ETV Bharat / state

6 ತಿಂಗಳಾದ್ರೂ ನದಿಯಿಂದ ತೆರವಾಗದ ಗುಡ್ಡದ ಮಣ್ಣು; ಮತ್ತೆ ಪ್ರವಾಹ ಭೀತಿಯಲ್ಲಿ ಶಿರೂರು ಜನ - SHIRUR PEOPLE FLOOD FEAR

ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದು ಆರು ತಿಂಗಳಾದರೂ ರಸ್ತೆ ಮೇಲೆ ಬಿದ್ದ ಹಾಗೂ ನದಿಯ ಮಧ್ಯಭಾಗದಲ್ಲಿರುವ ಮಣ್ಣನ್ನು ಇನ್ನೂ ತೆರವುಗೊಳಿಸಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Hill Soil
ನದಿ ಮಧ್ಯದಲ್ಲಿರುವ ಗುಡ್ಡದ ಮಣ್ಣು (ETV Bharat)
author img

By ETV Bharat Karnataka Team

Published : Jan 12, 2025, 1:41 PM IST

ಕಾರವಾರ(ಉತ್ತರ ಕನ್ನಡ): ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಕುಸಿದು ಬಿದ್ದ ಗುಡ್ಡ 11 ಜನರನ್ನು ಬಲಿ ಪಡೆದಿತ್ತು. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಅಗಲೀಕರಣದಿಂದಾಗಿ ಗುಡ್ಡ ಕುಸಿದು ಆರು ತಿಂಗಳಾದರೂ ರಸ್ತೆ ಮೇಲೆ ಬಿದ್ದ ಹಾಗೂ ನದಿ ಮಧ್ಯದಲ್ಲಿರುವ ಗುಡ್ಡದ ಮಣ್ಣನ್ನು ತೆರವು ಮಾಡಲು ಮುಂದಾಗದೇ ಇರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯರಾದ ಸುಭಾಷ್ ಕಾರೇಬೈಲು ಮಾತನಾಡಿ, "ಘಟನೆ ನಡೆದು ಆರು ತಿಂಗಳು ಕಳೆದಿದೆ. ಗುಡ್ಡದ ಮಣ್ಣು ತೆರವು ಮಾಡುವ ಕಾರ್ಯ ಮಾತ್ರ ಯಾರೂ ಮಾಡುತ್ತಿಲ್ಲ. ಹೆದ್ದಾರಿಯ ಒಂದು ರಸ್ತೆಯಲ್ಲಿದ್ದ ಮಣ್ಣು ತೆಗೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ಇನ್ನೊಂದು ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣಿದ್ದರೂ ತೆರವು ಮಾಡಿಲ್ಲ. ಇನ್ನೊಂದೆಡೆ, ನದಿಯ ಮಧ್ಯದಲ್ಲೂ ಸಹ ಸಾವಿರಾರು ಟನ್ ಮಣ್ಣು ಇದ್ದು, ಅದನ್ನೂ ಸಹ ತೆಗೆಯುವ ಕಾರ್ಯವಾಗಿಲ್ಲ. ಮುಂದಿನ ಮಳೆಗಾಲದ ವೇಳೆ ನದಿ ಮಧ್ಯದಲ್ಲಿ ಮಣ್ಣು ಇದ್ದರೆ ನದಿ ಸುತ್ತಮುತ್ತಲಿನ ಗ್ರಾಮಕ್ಕೆ ನೀರು ನುಗ್ಗಿ ಮತ್ತೆ ಸಮಸ್ಯೆಯಾಗುವ ಆತಂಕವಿದೆ" ಎಂದರು.

ಆರು ತಿಂಗಳಾದ್ರೂ ನದಿಯಿಂದ ತೆರವಾಗದ ಶಿರೂರು ಗುಡ್ಡದ ಮಣ್ಣು- ಹೇಳಿಕೆಗಳು (ETV Bharat)

"ಗುಡ್ಡ ಕುಸಿತವಾದ ಸ್ಥಳ ಸರಿಪಡಿಸುವ ಕಾರ್ಯಕ್ಕೆ ಜಿಲ್ಲಾಡಳಿತವಾಗಲೀ, ಕಾಮಗಾರಿ ನಡೆಸುತ್ತಿರುವ ಐಆರ್​ಬಿ ಕಂಪನಿಯಾಗಲೀ ಮುಂದಾಗಿಲ್ಲ. ಮಣ್ಣು ಕುಸಿದ ಜಾಗದಲ್ಲಿ ಮತ್ತೆ ಮಣ್ಣು ಕುಸಿಯುವ ಹಂತದಲ್ಲಿದ್ದು, ಅಲ್ಲಿ ತಡೆಗೋಡೆ ನಿರ್ಮಿಸುವುದಾಗಲೀ ಅಥವಾ ಕುಸಿಯುವ ಹಂತದಲ್ಲಿರುವ ಮಣ್ಣನ್ನು ತೆಗೆಯುವುದಕ್ಕಾಗಲೀ ಯಾರೂ ಮುಂದಾಗಿಲ್ಲ. ಮುಂದಿನ ಮಳೆಗಾಲದ ವೇಳೆ ಮಳೆ ಹೆಚ್ಚಾದರೆ ಮತ್ತೆ ಕುಸಿಯುವ ಭೀತಿ ಇದೆ. ಒಂದೊಮ್ಮೆ ಹೆದ್ದಾರಿ ಮೇಲೆ ಮಣ್ಣು ಬಂದರೆ ವಾಹನ ಸವಾರರು ಅಪಾಯಕ್ಕೀಡಾಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

ಸಣ್ಣ ನೀರಾವರಿ ಸಚಿವ ಭೋಸರಾಜು ಮಾತನಾಡಿ, "ಈ ಬಗ್ಗೆ ಕ್ಯಾಬಿನೆಟ್​​ನಲ್ಲಿ ಸಚಿವ ಕೃಷ್ಣಬೈರೇಗೌಡರ ಗಮನಕ್ಕೆ ತಂದು ನಂತರ ಈ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತೇನೆ. ಏಕೆ ಮಣ್ಣು ತೆರವು ಮಾಡಲಿಲ್ಲ, ಏನಾಯ್ತು ಎಂಬುದರ ಬಗ್ಗೆ ಸ್ಪಷ್ಟನೆ ನೀಡುತ್ತೇನೆ" ಎಂದರು.

ಇದನ್ನೂ ಓದಿ: ರಾಸಾಯನಿಕ ಸೋರಿಕೆ : ಕಾರವಾರದಲ್ಲಿ 12ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ - CHEMICAL LEAK

ETV Bharat Logo

Copyright © 2025 Ushodaya Enterprises Pvt. Ltd., All Rights Reserved.