ಮುಂಬೈ: ಪ್ರಾಣಿ ಸಾಮ್ರಾಜ್ಯದ ಅನೇಕ ಪ್ರಾಣಿಗಳು ತಮಗೆ ಪರಿಚಯವಿಲ್ಲದ ಸ್ಥಳಗಳಿಂದ ಮನೆಗೆ ಹೋಗುವ ದಾರಿಯನ್ನು ನೈಸರ್ಗಿಕವಾಗಿ ಕಂಡು ಹಿಡಿಯುವ ಸಾಮರ್ಥ್ಯ ಹೊಂದಿವೆ. ಇವು ಮಾನವರನ್ನು ಅಚ್ಚರಿಗೆ ದೂಡುತ್ತಿರುವುದಂತೂ ಸುಳ್ಳಲ್ಲ. ಪ್ರಾಣಿಗಳ ಈ ಸಹಜ ಪ್ರಕ್ರಿಯೆಗೆ ನಾವು ಹೋಮಿಂಗ್ ಎಂದು ಕರೆಯುತ್ತೇವೆ. ವಲಸೆಯ ಸಮಯದಲ್ಲಿ ಪಕ್ಷಿಗಳು ಸಾವಿರಾರು ಮೈಲುಗಳಷ್ಟು ಹಾರಾಟ ಮಾಡುತ್ತವೆ. ಇರುವೆಗಳು ತಮ್ಮ ನೆಲೆಯಿಂದ ಹೊರ ಹೋಗಿ ಆಹಾರ ಹೆಕ್ಕಿ ಮತ್ತೆ ತಮ್ಮ ಗೂಡು ಸೇರುತ್ತವೆ. ಈ ಪ್ರಕ್ರಿಯೆಯಲ್ಲಿ ಅವು ತಾವು ಸಾಗಿ ಬಂದ ದಾರಿಯನ್ನು ನೆನಪಿನಲ್ಲಿ ಇಟ್ಟುಕೊಂಡು ಬಳಿಕ ತನ್ನ ಮೂಲ ನೆಲೆಗೆ ಹಿಂದಿರುಗುವಲ್ಲಿ ಯಶಸ್ವಿಯಾಗುತ್ತಿವೆ. ಪ್ರಾಣಿಗಳ ಈ ಸಹಜ ಪ್ರಕ್ರಿಯೆಗಳ ಮೇಲೆ ಇದೀಗ ಐಐಟಿ ಬಾಂಬ್ ಸಂಶೋಧಕರು ಅಧ್ಯಯನ ನಿರತರಾಗಿದ್ದು, ಇದಕ್ಕೆ ರೋಬೋಟ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ದೂರದವರೆಗೆ ಸಂದೇಶಗಳನ್ನು ತಲುಪಿಸಲು ಪಾರಿವಾಳಗಳನ್ನು ಮಾನವ ಬಳಕೆ ಮಾಡಿಕೊಂಡಿದ್ದು ಗೊತ್ತೇ ಇದೆ. ಆದರೆ ಈ ಪ್ರಾಣಿಗಳು ಯಾವಾಗಲೂ ಮನೆಗೆ ಹೋಗುವ ದಾರಿಯನ್ನು ಹೇಗೆ ಕಂಡುಕೊಳ್ಳುತ್ತವೆ ಮತ್ತು ಅದನ್ನು ಹೇಗೆ ಪರಿಣಾಮಕಾರಿಯಾಗಿ ಮಾಡುತ್ತವೆ ಎಂಬುದೇ ಮಾನವನಿಗೆ ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ. ಈ ಕುತೂಹಲಕಾರಿ ಸಾಮರ್ಥ್ಯದ ಬಗ್ಗೆ ಉತ್ತರ ಸಿಗದ ಹಲವು ಪ್ರಶ್ನೆಗಳಿವೆ. ಇದನ್ನು ಭೇದಿಸಲು ಈಗ ಐಐಟಿ ಬಾಂಬ್ ಮುಂದಾಗಿದೆ.
ರಹಸ್ಯವನ್ನು ತಿಳಿಯಲು ರೋಬೋಟ್‌ಗಳ ಬಳಕೆ:ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯ ಸಂಶೋಧಕರು ಈ ಆಕರ್ಷಕ ವಿದ್ಯಮಾನದ ಹಿಂದಿನ ರಹಸ್ಯವನ್ನು ಬಿಚ್ಚಿಡಲು ರೋಬೋಟ್‌ಗಳನ್ನು ಬಳಸುತ್ತಿದ್ದಾರೆ. ನಮ್ಮ ಸಂಶೋಧನಾ ಗುಂಪಿನ ಪ್ರಾಥಮಿಕ ಗುರಿ ಸಕ್ರಿಯ ಮತ್ತು ಜೀವಂತ ವ್ಯವಸ್ಥೆಗಳ ಭೌತಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದಾಗಿದೆ ಅಂತಿದ್ದಾರೆ ಐಐಟಿ ಬಾಂಬೆಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಿತಿನ್ ಕುಮಾರ್.
ಸೆಂಟಿಮೀಟರ್ ಗಾತ್ರದ ಸ್ವಯಂ ಚಾಲಿತ ಪ್ರೊಗ್ರಾಮೆಬಲ್ ರೋಬೋಟ್‌ಗಳ ಮೂಲಕ ಇಂತಹ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಮೂಲಕ ನಾವು ಪ್ರಾಣಿಗಳ ಹೋಮಿಂಗ್ ಸಾಮರ್ಥ್ಯವನ್ನು ಕಂಡುಕೊಳ್ಳಲು ನಿರತರಾಗಿದ್ದೇವೆ. ಸರಳವಾಗಿ ಹೇಳುವುದಾದರೆ ವೈಯಕ್ತಿಕ ಮತ್ತು ಸಾಮೂಹಿಕ ಮಟ್ಟದಲ್ಲಿ ಜೀವಂತ ಜೀವಿಗಳ ಚಲನಶೀಲತೆಯನ್ನು ಅನುಕರಿಸಲು ನಾವು ಈ ರೋಬೋಟ್‌ಗಳನ್ನು ರೂಪಿಸುತ್ತೇವೆ ಎಂದು ಐಐಟಿ ಬಾಂಬೆಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಿತಿನ್ ಕುಮಾರ್ ಹೇಳಿದ್ದಾರೆ.
ಡಾ. ಕುಮಾರ್ ಅವರ ತಂಡವು ಇಂತಹ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದೆ. ಅದು ಪ್ರಾಣಿಗಳಲ್ಲಿ ಕಂಡುಬರುವ ಆಹಾರ ಹುಡುಕುವಿಕೆ ಮತ್ತು ಹೋಮಿಂಗ್ ನಡವಳಿಕೆಯನ್ನು ಅನುಕರಿಸುತ್ತದೆ. ಈ ರೋಬೋಟ್ ಅನ್ನು ತನ್ನದೇ ಆದ ಸ್ವಂತಿಕೆ ಮೇಲೆ ಸ್ವಯಂಚಾಲಿತವಾಗಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ, ಪ್ರಾಣಿಗಳು ಆಹಾರವನ್ನು ಹುಡುಕುವ (ಫೊರೇಜಿಂಗ್), ತದನಂತರ ಮನೆಗೆ ಮರಳಲು (ಹೋಮಿಂಗ್) ಮಾರ್ಗದರ್ಶಿಯಾಗಿ ಬೆಳಕನ್ನು ಬಳಸುವುದಾಗಿದೆ. ಹೊಸ ಅಧ್ಯಯನದಲ್ಲಿ ಹೋಮಿಂಗ್‌ಗೆ ಆಧಾರವಾಗಿರುವ ತತ್ವಗಳನ್ನು ಅಧ್ಯಯನ ಮಾಡಲು ರೋಬೋಟ್ ಬಳಕೆ ಮಾಡಿಕೊಂಡಿದೆ.
ಅರೆ-ಯಾದೃಚ್ಚಿಕ ರೀತಿ:ಪ್ರಾಣಿಗಳು ಆಹಾರವನ್ನು ಹುಡುಕಲು ಹೇಗೆ ಸುತ್ತಾಡಬಹುದು ಎಂಬಂತೆ, ಅರೆ-ಯಾದೃಚ್ಚಿಕ ರೀತಿಯಲ್ಲಿ ಚಲಿಸಲು ರೋಬೋಟ್ ಅನ್ನು ರೂಪಿಸಲಾಗಿದೆ. ಈ ರೀತಿಯ ಚಲನೆಯನ್ನು ಆ್ಯಕ್ಟಿವ್ ಬ್ರೌನಿಯನ್ (ಎಬಿ) ಚಲನೆ ಎಂದು ಕರೆಯಲಾಗುತ್ತದೆ, ಇದು ಕಂಪ್ಯೂಟರ್ ಮಾದರಿ ಜೀವಂತ ಡೈನಾಮಿಕ್ಸ್ ಅನ್ನು ಅನುಕರಿಸುತ್ತದೆ. ಆವರ್ತಕ ಪ್ರಸರಣ ಎಂದು ಕರೆಯಲ್ಪಡುವ ಈ ರೋಬೋಟ್ ಆಗಾಗ್ಗೆ ತನ್ನ ದಿಕ್ಕು ಆಗಾಗ್ಗೆ ಬದಲಾಯಿಸುತ್ತದೆ. ಈ ಮೂಲಕ ತನ್ನ ಹಾದಿಯಲ್ಲಿ ಚಲಿಸಲು ನಿರ್ದಿಷ್ಟ ಮಟ್ಟದ ಯಾದೃಚ್ಚಿಕ ಕೆಲಸವನ್ನು ಮಾಡುತ್ತದೆ.
ರೋಬೋಟ್ ಮನೆಗೆ ಮರಳಬೇಕಾದಾಗ ಅದು ಬೇರೆ ಮೋಡ್‌ಗೆ ಬದಲಾಗುತ್ತದೆ. ಸಂಶೋಧಕರು ರೋಬೋಟ್ ಅನ್ನು ಬೆಳಕಿನ ಗ್ರೇಡಿಯಂಟ್ (ಬೆಳಕಿನ ತೀವ್ರತೆಯಲ್ಲಿ ಕ್ರಮೇಣ ಬದಲಾವಣೆ) ಯೊಂದಿಗೆ ಹೊಳೆಯುವಂತೆ ರೂಪಿಸಿದ್ದಾರೆ. ಇದು ರೋಬೋಟ್ ಅನ್ನು ತನ್ನ ಹಿಂದಿನ ದಾರಿಗೆ ಹಿಂತಿರುಗುವಂತೆ ಪ್ರೋಗ್ರಾಮ್ ಮಾಡಲಾಗಿದೆ. ನ್ಯಾವಿಗೇಟ್ ಮಾಡಲು ಕೆಲವು ಪ್ರಾಣಿಗಳು ಸೂರ್ಯ ಅಥವಾ ಇತರ ಪರಿಸರದ ಸೂಚನೆಗಳನ್ನು ಹೇಗೆ ಬಳಸಬಹುದು ಎಂಬುದನ್ನು ಈ ಪ್ರೋಗ್ರಾಮಿಂಗ್ನಲ್ಲಿ ಅಳವಡಿಸಲಾಗಿದೆ.