WhatsApp New Features: ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಈಗ ಹೊಸ ಕಾಲಿಂಗ್ ವೈಶಿಷ್ಟ್ಯವನ್ನು ಪರಿಚಯಿಸಲಿದ್ದು, ಇದು ಬಳಕೆದಾರರಿಗೆ ಬಹಳಷ್ಟು ಸಹಾಯವಾಗಲಿದೆ. ಬಳಕೆದಾರರ ಸಂವಹನವನ್ನು ಸುಧಾರಿಸಲು ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯಗಳನ್ನು ಹೊರ ತರಲು ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿಯು ಹೇಳಿದೆ.
ಬಳಕೆದಾರರ ಸಂವಹನವನ್ನು ಸುಧಾರಿಸಲು ಹೊಸ ಕಾಲಿಂಗ್ ಮತ್ತು ಚಾಟ್ ಮೆಸೇಜ್ ಟ್ರಾನ್ಸ್ಲೆಟ್ ಫೀಚರ್ ತರುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಇದು ಗ್ರೂಪ್ ಕಾಲಿಂಗ್ನಲ್ಲಿ ಭಾಗವಹಿಸುವವರನ್ನು ಆಯ್ಕೆ ಮಾಡಲು ಮತ್ತು ವಿಡಿಯೋ ಕರೆಗಳ ಸಮಯದಲ್ಲಿ Snap ಮತ್ತು Insta ತರಹದ ಪಪ್ಪಿ ಇಯರ್ಗಳಂತಹ ಮೋಜಿನ ಪರಿಣಾಮಗಳನ್ನು ಬಳಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತಿದೆ.
ನಿಮ್ಮಿಷ್ಟದ ಆಯ್ಕೆ ಮಾಡಿಕೊಳ್ಳಬಹುದು:ಈ ಹಿಂದೆ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಕರೆ ಮಾಡಿದಾಗ ಗ್ರೂಪಿನಲ್ಲಿ ಇರುವ ಎಲ್ಲಾ ಸದಸ್ಯರಿಗೆ ಏಕಕಾಲದಲ್ಲಿ ನೋಟಿಫಿಕೇಶನ್ ಹೋಗುತ್ತಿತ್ತು. ಆಗ ಯಾರು ಬೇಕಾದರೂ ವಿಡಿಯೋ ಕಾಲಿಂಗ್ನಲ್ಲಿ ಭಾಗಿಯಾಗಬಹುದಿತ್ತು. ಆದರೆ ಈಗ ವಾಟ್ಸ್ಆ್ಯಪ್ ನೀವು ಪಾಲ್ಗೊಳ್ಳುವವರ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ನೀಡಿದೆ. ಇದರ ಪ್ರಯೋಜನವೆಂದರೆ ಇಡೀ ಗ್ರೂಪ್ಗೆ ಈ ಕರೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಇದರಲ್ಲಿ ನೀವು ಆಯ್ಕೆ ಮಾಡಿದ ಜನರು ಮಾತ್ರ ಅಧಿಸೂಚನೆಯನ್ನು ಪಡೆಯುತ್ತಾರೆ.
ವಾಟ್ಸ್ಆ್ಯಪ್ ಈಗ ವಿಡಿಯೋ ಕರೆಗಳನ್ನು ಹೆಚ್ಚು ಮೋಜುಗೊಳಿಸುವ ಪ್ರಯತ್ನ ಮಾಡುತ್ತಿದೆ. ಈಗ ನೀವು ವಿಡಿಯೋ ಕರೆ ಸಮಯದಲ್ಲಿ ವಿವಿಧ ಟೂಲ್ಗಳನ್ನು ಆಯ್ಕೆ ಮಾಡಬಹುದು. ಈಗ ನೀವು ಕರೆಗಾಗಿ ಲಿಂಕ್ ಕ್ರಿಯೆಟ್ ಮಾಡಲು ಅಥವಾ ಡೈರೆಕ್ಟ್ ನಂಬರ್ ಡಯಲ್ ಮಾಡಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯುತ್ತೀರಿ.