ಕರ್ನಾಟಕ

karnataka

ETV Bharat / technology

ರಿಲಯನ್ಸ್​, ಏರ್​ಟೆಲ್​, ವೊಡಾಫೋನ್​ ಅಲ್ಲ ಬಿಎಸ್​ಎನ್​ಎಲ್​ಗೂ ಬಿಡಲಿಲ್ಲ ಟ್ರಾಯ್, ಭಾರೀ ದಂಡ! ​ - TRAI BIG DECISION

TRAI Big Decision: ರಿಲಯನ್ಸ್​, ಏರ್​ಟೆಲ್​, ವೊಡಾಫೋನ್​ ಅಲ್ಲ ಬಿಎಸ್​ಎನ್​ಎಲ್​ಗೂ ಟ್ರಾಯ್​ ಬಿಟ್ಟಿಲ್ಲ. ಈ ಕಂಪನಿಗಳು ಸೇರಿದಂತೆ ಕೆಲ ಕಂಪನಿಗಳಿಗೆ ಟ್ರಾಯ್​ ಭಾರೀ ದಂಡ ವಿಧಿಸಿದೆ.

FINE ON TELECOM GIANTS  SPAM CALL INACTION  BSNL RELIANCE AIRTEL VODAFONE IDEA
ರಿಲಯನ್ಸ್​, ಏರ್​ಟೆಲ್​, ವೊಡಾಫೋನ್​ ಅಲ್ಲ ಬಿಎಸ್​ಎನ್​ಎಲ್​ಗೂ ಬಿಡಲಿಲ್ಲ ಟ್ರಾಯ್ (ETV Bharat File Photo)

By ETV Bharat Tech Team

Published : Dec 24, 2024, 8:45 AM IST

TRAI Big Decision: ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ವಿಫಲವಾದ ಬಿಎಸ್​ಎನ್​ಎಲ್​, ರಿಲಯನ್ಸ್ ಜಿಯೋ, ಏರ್​ಟೆಲ್​ ಮತ್ತು ವೊಡಾಫೋನ್​- ಐಡಿಯಾಗೆ ಟ್ರಾಯ್ 12 ಕೋಟಿ ರೂಪಾಯಿ ದಂಡ ವಿಧಿಸಿದೆ. ಹಿಂದಿನ ದಂಡದೊಂದಿಗೆ ಒಟ್ಟು ಮೊತ್ತ 141 ಕೋಟಿ ರೂ. ಆಗಿದೆ.

ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ವಿಫಲವಾದ ಟೆಲಿಕಾಂ ಕಂಪನಿಗಳಿಗೆ ದಂಡ ವಿಧಿಸಲಾಗಿದೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದೇಶದ ಎಲ್ಲ ನಾಲ್ಕು ಕಂಪನಿಗಳಾದ ಬಿಎಸ್‌ಎನ್‌ಎಲ್, ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಮತ್ತು ಕೆಲವು ಸಣ್ಣ ಕಂಪನಿಗಳಿಗೆ ದಂಡ ವಿಧಿಸಿದೆ.

ಮಾಧ್ಯಮ ವರದಿ ಪ್ರಕಾರ, ಈ ಬಾರಿ ಕಂಪನಿಗಳಿಗೆ 12 ಕೋಟಿ ರೂ. ದಂಡ ವಿಧಿಸಲಾಗಿದೆ. ಈ ಹಿಂದೆ ವಿಧಿಸಿದ್ದ ದಂಡದ ಮೊತ್ತವೂ ಸೇರಿದರೆ ಒಟ್ಟು 141 ಕೋಟಿ ರೂ. ಆಗಿದೆ. ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ ಗ್ರಾಹಕ ಆದ್ಯತೆಯ ನಿಯಮಗಳ (TCCCPR) ಅಡಿ ಟ್ರಾಯ್​ ಈ ದಂಡವನ್ನು ವಿಧಿಸಿದೆ.

ಟ್ರಾಯ್​ ಕೂಡ TCCCPR ಅನ್ನು ಬಲಪಡಿಸುವ ಕೆಲಸ ಮಾಡುತ್ತಿದೆ. ಈ ಎಲ್ಲ ಕೆಲಸಗಳಿಗೆ ತಾವು ಮಾತ್ರ ಜವಾಬ್ದಾರರಲ್ಲ ಎಂದು ಕಂಪನಿಗಳು ಹೇಳುತ್ತವೆ. ಇತ್ತೀಚಿನ ಸಭೆಯಲ್ಲಿ, ಟೆಲಿಕಾಂ ಕಂಪನಿಗಳು ವಾಟ್ಸ್​ಆ್ಯಪ್​, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಟೆಲಿಮಾರ್ಕೆಟರ್‌ಗಳಂತಹ ಓವರ್ - ದ - ಟಾಪ್ (OTT) ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಸ್ಪ್ಯಾಮ್ ಕರೆಗಳಿಗೆ ಜವಾಬ್ದಾರರಾಗಬೇಕು ಎಂದು ಒತ್ತಾಯಿಸಿದರು.

ಈ ಪ್ಲಾಟ್‌ಫಾರ್ಮ್‌ಗಳನ್ನು ನಿಯಮಗಳಿಂದ ಹೊರಗಿಟ್ಟರೆ, ಸ್ಪ್ಯಾಮ್ ಮತ್ತು ಸ್ಕ್ಯಾಮ್ ಕರೆಗಳನ್ನು ನಿಲ್ಲಿಸಲಾಗುವುದಿಲ್ಲ. ಏಕೆಂದರೆ ಕಾನೂನಿನಲ್ಲಿ ಅವುಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಟೆಲಿಕಾಂ ಕಂಪನಿಗಳು ಹೇಳುತ್ತವೆ.

ಸಭೆಯಲ್ಲಿ ಕಂಪನಿಗಳು ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನಗಳು ಮತ್ತು ಹೂಡಿಕೆಗಳನ್ನು ಮಾಡಿದ್ದೇವೆ ಎಂದು ಹೇಳಿದರು. ಆದ್ದರಿಂದ ಇತರ ಕೆಲವು ಕಂಪನಿಗಳು ಮತ್ತು ಟೆಲಿಮಾರ್ಕೆಟರ್‌ಗಳ ತಪ್ಪುಗಳಿಂದಾಗಿ ದಂಡ ವಿಧಿಸಬಾರದು ಎಂದು ಆಗ್ರಹಿಸಿದವು. ಹೀಗಾಗಿ ಈ ವಾದದೊಂದಿಗೆ ಕಂಪನಿಗಳು ಇನ್ನೂ ದಂಡ ಪಾವತಿಸಿಲ್ಲ.

ದಂಡ ಪಾವತಿಸಲು ವಿಫಲವಾಗಿರುವ ಈ ಕಂಪನಿಗಳ ಬ್ಯಾಂಕ್ ಗ್ಯಾರಂಟಿಗಳನ್ನು ಎನ್‌ಕ್ಯಾಶ್ ಮಾಡುವಂತೆ ಟ್ರಾಯ್ ದೂರಸಂಪರ್ಕ ಇಲಾಖೆಗೆ ಪತ್ರ ಬರೆದಿದೆ. ಆದರೆ ಇದುವರೆಗೂ ಈ ಬಗ್ಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಂಪನಿಗಳು ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣವನ್ನು ಠೇವಣಿ ಮಾಡುತ್ತವೆ ಎಂಬುದು ಗಮನಾರ್ಹ.

ಓದಿ:ಶಾಕ್​ ನೀಡಿದ ವಾಟ್ಸಾಪ್​: ಮುಂದಿನ ವರ್ಷದಿಂದ ಈ ಆಂಡ್ರಾಯ್ಡ್​ ಸೆಟ್​ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದ ಕಂಪನಿ

ABOUT THE AUTHOR

...view details