Vivo X200 Series Global Launch:ಪ್ರಮುಖ ಸ್ಮಾರ್ಟ್ಫೋನ್ ಕಂಪನಿ ವಿವೋ ತನ್ನ ಹ್ಯಾಂಡ್ಸೆಟ್ ಅನ್ನು ಚೀನಾದಲ್ಲಿ ಪ್ರಾರಂಭಿಸಿದ ತಿಂಗಳ ಬಳಿಕ ವಿವೋ ಎಕ್ಸ್200 ಸಿರೀಸ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿದೆ. ಇದು ಮಲೇಷಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಈ ವಿವೋ ಎಕ್ಸ್200 ಸಿರೀಸ್ನಲ್ಲಿ ಮೂರು ಮಾಡೆಲ್ ಮೊಬೈಲ್ಗಳನ್ನು ಒಳಗೊಂಡಿದೆ. ಇದರಲ್ಲಿ ಜೀಸ್ ಆಫ್ಟಿಕ್ಸ್ ಕೋ-ಇಂಜನಿರ್ಡ್ ಕ್ಯಾಮೆರಾ ಸಿಸ್ಟಮ್ ಇವೆ. ವಿವೋ ಎಕ್ಸ್200 ಲೈನ್ಅಪ್ ಈ ತಿಂಗಳ ಕೊನೆಯಲ್ಲಿ ಅಥವಾ ಡಿಸೆಂಬರ್ ಮೊದಲ ವಾರ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತಾದ ಮಾಹಿತಿ ಇಲ್ಲಿದೆ..
ವಿವೋ ಎಕ್ಸ್200 ಸಿರೀಸ್ ಮಾಡೆಲ್ಗಳು:
- Vivo X200
- Vivo X200 Pro
- Vivo X200 Pro Mini
ವಿವೋ ತನ್ನ ಮಲೇಷಿಯಾ ಫೇಸ್ಬುಕ್ ಪೇಜ್ನಲ್ಲಿ ವಿವೋ ಎಕ್ಸ್200 ಸಿರೀಸ್ ಅನ್ನು ಶುಕ್ರವಾರ ಪರಿಚಯಿಸಿದೆ. ಆದ್ರೆ ಮಲೇಷಿಯಾದಲ್ಲಿ ಈ ಸಿರೀಸ್ ಯಾವಾಗ ಪ್ರಾರಂಭಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಇನ್ನು ಟೀಸರ್ ಪೋಸ್ಟ್ನಲ್ಲಿ ಈ ಸ್ಮಾರ್ಟ್ಫೋನ್ನ ಡಿಸೈನ್ ಕುರಿತು ಮಾಹಿತಿ ನೀಡಿದೆ. ಇದು ವಿವೋ ಎಕ್ಸ್200, ವಿವೋ ಎಕ್ಸ್200 ಮಿನಿ ಮಾಡೆಲ್ಗಳು ಟೈಟಾನಿಯಂ ಮತ್ತು ಟೈಟಾನಿಯಂ ಗ್ರೀನ್ ಕಲರ್ ಆಪ್ಷನ್ಗಳು ಇವೆ.