Error-Prone Feature Suspend: ಆಪಲ್ ಕಂಪನಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಎಐ ಜನರೇಟೆಡ್ ಎರರ್-ಪ್ರೋನ್ ಫೀಚರ್ಸ್ ಅನ್ನು ತೆಗೆದುಹಾಕಲಿದೆ. ಇದರ ವಿರದ್ಧ ಅನೇಕ ಆರೋಪಗಳು ಕೇಳಿ ಬಂದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಹೌದು, ಕೆಲ ಐಫೋನ್ ಮಾಲೀಕರಿಗೆ ಬೋಗಸ್ ನ್ಯೂಸ್ ಅಲರ್ಟ್ ಎಚ್ಚರಿಕೆಗಳನ್ನು ನೀಡುವ ಎಐ ಜನರೇಟೆಡ್ ಎರರ್ - ಪ್ರೋನ್ ಫೀಚರ್ಸ್ ಆಪಲ್ ತೆಗೆದುಹಾಕಲು ನಿರ್ಧರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಮುಂದಿನ ಸಾಫ್ಟ್‌ವೇರ್ iOS 18.3 ಅಪ್ ಡೇಟ್ ಕಾರ್ಯ ಭರದಿಂದ ಸಾಗಿದೆ. ಈ ಟೆಸ್ಟ್ ವರ್ಸನ್ ಭಾಗವಾಗಿ ಆಪಲ್ ತನ್ನ ಮಹತ್ವದ ನಿರ್ಧಾರವನ್ನು ತಿಳಿಸಿದೆ. ಈ ಬೀಟಾ ವರ್ಸನ್ ಐಫೋನ್ ಬಳಕೆದಾರರು ಮತ್ತು ಡೆವಲಪರ್‌ಗಳ ಗುಂಪಿಗೆ ಮಾತ್ರ ಲಭ್ಯವಿದೆ. ಆದರೆ, ಟೆಸ್ಟ್ ವರ್ಸನ್ ಅನ್ನು ಮುಂದಿನ ದಿನಗಳಲ್ಲಿ ಎಲ್ಲರಿಗೂ ದೊರೆಯುವಂತೆ ಮಾಡಲಾಗುತ್ತಿತ್ತು.
ಆದರೆ, ಬೀಟಾ ಅಪ್‌ಡೇಟ್‌ನಲ್ಲಿ ಟೆಕ್ನಾಲಾಜಿ ಇನ್ಫಾರೇಷನ್ ಮಾಹಿತಿ ರೂಪಿಸಲು ಕಾರಣವಾಗುವ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿರುವಾಗ ನ್ಯೂಸ್ ಮತ್ತು ಎಂಟರ್ಟೈನ್ಮೆಂಟ್ಗಾಗಿ ಎಐ-ಜನರೇಟೆಡ್ ಫೀಚರ್ ಅನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ. ಈ ಬಗ್ಗೆ ಆಪಲ್ ಅಧಿಕೃತವಾಗಿ ಹೇಳಿದೆ. ಆದರೆ, ಆಪಲ್‌ನ ಐಪ್ಯಾಡ್ ಮತ್ತು ಮ್ಯಾಕ್ ಕಂಪ್ಯೂಟರ್‌ಗಳಿಗೆ ಇದೇ ರೀತಿಯ ಸಾಫ್ಟ್‌ವೇರ್ ಅಪ್ಡೇಟ್ಗಳು ಸಹ ಪರೀಕ್ಷಾ ಹಂತದಲ್ಲಿವೆ.
ಇದು ಕೇವಲ ತಾತ್ಕಾಲಿಕವಾಗಿದ್ದರೂ ಸಹ ನಿಷ್ಕ್ರಿಯಗೊಳಿಸುವಿಕೆಯಿಂದ ಐಫೋನ್ ಮತ್ತು ಅದರ ಇತರ ಉತ್ಪನ್ನಗಳಿಗೆ ಎಐ ಅನ್ನು ತರುವ ಆಪಲ್‌ನ ಪ್ರಯತ್ನಗಳಿಗೆ ಹಿಂದೇಟು ಬಿದ್ದಿದೆ ಎಂದು ಹೇಳಬಹುದು. ಕಳೆದ ಸೆಪ್ಟೆಂಬರ್‌ನಲ್ಲಿ ಐಫೋನ್ 16 ಸೀರಿಸ್ ಪ್ರಾರಂಭದ ಜೊತೆ ಈ ಪ್ರಯತ್ನ ಶುರುವಾಯಿತು. ಇದು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊ ಕಂಪನಿಯು "ಆಪಲ್ ಇಂಟೆಲಿಜೆನ್ಸ್" ಎಂದು ಕರೆಯುವ ತಂತ್ರಜ್ಞಾನಕ್ಕೆ ಅಗತ್ಯವಾದ ಕಂಪ್ಯೂಟರ್ ಚಿಪ್‌ನೊಂದಿಗೆ ಸಜ್ಜುಗೊಂಡಿದೆ. 2023 ರ ಪ್ರೀಮಿಯಂ ಐಫೋನ್ 15 ಮಾದರಿಗಳು ಸಹ AI ಪ್ರೊಸೆಸರ್ ಒಳಗೊಂಡಿವೆ.
ಸರ್ಚ್ ರಿಸಲ್ಟ್ ಗಳ ಮೇಲೆ ಎಐ-ಜನರೇಟೆಡ್ನ ಕೆಲವು ವಿಲಕ್ಷಣ ಉತ್ತರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದವು. ಇದರೊಂದಿಗೆ ಕೆಲ ತಪ್ಪಾದ ಮಾಹಿತಿ ಹೊರಹಾಕುತ್ತಿರುವುದು ಕಂಡು ಬಂತು. ಈ ಘಟನೆ ಬಳಿಕ ಕಳೆದ ವರ್ಷ ಗೂಗಲ್ ತನ್ನ ಸರ್ಚ್ ಎಂಜಿನ್‌ನ ಹೊಸ ಆವೃತ್ತಿಯನ್ನು ಮರು ಪರಿಶೀಲಿಸುವಂತೆ ಮಾಡಿತು.