ಹೈದರಾಬಾದ್: ಆಧಾರ್ ಭಾರತೀಯ ನಾಗರಿಕರಿಗೆ ನೀಡುವ ಪ್ರಾಥಮಿಕ ಗುರುತಿನ ಚೀಟಿಯಾಗಿದೆ. ಆಧಾರ್ 12 ಅಂಕಿಗಳ ವಿಶಿಷ್ಟ ಸಂಖ್ಯೆಯಾಗಿದೆ. ಇದು ನಿಮ್ಮ ಹೆಸರು, ವಿಳಾಸ, ಬೆರಳಚ್ಚು, ಐರಿಸ್ ಮುಂತಾದ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ. ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರೆಗೂ ಎಲ್ಲದಕ್ಕೂ ಆಧಾರ್ ಅಗತ್ಯವಿದೆ.
ಮಕ್ಕಳು ಆಧಾರ್ ಕಾರ್ಡ್ ಪಡೆಯಬಹುದು. ಆದರೆ, ಇಂದು ಆನ್‌ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಈ ಹಂತದಲ್ಲಿ ಸೈಬರ್ ಅಪರಾಧಿಗಳ ಕೈಗೆ ನಿಮ್ಮ ಆಧಾರ್ ಕಾರ್ಡ್ ಸಿಕ್ಕರೆ, ಅದನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವಿದೆ. ಅದಕ್ಕಾಗಿಯೇ ನಿಮ್ಮ ಆಧಾರ್ ಕಾರ್ಡ್ ವಿವರಗಳು ಇತರರಿಗೆ ಸಿಕ್ಕಿ ಬೀಳದಂತೆ ನೀವು ಎಚ್ಚರಿಕೆ ವಹಿಸಬೇಕು. ನಿಮಗೆ ಗೊತ್ತಿರುವ ಯಾರಾದರೂ ತೀರಿಕೊಂಡರೆ, ಅವನ ಅಥವಾ ಅವಳ ಆಧಾರ್ ಕಾರ್ಡ್‌ಗೆ ಏನಾಗುತ್ತದೆ? ಇದು ಮಾನ್ಯವಾಗಿರುತ್ತದೆಯೇ? ಅಥವಾ ಆ ಆಧಾರ್ ಕಾರ್ಡ್ ಅನ್ನು ಸರಂಡರ್ ಮಾಡುವ ವ್ಯವಸ್ಥೆ ಏನಾದರೂ ಇದೆಯೇ, ಅಥವಾ ಮುಚ್ಚಬೇಕೆ? ಹೀಗೆ ಹತ್ತು ಹಲವು ಅನುಮಾನಗಳಿವೆ. ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ
ಸತ್ತ ವ್ಯಕ್ತಿಯ ಆಧಾರ್‌ನೊಂದಿಗೆ ಏನು ಮಾಡಬೇಕು?: UIDAI ಆಧಾರ್ ಕಾರ್ಡ್ ನೀಡುವ ವ್ಯವಸ್ಥೆ ರೂಪಿಸಿದೆ. ಈ UIDAI ನಿಂದ ಪ್ರತಿಯೊಬ್ಬ ಭಾರತೀಯನಿಗೂ ಆಧಾರ್ ಕಾರ್ಡ್ ನೀಡಲಾಗುತ್ತದೆ. ಆದರೆ ಆಧಾರ್ ಅನ್ನು ಸರಂಡರ್ ಮಾಡಲು ಅಥವಾ ರದ್ದುಗೊಳಿಸಲು ಯಾವುದೇ ವ್ಯವಸ್ಥೆ ಇದುವರೆಗೂ ಮಾಡಲಾಗಿಲ್ಲ. ಆದರೆ ಅದರ ಭದ್ರತೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.