Why Is Petrol Not Used In Airplanes: ಸಾಮಾನ್ಯವಾಗಿ ವಾಹನಗಳಿಗೆ ಬಳಸುವ ಪೆಟ್ರೋಲ್ ಅನ್ನು ವಿಮಾನಗಳಿಗೇಕೆ ಇಂಧನವಾಗಿ ಬಳಸುವುದಿಲ್ಲ ಎಂದು ಎಂದಾದರೂ ಯೋಚಿಸಿದ್ದೀರಾ?. ವಿಮಾನಗಳಿಗೆ ಸೀಮೆಎಣ್ಣೆ ಆಧರಿತ ಇಂಧನವನ್ನು ಬಳಸಲಾಗುತ್ತದೆ. ಈ ಇಂಧನವನ್ನು ಜೆಟ್ ಎ, ಜೆಟ್ 1 ಅಥವಾ ಏವಿಯೇಷನ್ ಸೀಮೆಎಣ್ಣೆ ಕ್ಯೂಎವಿ ಎಂದೂ ಕರೆಯುತ್ತಾರೆ. ಇದು ಬಣ್ಣರಹಿತ ಮತ್ತು ಹೆಚ್ಚು ಸುಡುವ ದ್ರವವಾಗಿದೆ.
ವಿಮಾನಕ್ಕೆ ವಿಶೇಷ ಇಂಧನ ಬಳಕೆ ಏಕೆ?:ವಿಮಾನಕ್ಕೆ -58 Fನಿಂದ 122 Fವರೆಗಿನ ತೀವ್ರ ತಾಪಮಾನವನ್ನು ತಡೆದುಕೊಳ್ಳುವ ಇಂಧನದ ಅಗತ್ಯವಿರುತ್ತದೆ. ಹೆಚ್ಚು ಎತ್ತರ ಪ್ರದೇಶದಲ್ಲಿ ಪೆಟ್ರೋಲ್ ಅಥವಾ ಗ್ಯಾಸೋಲಿನ್ ಈ ಮಾನದಂಡಗಳನ್ನು ಪೂರೈಸುವುದಿಲ್ಲ. ಪೆಟ್ರೋಲ್‌ನ ಕಡಿಮೆ ಫ್ಲಾಶ್ ಪಾಯಿಂಟ್, ಅಸ್ಥಿರತೆ ಮತ್ತು ಸೀಮಿತ ಶಕ್ತಿಯ ಸಾಂದ್ರತೆಯು ವಿಮಾನ ಹಾರಾಟಕ್ಕೆ ಸೂಕ್ತವಲ್ಲ.
ಏವಿಯೇಷನ್ ಟರ್ಬೈನ್ ಇಂಧನ(ATF):ವಿಮಾನಗಳು ATF ಇಂಧನವನ್ನು ಅವಲಂಬಿಸಿವೆ. ಇದನ್ನು ಜೆಟ್ ಇಂಧನ ಎಂದೂ ಕರೆಯುವರು. ಇದು ವಿಶೇಷ ಸೀಮೆಎಣ್ಣೆ ಆಧರಿತ ಇಂಧನವಾಗಿದೆ.
1. ಹೆಚ್ಚು ಶಕ್ತಿಯ ಸಾಂದ್ರತೆ:ಎಟಿಎಫ್ ಪ್ರತೀ ಯುನಿಟ್ ತೂಕಕ್ಕೆ ಹೆಚ್ಚು ಶಕ್ತಿ ಹೊಂದಿರುತ್ತದೆ. ಇದು ವಿಮಾನದಲ್ಲಿ ಇಂಧನದ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಅಂತಹ ಇಂಧನದಿಂದ ವಿಮಾನ ಬಹು ದೂರ ಕ್ರಮಿಸುತ್ತದೆ.
2. ಹೈ ಫ್ಲ್ಯಾಶ್ ಪಾಯಿಂಟ್:ಎಟಿಎಫ್ (ಏವಿಯೇಷನ್ ಟರ್ಬೈನ್ ಫ್ಯುಯೆಲ್) ಹೈ ಫ್ಲಾಶ್ ಪಾಯಿಂಟ್ ಇಂಧನ ನಿರ್ವಹಣೆ ಮತ್ತು ಹಾರಾಟದ ಸಮಯದಲ್ಲಿ ದಹನದ ಅಪಾಯವನ್ನು ಕಡಿಮೆ ಮಾಡುತ್ತದೆ.
3. ಶೀತ-ವಾತಾವರಣ:ಎಟಿಎಫ್ ಇಂಧನವು ಕಡಿಮೆ ತಾಪಮಾನದಲ್ಲಿ ದ್ರವವಾಗಿ ಉಳಿಯುತ್ತದೆ. ಈ ಕಾರಣದಿಂದಾಗಿ ಎಂಜಿನ್ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
4. ಎತ್ತರದಲ್ಲಿ ಸ್ಥಿರತೆ:ಎಟಿಎಫ್ ಇಂಧನವು ಹೆಚ್ಚಿನ ಒತ್ತಡ ಮತ್ತು ಎತ್ತರದಲ್ಲಿಯೂ ತನ್ನ ಗುಣಗಳನ್ನು ಉಳಿಸಿಕೊಳ್ಳುತ್ತದೆ.
ವಿಮಾನ ಇಂಧನದ ವಿಧಗಳು:ವಿಮಾನದಲ್ಲಿ ಎರಡು ಪ್ರಾಥಮಿಕ ವಿಧದ ಎಟಿಎಫ್ ಇಂಧನವನ್ನು ಬಳಸಲಾಗುತ್ತದೆ.
1. Jet-A1:ಇದು38C (100F)ನ ATF ಫ್ಲಾಶ್ ಪಾಯಿಂಟ್‌ನೊಂದಿಗೆ ಸಾಮಾನ್ಯವಾಗಿ ಬಳಸುವ ಇಂಧನ.