ಹೈದರಾಬಾದ್: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಲು ವಿವೋ ಕಂಪನಿ ಸಿದ್ಧವಾಗಿದೆ. ಕಂಪನಿ ತನ್ನ ಹೊಸ ಮೊಬೈಲ್ Vivo V30e ಬಿಡುಗಡೆ ಮಾಡಲು ಸಜ್ಜಾಗಿದೆ. Vivo V30e ಯೂನಿಕ್ ವೈಶಿಷ್ಟ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಮುಂಬರುವ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಅನೇಕ ವರದಿಗಳು ಈಗಾಗಲೇ ಹೊರಬಂದಿವೆ. ಈ ವರದಿಗಳ ಪ್ರಕಾರ Vivo V30e ಬಲವಾದ ವೈಶಿಷ್ಟ್ಯಗಳಿಂದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ತಯಾರಾಗಿದೆ. ಸೈಟ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸರ್ಟಿಫಿಕೇಶನ್‌ನಲ್ಲಿ ಈ ಸಾಧನವನ್ನ ಪಟ್ಟಿ ಮಾಡಲಾಗಿದೆ.
ಶೀಘ್ರದಲ್ಲೇ ವಿವೋ V30e ಬಿಡುಗಡೆ ಸಾಧ್ಯತೆ: ಹೊಸ ಫೋನ್ನಲ್ಲಿ ಏನೇನು ವಿಶೇಷತೆಗಳಿರಬಹುದು? - Vivo V30e Launch in India Soon
ಭಾರತದಲ್ಲಿ ಶೀಘ್ರದಲ್ಲೇ Vivo V30e ಲಾಂಚ್ ಆಗುವ ಸಾಧ್ಯತೆ ಇದೆ. Vivo V30eನ ಡಿಸ್ಪ್ಲೇ, ಕ್ಯಾಮೆರಾ ಮತ್ತು ಇತರ ವೈಶಿಷ್ಟ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈ ಬಗೆಗಿನ ಮಾಹಿತಿ ಇಲ್ಲಿದೆ.
Published : Apr 16, 2024, 1:31 PM IST
ಡಿಸ್ಪ್ಲೇ, ಕ್ಯಾಮೆರಾ ಸೇರಿದಂತೆ Vivo V30e ಹಲವು ವಿಶೇಷತೆಗಳನ್ನು ಹೊಂದಿದೆ. Vivo V30e ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ವಿವೋ ಕಂಪನಿ ಈ ಸುದ್ದಿಯನ್ನು ಅಧಿಕೃತವಾಗಿ ಇನ್ನೂ ಖಚಿತಪಡಿಸಿಲ್ಲ. ಅದೇ ಸಮಯದಲ್ಲಿ, ಆನ್‌ಲೈನ್‌ನಲ್ಲಿ ಹೊರಹೊಮ್ಮಿದ ಮಾಹಿತಿ ಪ್ರಕಾರ, Vivo V30e ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ Vivo V29e ನ ಅಪ್‌ಗ್ರೇಡ್ ಆವೃತ್ತಿ ಎಂಬುದಾಗಿ ತಿಳಿದು ಬಂದಿದೆ. ವರದಿಯ ಪ್ರಕಾರ, Vivo V30e ಸಹ ಪ್ರೀಮಿಯಂ ವಿನ್ಯಾಸ ಮತ್ತು ತೆಳುವಾದ 3D ಮಾಡಲ್ ಹೊಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ವೈಶಿಷ್ಟ್ಯಗಳೇನು?:
- ಮಾಹಿತಿಯ ಪ್ರಕಾರ, Vivo V30e ಹ್ಯಾಂಡ್‌ಸೆಟ್ 5500 mAh ಬ್ಯಾಟರಿಯೊಂದಿಗೆ ತೆಳುವಾದ ಫೋನ್ ಆಗಿರಲಿದೆ ಎಂಬ ವಿಚಾರ ಹೊರ ಬಿದ್ದಿದೆ.
- Vivo V30e ಔರಾ ಲೈಟ್ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ Sony IMX 882 ಹಿಂಭಾಗದ ಸಂವೇದಕವನ್ನು ಸಹ ಹೊಂದಿದೆ.
- ವರದಿ ಪ್ರಕಾರ, Vivo V30e ಎರಡು ಬಣ್ಣಗಳಲ್ಲಿ ಬಿಡುಗಡೆ ಆಗಬಹುದು ಎನ್ನಲಾಗಿದೆ
- Vivo V30e ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 Gen 1 SoC ನಿಂದ ಚಾಲಿತವಾಗಿದೆ.
- 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಈ ಮೊಬೈಲ್ ಹೊಂದಿರುವ ಸಾಧ್ಯತೆ ಇದೆ.