WhatsApp New Year Effects:ಇನ್ನು ಕೆಲವೇ ದಿನಗಳಲ್ಲಿ ಈ ವರ್ಷ ಮುಗಿಯಲಿದೆ. ನಾವೆಲ್ಲರೂ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಇನ್ನು ಕ್ರಿಸ್‌ಮಸ್‌ಗೂ ಹೆಚ್ಚು ದಿನಗಳು ಬಾಕಿಯಿಲ್ಲ. ಸದ್ಯ ಎಲ್ಲರೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಬ್ಬದ ರಜೆ ಸವಿಯುವ ಮೂಡ್ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾಲ್, ಚಾಟ್ಗಳಲ್ಲಿ ಹಬ್ಬದ ವಾತಾವರಣ ತರಲು ವಾಟ್ಸ್ಆ್ಯಪ್ ರೆಡಿಯಾಗಿದೆ.
ಇದಕ್ಕಾಗಿ ಹೊಸ ವರ್ಷದ ಮುನ್ನವೇ ಫೆಸ್ಟಿವಲ್ ಥೀಮ್‌ನಲ್ಲಿ ಕೆಲವು ಫನ್ನಿ ಫೀಚರ್‌ಗಳನ್ನು ವಾಟ್ಸ್ಆ್ಯಪ್ ತಂದಿದೆ. ಕೆಲ ದಿನಗಳ ಕಾಲ ಬಳಕೆದಾರರಿಗೆ ಕಾಲಿಂಗ್ ಎಫೆಕ್ಟ್, ಅನಿಮೇಷನ್ ಜೊತೆಗೆ ಸ್ಟಿಕ್ಕರ್‌ಗಳನ್ನು ಪರಿಚಯಿಸಿತು. ಅಷ್ಟೇ ಅಲ್ಲ ವಾಟ್ಸ್ಆ್ಯಪ್ ಕಂಪನಿ ವಿಡಿಯೋ ಕರೆಗಳನ್ನು ಮಾಡಲು ಮತ್ತು ಈ ಹಬ್ಬದ ಋತುವಿನಲ್ಲಿ ಹೆಚ್ಚು ಆನಂದದಾಯಕವಾಗಿ ಚಾಟ್ ಮಾಡಲು ಪ್ರಯತ್ನಿಸುತ್ತಿದೆ.
ವಾಟ್ಸಾಪ್ನಲ್ಲಿ ಹೊಸ ವರ್ಷದ ವೈಶಿಷ್ಟ್ಯಗಳು:ಈ ಕ್ರಿಸ್ಮಸ್ ಮತ್ತು ಹೊಸ ವರ್ಷದ ರಜಾದಿನಗಳಲ್ಲಿ ವಾಟ್ಸಾಪ್ ಬಳಕೆದಾರರು ಹಬ್ಬದ ಬ್ಯಾಕ್ಗ್ರೌಂಡ್ ಮತ್ತು ಫಿಲ್ಟರ್‌ಗಳನ್ನು ಬಳಸಬಹುದು ಎಂದು ಕಂಪನಿ ಹೇಳಿದೆ. ಇವುಗಳೊಂದಿಗೆ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡುವಾಗ ಬಳಸಬಹುದಾದ ಅನಿಮೇಷನ್ಗಳನ್ನೂ ಹೊರ ತರಲಾಗಿದೆ.
ವಾಟ್ಸ್ಆ್ಯಪ್ನಲ್ಲಿ ವಿಡಿಯೋ ಕರೆಗಳನ್ನು ಮಾಡುವಾಗ ನೀವು ಹೊಸ ವರ್ಷದ ಥೀಮ್‌ನೊಂದಿಗೆ ಹೊಸ ಕಾಲಿಂಗ್ ಎಫೆಕ್ಟ್ಗಳನ್ನು ಬಳಸಬಹುದು. ಹೊಸ ವರ್ಷದ ಶುಭಾಶಯಗಳನ್ನು ವ್ಯಕ್ತಪಡಿಸಲು ಸ್ಟಿಕ್ಕರ್‌ಗಳನ್ನು ಒದಗಿಸಲಾಗಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ.
ಅಷ್ಟೇ ಅಲ್ಲ ವಾಟ್ಸ್ಆ್ಯಪ್ ಕೆಲವು ಹೊಸ ಸ್ಟಿಕ್ಕರ್‌ಗಳನ್ನು ಸಹ ಪರಿಚಯಿಸಿದೆ. ಹೊಸ ವರ್ಷದ ಥೀಮ್‌ಗೆ ಹೊಂದಿಕೆಯಾಗುವ ಅವತಾರ್ ಸ್ಟಿಕ್ಕರ್‌ಗಳೊಂದಿಗೆ ಕ್ಯುರೇಟೆಡ್ ನ್ಯೂ ಇಯರ್ಸ್ ಈವ್ (NYE) ಸ್ಟಿಕ್ಕರ್ ಪ್ಯಾಕ್ ಅನ್ನು ಪ್ಲಾಟ್‌ಫಾರ್ಮ್ ತಂದಿದೆ. ರಜಾದಿನದ ಶುಭಾಶಯಗಳನ್ನು ಮೋಜು ಮತ್ತು ಇಂಟರಾಕ್ಟಿವ್ ರೀತಿಯಲ್ಲಿ ಕಳುಹಿಸಲು ಈ ವೈಶಿಷ್ಟ್ಯಗಳು ಉತ್ತಮ ಮಾರ್ಗವಾಗಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ.
ವಾಟ್ಸ್ಆ್ಯಪ್ ಇತ್ತೀಚೆಗೆ ನಾಲ್ಕು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿತು. ರಜಾ ಕಾಲವಾಗಿರುವುದರಿಂದ ಬಳಕೆದಾರರ ಸಂವಹನವನ್ನು ಇನ್ನಷ್ಟು ಸುಧಾರಿಸಲು ಇವುಗಳನ್ನು ತರಲಾಗಿದೆ. ಇವುಗಳೊಂದಿಗೆ ನೀವು ಆಡಿಯೋ ಮತ್ತು ವಿಡಿಯೋ ಕಾಲಿಂಗ್ ಸಮಯದಲ್ಲಿ ಉತ್ತಮ ಅನುಭವ ಪಡೆಯಬಹುದು. ವಾಟ್ಸ್ಆ್ಯಪ್ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದರೊಂದಿಗೆ, ಗ್ರೂಪ್ ಕಾಲಿಂಗ್ಗೆ ಆಯ್ದ ಜನರು ಮಾತ್ರ ಅಧಿಸೂಚನೆಯನ್ನು ಸ್ವೀಕರಿಸುತ್ತಾರೆ. ಇದರೊಂದಿಗೆ ಇದು ವಿಡಿಯೋ ಕರೆಗಳಲ್ಲಿ ಹೊಸ ಎಫೆಕ್ಟ್‌ಗಳು, ಉತ್ತಮ ಡೆಸ್ಕ್‌ಟಾಪ್ ಕರೆ, ಉತ್ತಮ ವಿಡಿಯೋ ಗುಣಮಟ್ಟದ ಸೌಲಭ್ಯವನ್ನು ಸಹ ಒದಗಿಸುತ್ತದೆ.
ಓದಿ:ವಾಟ್ಸಾಪ್ನಲ್ಲಿ ಮತ್ತೊಂದು ಇನ್ಟ್ರೆಸ್ಟಿಂಗ್ ಫೀಚರ್- ಇನ್ಮುಂದೆ ಗ್ರೂಪ್ ಚಾಟ್ನಲ್ಲಿ ನೋ ಕನ್ಫೂಷನ್!