ETV Bharat / entertainment

ವಾರ್​ ಸೀಕ್ವೆನ್ಸ್​ ಶೂಟಿಂಗ್​ ತಯಾರಿಯಲ್ಲಿ 'ಕಾಂತಾರ ಚಾಪ್ಟರ್ 1' ಚಿತ್ರತಂಡ - KANTARA CHAPTER 1

ದೊಡ್ಡ ಯುದ್ಧ ಸನ್ನಿವೇಶ ಚಿತ್ರೀಕರಿಸುವತ್ತ ಕಾಂತಾರ ಚಾಪ್ಟರ್ 1 ಚಿತ್ರತಂಡ ಬ್ಯುಸಿಯಾಗಿದೆ. ಪ್ರಸ್ತುತ

Kantara chapter 1
ಕಾಂತಾರ ಚಾಪ್ಟರ್ 1 (Photo: Film Poster)
author img

By ETV Bharat Karnataka Team

Published : Jan 21, 2025, 7:09 PM IST

ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದ 'ಕಾಂತಾರ' ನಿರೀಕ್ಷೆಗೂ ಮೀರಿ ವಿಶ್ವಾದ್ಯಂತ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿತು. ವಿಭಿನ್ನ ಕಥಾಹಂದರ, ಕಥೆ ರವಾನಿಸಿದ ರೀತಿ ಮತ್ತು ರಿಷಬ್ ಶೆಟ್ಟಿಯವರ ಅದ್ಭುತ ಅಭಿನಯ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಅದ್ಭುತ ಸಿನಿಮೀಯ ಅನುಭವ ಪ್ರೇಕ್ಷಕರಿಗೆ ಪೂರೈಸುವಲ್ಲಿ ಕಾಂತಾರ ಯಶ ಕಂಡಿತ್ತು.

ಅದ್ಭುತ ಯಶಸ್ಸಿನ ನಂತರ, ಹೊಂಬಾಳೆ ಫಿಲ್ಮ್ಸ್ 'ಕಾಂತಾರ: ಚಾಪ್ಟರ್​​ 1' ಅನ್ನು ಘೋಷಿಸಿತು. ಇದು ಅಭಿಮಾನಿಗಳಲ್ಲಿ ಉತ್ಸಾಹ ಸೃಷ್ಟಿಸಿತು. ಈಗಾಗಲೇ ಬಿಡುಗಡೆಗೊಂಡಿರುವ ಪೋಸ್ಟರ್ಸ್, ಗ್ಲಿಂಪ್ಸ್​ ಪ್ರೇಕ್ಷಕರ ಗಮನ ಸೆಳೆದಿವೆ. ತಮ್ಮ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಪ್ರಸ್ತುತ ದೊಡ್ಡ ಯುದ್ಧ ಸನ್ನಿವೇಶವನ್ನು ಚಿತ್ರೀಕರಿಸುವತ್ತ ಚಿತ್ರತಂಡ ಗಮನ ಹರಿಸಿದೆ. ಇದರಲ್ಲಿ ಹಲವು ಅಂತಾರಾಷ್ಟ್ರೀಯ ತಂತ್ರಜ್ಞರು ಭಾಗವಹಿಸುತ್ತಿದ್ದಾರೆ.

ಮೂಲಗಳ ಪ್ರಕಾರ, ಹೊಂಬಾಳೆ ಫಿಲ್ಮ್ಸ್ ಪ್ರಸ್ತುತ ಕಾಂತಾರ: ಅಧ್ಯಾಯ 1ಗಾಗಿ ದೊಡ್ಡ ಪ್ರಮಾಣದ ಯುದ್ಧದ ಸನ್ನಿವೇಶವನ್ನು ಚಿತ್ರೀಕರಿಸಲು ಮುಂದಾಗಿದೆ. ಇದಕ್ಕಾಗಿ ನಿರ್ಮಾಣ ಸಂಸ್ಥೆ ದೊಡ್ಡ ತಂಡ ಮತ್ತು ಅನೇಕ ಅಂತಾರಾಷ್ಟ್ರೀಯ ಎಕ್ಸ್​​ಪರ್ಟ್ಸ್ ಜೊತೆ ಸೇರಿ ಕೆಲಸ ಮಾಡಿದೆ. ಈ ವಾರ್ ಸೀಕ್ವೆನ್ಸ್ ಭರ್ಜರಿಯಾಗಿ ಮೂಡಿ ಬರೋ ನಿರೀಕ್ಷೆಯಿದೆ. ಈ ಭಾಗದ ಚಿತ್ರೀಕರಣ 3 ತಿಂಗಳು ತೆಗೆದುಕೊಳ್ಳಲಿದೆ.

ಇದು ಸಿನಿಪ್ರಿಯರಿಗೆ ಸರಿಸಾಟಿಯಿಲ್ಲದ ಸಿನಿಮೀಯ ಅನುಭವ ನೀಡಲು ಚಲನಚಿತ್ರ ನಿರ್ಮಾಪಕರ ಸಮರ್ಪಣೆ ಎತ್ತಿ ತೋರಿಸುತ್ತದೆ. ಚಿತ್ರತಂಡ ತನ್ನ ಇತಿಮಿತಿಗಳನ್ನು ಮೀರಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಏನೂ ಆಗಿಲ್ಲ ಎಂಬಂತೆ ನಡೆದು ಬಂದ ಪಟೌಡಿ ಕುಡಿ ಸೈಫ್​; ಬೆನ್ನೊಳಗಿತ್ತು 2.5 ಇಂಚು ಉದ್ದದ ಚಾಕು

ಇನ್ನೂ ಚಿತ್ರತಂಡ ಕೆಲ ಆರೋಪಗಳನ್ನು ಎದುರಿಸಿದೆ. ಷರತ್ತು ಉಲ್ಲಂಘಿಸಿದ್ದರೆ ಶೂಟಿಂಗ್​​ಗೆ ನಿರ್ಬಂಧ ಹೇರಿ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗೆ ತಿಳಿಸಿದ್ದರು. ಶೂಟಿಂಗ್​ ವೇಳೆ ಸ್ಫೋಟಕ ಬಳಸುತ್ತಿದ್ದು, ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ವರದಿಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ತಿಳಿಸಿದ್ದರು.

ಇದನ್ನೂ ಓದಿ: ಗೇಮ್ ಚೇಂಜರ್ ನಿರ್ಮಾಪಕ ದಿಲ್ ರಾಜು, ಪುಷ್ಪ 2ರ ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ದಾಳಿ - ವಿಡಿಯೋ

ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ವಲಯದ ಶನಿವಾರ ಸಂತೆ ಬಳಿ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸದ್ಯ ಚಿತ್ರೀಕರಣ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.