ETV Bharat / technology

ಮಂಗಳ ಗ್ರಹಕ್ಕೆ ಮೊದಲ ಸ್ಟಾರ್‌ಶಿಪ್ ಮಿಷನ್ ಪ್ರಾರಂಭಿಸುವ ಗುರಿ: ಎಲೋನ್​ ಮಸ್ಕ್​ - Starship To Mars - STARSHIP TO MARS

Starship Mission: ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಅವರು ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸುವ ಸ್ಟಾರ್‌ಶಿಪ್ ಮಿಷನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡು ವರ್ಷಗಳಲ್ಲಿ ಮೊದಲ ಸ್ಟಾರ್‌ಶಿಪ್ ಪ್ರಾರಂಭಿಸಲಾಗುವುದು ಎಂದಿದ್ದಾರೆ. ಸ್ಪೇಸ್‌ಎಕ್ಸ್ ಇತ್ತೀಚೆಗೆ ಭಾರಿ ಬೂಸ್ಟರ್‌ನೊಂದಿಗೆ 400 ಅಡಿ ಎತ್ತರದ ಸ್ಟಾರ್‌ಶಿಪ್‌ನ ಪರೀಕ್ಷಾ ಹಾರಾಟ ಪ್ರಾರಂಭಿಸಿತ್ತು.

SPACEX  STARSHIP MISSION  ELON MUSK
ಎಲೋನ್​ ಮಸ್ಕ್​ (ANI)
author img

By ETV Bharat Tech Team

Published : Sep 9, 2024, 1:31 PM IST

Starship Mission: ಮೊದಲ ಬಾರಿಗೆ ಸಿಬ್ಬಂದಿ ಇಲ್ಲದ ಸ್ಟಾರ್‌ಶಿಪ್ ಮಿಷನ್ ಅನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಯೋಜನೆ ಪ್ರಾರಂಭಿಸಲಾಗುವುದು. ಈ ಮಿಷನ್‌ಗಾಗಿ ಸಿದ್ಧತೆಗಳು ನಡೆಯುತ್ತಿವೆ. ಸ್ಟಾರ್‌ಶಿಪ್ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್. ಮಾನವರನ್ನು ಚಂದ್ರನತ್ತ ಕಳುಹಿಸಲು ಈ ಮಿಷನ್ ಬಳಸಲಾಗುತ್ತಿದೆ.

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಮಂಗಳ ಗ್ರಹಕ್ಕೆ ಮೊದಲ ಸಿಬ್ಬಂದಿಗಳಿಲ್ಲದ ಸ್ಟಾರ್‌ಶಿಪ್ ಮಿಷನ್ ಅನ್ನು ಎರಡು ವರ್ಷಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಮಾನವರನ್ನು ಚಂದ್ರನಿಗೆ ಕಳುಹಿಸಲು ಮತ್ತು ನಂತರ ಅಂತಿಮವಾಗಿ ಮಂಗಳಕ್ಕೆ ಕಳುಹಿಸಲು ಇದನ್ನು ಬಳಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಯೋಜನೆ ಕುರಿತು ಮಸ್ಕ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್‌ ಮೂಲಕ ತಿಳಿಸಿದ್ದಾರೆ. ಮಂಗಳ ಗ್ರಹಕ್ಕೆ ಮೊದಲ ಸ್ಟಾರ್‌ಶಿಪ್ ರಾಕೆಟ್​ ಮುಂದಿನ ಎರಡು ವರ್ಷಗಳಲ್ಲಿ ಉಡಾವಣೆಯಾಗಲಿದೆ. ಮಂಗಳ ಗ್ರಹದಲ್ಲಿ ಇಳಿಯುವಿಕೆಯ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಲು ಈ ಪ್ರಯೋಗ ನಡೆಸಲಾಗುತ್ತಿದೆ. ಲ್ಯಾಂಡಿಂಗ್ ಸರಿಯಾಗಿ ನಡೆದರೆ ನಾಲ್ಕು ವರ್ಷಗಳಲ್ಲಿ ಮಂಗಳಕ್ಕೆ ಮೊದಲ ಸಿಬ್ಬಂದಿಯ ವಿಮಾನ ಹಾರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸುಮಾರು 20 ವರ್ಷಗಳಲ್ಲಿ ನಗರವನ್ನು ನಿರ್ಮಿಸುವ ಗುರಿ ಹೊಂದಿದ್ದು, ಅದರ ಸ್ವಂತ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಮುಂಬರುವ ವರ್ಷಗಳಲ್ಲಿ ಯಾವುದಾದರೂ ಗ್ರಹದಲ್ಲಿ ಮಾನವ ಜೀವನವನ್ನು ಪ್ರಾರಂಭಿಸಲು ಅವಕಾಶಗಳಿವೆ. ಮಸ್ಕ್‌ನ ಏರೋಸ್ಪೇಸ್ ಕಂಪನಿ SpaceX ಮೊದಲ ಸಂಪೂರ್ಣ ಮರುಬಳಕೆ ಮಾಡಬಹುದಾದ ರಾಕೆಟ್ ತಯಾರಿಸಿದೆ. ಇದು ಬಾಹ್ಯಾಕಾಶ ಕಾರ್ಯಾಚರಣೆಗಳ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮಂಗಳ ಗ್ರಹದಲ್ಲಿ ಸವಾಲಿನ ವಾತಾವರಣವಿದೆ. ಪರಿಸ್ಥಿತಿಗಳು ಮನುಷ್ಯರಿಗೆ ಸರಿಹೊಂದುವುದಿಲ್ಲ. ಇದಕ್ಕಾಗಿ ನಾವು ಅಸ್ತಿತ್ವದಲ್ಲಿರುವ ತಂತ್ರಜ್ಞಾನವನ್ನು 10 ಸಾವಿರ ಪಟ್ಟು ಸುಧಾರಿಸಬೇಕಾಗಿದೆ ಎಂದು ಮಸ್ಕ್ ಹೇಳಿದ್ದಾರೆ.

ಸ್ಪೇಸ್‌ಎಕ್ಸ್ ಇತ್ತೀಚೆಗೆ ತನ್ನ 400-ಅಡಿ ಎತ್ತರದ ಸ್ಟಾರ್‌ಶಿಪ್‌ನ ಮೂರನೇ ಪರೀಕ್ಷಾ ಹಾರಾಟವನ್ನು ಹೆವಿ ಬೂಸ್ಟರ್‌ನೊಂದಿಗೆ ಪ್ರಾರಂಭಿಸಿತ್ತು. ಸ್ಟಾರ್‌ಶಿಪ್ ದೊಡ್ಡ ಬೂಸ್ಟರ್ ಹೊಂದಿದೆ. ಇದನ್ನು ಸೂಪರ್ ಹೆವಿ ಎಂದು ಕರೆಯಲಾಗುತ್ತದೆ. ಇದು ಮೇಲಿನ ಭಾಗದಲ್ಲಿ ಬಾಹ್ಯಾಕಾಶ ನೌಕೆಯನ್ನು ಹೊಂದಿದೆ. ಇದನ್ನು ಸ್ಟಾರ್‌ಶಿಪ್ ಎಂದು ಕರೆಯಲಾಗುತ್ತದೆ. SpaceX ನ CEO ಕನಿಷ್ಠ ಒಂದು ಮಿಲಿಯನ್ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಯೋಜಿಸುತ್ತಿದ್ದಾರೆ.

ಇದನ್ನೂ ಓದಿ: ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ- 4ರ ಯಶಸ್ವಿ ಪರೀಕ್ಷೆ! - Agni 4 ballistic missile

ETV Bharat Logo

Copyright © 2025 Ushodaya Enterprises Pvt. Ltd., All Rights Reserved.