ಹೈದರಾಬಾದ್:ವಿಶ್ವದ ಅತಿ ಜನಪ್ರಿಯ ಮೈಕ್ರೋಬ್ಲಾಗಿಂಗ್ ಮೆಸೆಂಜರ್ ಆದ ವಾಟ್ಸಾಪ್ಗೆ ಕೋಟ್ಯಂತರ ಬಳಕೆದಾರರಿದ್ದಾರೆ. ಇದರ ಬಳಕೆ ಉಳಿದೆಲ್ಲ ಮೆಸೆಂಜರ್ಗಳಿಗಿಂತ ಹೆಚ್ಚೇ ಎಂದು ಹೇಳಬಹುದು. ಜನರು ಆ್ಯಪ್ ಅನ್ನು ತುಂಬಾ ಸಲೀಸಾಗಿ ಬಳಸಲು ಏನೇನೋ ವೈಶಿಷ್ಟ್ಯ(ಫೀಚರ್)ಗಳನ್ನು ಪರಿಚಯಿಸುತ್ತಿರುತ್ತದೆ. ಅದರ ಸಾಲಿನಲ್ಲಿ ಮತ್ತೊಂದು ವೈಶಿಷ್ಟ್ಯವನ್ನು ಇದೀಗ ತರಲು ವಾಟ್ಸಾಪ್ ಮುಂದಾಗಿದೆ.
ವಾಟ್ಸಾಪ್ ನಿರಂತರವಾಗಿ ತನ್ನ ವೈಶಿಷ್ಟ್ಯಗಳನ್ನು ಬದಲಾಯಿಸುತ್ತಿರುತ್ತದೆ. ಅದನ್ನು ಅನುಷ್ಠಾನ ಮಾಡಲೂ ಪರೀಕ್ಷೆ ಮಾಡುತ್ತಿರುತ್ತದೆ. ಅವುಗಳನ್ನು ಪಡೆದ ಬಳಿಕ ಹೆಚ್ಚಿನ ಅನುಕೂಲವನ್ನು ಪಡೆಯುತ್ತಾರೆ. ಇದೀಗ ತರಲು ಉದ್ದೇಶಿಸಿರುವ ಈ ವೈಶಿಷ್ಟ್ಯವು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.
ಟ್ಯಾಪ್ ಮಾಡೋದು ನಿಲ್ಲುತ್ತೆ:ಬಳಕೆದಾರರು ತಮ್ಮ ಮೊಬೈಲ್ ವಾಟ್ಸಾಪ್ಗೆ ಬರುವ ವಿಡಿಯೋ ಅಥವಾ ಫೋಟೋಗೆ ಪ್ರತಿಕ್ರಿಯಿಸಲು ಟ್ಯಾಪ್ ಮಾಡಬೇಕಾಗುತ್ತದೆ. ಕೆಲ ಸೆಕೆಂಡುಗಳ ಕಾಲ ನಿರ್ದಿಷ್ಟ ವಿಡಿಯೋ ಅಥವಾ ಫೋಟೋವನ್ನು ಒತ್ತಿ ಹಿಡಿದರೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.