಮೇಲಾಗಿ ಈ ದೋಸೆ ಸಿದ್ಧಪಡಿಸಲು ಕಷ್ಟಪಡುವ ಅಗತ್ಯವಿಲ್ಲ. ನೀವು ಈ ಪಾಲಕ್ ದೋಸೆಯನ್ನು ಬಹಳ ಕಡಿಮೆ ಸಮಯದಲ್ಲಿ ಬೇಗನೇ ತಯಾರಿಸಬಹುದು. ಹಾಗಾದರೆ, ಈ ದೋಸೆ ತಯಾರಿಸಲು ಬೇಕಾಗುವ ಪದಾರ್ಥಗಳು ಯಾವುವು? ಇದನ್ನು ಸಿದ್ಧಪಡಿಸುವುದು ಹೇಗೆ? ಇಲ್ಲಿದೆ ವಿವರ.
ಪಾಲಕ್ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳೇನು?:
- ಗೋಧಿ ಹಿಟ್ಟು - ಎರಡು ಕಪ್
- ಪಾಲಕ್ ಪೇಸ್ಟ್ - ಒಂದು ಕಪ್
- ಅಕ್ಕಿ ಹಿಟ್ಟು - ಕಾಲು ಕಪ್
- ರವಾ - ಕಾಲು ಕಪ್
- ಈರುಳ್ಳಿ ಪೇಸ್ಟ್ - ಕಾಲು ಕಪ್
- ಧನಿಯಾ ಪುಡಿ - ಸ್ವಲ್ಪ
- ಹಸಿ ಮೆಣಸಿನಕಾಯಿ ಪೇಸ್ಟ್ - ಒಂದು ಚಮಚ
- ಶುಂಠಿ - ಒಂದು ಚಮಚ
- ಜೀರಿಗೆ - ಒಂದು ಚಮಚ
- ಉಪ್ಪು - ರುಚಿಗೆ
- ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ ಹೇಗೆ?:
- ಇದಕ್ಕಾಗಿ, ಮೊದಲು ತಾಜಾ ಪಾಲಕ್ ಮತ್ತು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅವುಗಳನ್ನು ಸ್ವಚ್ಛವಾಗಿ ತೊಳೆದು ಸಣ್ಣದಾಗಿ ಕತ್ತರಿಸಿ. ಹಾಗೆಯೇ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಪಕ್ಕಕ್ಕೆ ಇಡಿ. ಅದೇ ರೀತಿ ಹಸಿ ಮೆಣಸಿನಕಾಯಿ ತೆಗೆದುಕೊಂಡು ರುಬ್ಬಿಕೊಳ್ಳಿ.
- ಈಗ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಕತ್ತರಿಸಿದ ಪಾಲಕ್ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ಅದರ ನಂತರ ಈ ಮಿಶ್ರಣವನ್ನು ಸ್ವಲ್ಪ ದೊಡ್ಡದಾದ ಬಟ್ಟಲಿನಲ್ಲಿ ತೆಗೆದುಕೊಳ್ಳಿ. ನಂತರ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ರವೆ ಮತ್ತು ಸಾಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಅದರ ನಂತರ, ರುಚಿಗೆ ಬೇಕಾದಷ್ಟು ಉಪ್ಪು, ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ರುಬ್ಬಿದ ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ, ಜೀರಿಗೆ ಸೇರಿಸಿ.
- ಈಗ ದೋಸೆ ಪ್ಯಾನ್ ಒಲೆಯ ಮೇಲೆ ಇಡಿ. ಬಿಸಿಯಾದ ನಂತರ ಎಣ್ಣೆ ಹಚ್ಚಿ ಸ್ವಲ್ಪ ಹಿಟ್ಟು ತೆಗೆದುಕೊಂಡು ದೋಸೆ ಹಾಕಿ.
- ನಂತರ ಅದನ್ನು ಈರುಳ್ಳಿ ಮತ್ತು ಕ್ಯಾಪ್ಸಿಕಂ ಚೂರುಗಳಿಂದ ಅಲಂಕರಿಸಿ. ಆಗ ಬಾಯಲ್ಲಿ ನೀರೂರಿಸುವ ರುಚಿ ರುಚಿಯಾದ ಪಾಲಕ್ ದೋಸೆ ನಿಮ್ಮ ಎದುರಿಗೆ ರೆಡಿಯಾಗಿದೆ.
- ಈ ಪಾಲಕ್ ದೋಸೆಯನ್ನು ಶೇಂಗಾ, ಕೊಬ್ಬರಿ ಚಟ್ನಿಯಲ್ಲಿ ತಿಂದಿರೆ ತುಂಬಾ ಟೇಸ್ಟ್ ಅನಿಸುತ್ತದೆ. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಒಂದಿಷ್ಟು ಪೋಷಕಾಂಶಗಳು ಸಿಗುತ್ತವೆ ಎನ್ನುತ್ತಾರೆ ತಜ್ಞರು. ಮತ್ತೇಕೆ ತಡ ಈಗಲೇ ಈ ರೆಸಿಪಿಯನ್ನು ಟ್ರೈ ಮಾಡಿ ಟೇಸ್ಟ್ ನೋಡಿ.