Recharge Plan Under Rs 200: ನೀವು ಬಿಎಸ್ಎನ್ಎಲ್, ಜಿಯೋ ಅಥವಾ ಏರ್‌ಟೆಲ್ ಸಿಮ್ ಬಳಸುತ್ತಿದ್ದರೆ ಇಲ್ಲಿ ಉತ್ತಮ ಮತ್ತು ಅಗ್ಗದ ರೀಚಾರ್ಜ್ ಪ್ಲಾನ್ಗಳಿವೆ. ಅದರಲ್ಲಿಯೂ ಬಿಎಸ್ಎನ್ಎಲ್ ಎಲ್ಲರ ಗಮನ ಸೆಳೆಯುವ ಪ್ಲಾನ್ಗಳು ತಮ್ಮ ಗ್ರಾಹಕರಿಗೆ ನೀಡುತ್ತಿವೆ. ಆದರೆ ಏರ್‌ಟೆಲ್ ಮತ್ತು ಜಿಯೋದಿಂದ ತಲಾ 200 ರೂ.ಗಿಂತ ಕಡಿಮೆ ಬೆಲೆಯ ಒಂದು ಪ್ರಿಪೇಯ್ಡ್ ಯೋಜನೆಯ ತಮ್ಮ ಗ್ರಾಹಕರಿಗೆ ನೀಡುತ್ತಿದೆ.
ಕೆಲವು ಸಮಯದಿಂದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ ಗ್ರಾಹಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಖಾಸಗಿ ಕಂಪನಿಗಳ ದುಬಾರಿ ರೀಚಾರ್ಜ್ ಯೋಜನೆಗಳಿಂದ ತೊಂದರೆಗೀಡಾದ ಬಳಕೆದಾರರು ಸರ್ಕಾರಿ ಟೆಲಿಕಾಂ ಕಂಪನಿಯ ಸೇವೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ತನ್ನ ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಬಿಎಸ್ಎನ್ಎಲ್ ಅನೇಕ ಅಗ್ಗದ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಯನ್ನು ಆಯ್ಕೆ ಮಾಡಬಹುದಾಗಿದೆ.
ಬಿಎಸ್ಎನ್ಎಲ್ 107 ರೂ. ರೀಚಾರ್ಜ್: ಬಿಎಸ್‌ಎನ್‌ಎಲ್‌ನ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರು ಡೇಟಾ ಮತ್ತು ಕಾಲಿಂಗ್ ಬೆನ್ಫಿಟ್ ಅನ್ನು ಪಡೆಯುತ್ತಾರೆ. ಇದು 50 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು 200 ನಿಮಿಷಗಳ ಫ್ರೀ ವಾಯ್ಸ್ ಕಾಲ್ಸ್ ಮತ್ತು 3G ಡೇಟಾ ದೊರೆಯುತ್ತದೆ. ಕಡಿಮೆ ಕರೆಗಳನ್ನು ಮಾಡುವ ಬಳಕೆದಾರರಿಗೆ ಈ ಯೋಜನೆ ಪ್ರಯೋಜನಕಾರಿಯಾಗಿದೆ. ಹೆಚ್ಚುವರಿ ಪ್ರಯೋಜನವಾಗಿ, ಇದು 50 ದಿನಗಳವರೆಗೆ BSNL ಟ್ಯೂನ್ ಅನ್ನು ಸಹ ನೀಡುತ್ತದೆ.
ಬಿಎಸ್ಎನ್ಎಲ್ 153 ರೂ. ರೀಚಾರ್ಜ್: ಸರ್ಕಾರಿ ಟೆಲಿಕಾಂ ಕಂಪನಿಯ ಈ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರು ಅನಿಯಮಿತ ವಾಯ್ಸ್ ಕಾಲ್ ಬೆನಿಫಿಟ್ ಪಡೆಯುತ್ತಾರೆ. ಈ ಯೋಜನೆಯ ಮಾನ್ಯತೆ 28 ದಿನಗಳು. ಈ 28 ದಿನಗಳಲ್ಲಿ ಬಳಕೆದಾರರು ಯಾವುದೇ ನೆಟ್‌ವರ್ಕ್‌ಗೆ ಉಚಿತ ಕರೆ ಮಾಡುವ ಸೌಲಭ್ಯವನ್ನು ಪಡೆಯಬಹುದು ಮತ್ತು ಅವರು ಪ್ರತಿದಿನ 1GB ಹೈ-ಸ್ಪೀಡ್ ಡೇಟಾವನ್ನು ಪಡೆಯುತ್ತಾರೆ. 1GB ಮಿತಿಯನ್ನು ದಾಟಿದ ನಂತರ, ಇಂಟರ್ನೆಟ್ ವೇಗವು 40kbps ಗೆ ಕಡಿಮೆಯಾಗುತ್ತದೆ. ಇದರ ಜೊತೆಗೆ ನೀವು ಪ್ರತಿದಿನ 100 ಉಚಿತ SMS ಗಳನ್ನು ಸಹ ಪಡೆಯುತ್ತೀರಿ.
ಬಿಎಸ್ಎನ್ಎಲ್ 199 ರೂ. ರೀಚಾರ್ಜ್: ಈ ಯೋಜನೆಯು ಒಂದು ಪೂರ್ಣ ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ 30 ದಿನಗಳಲ್ಲಿ ಈ ಯೋಜನೆಯು 153 ರೂ. ರೀಚಾರ್ಜ್‌ಗಿಂತ ಅನ್ಲಿಮಿಟೆಡ್ ಕಾಲ್ಸ್ ಮತ್ತು ಹೆಚ್ಚಿನ ಡೇಟಾವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಕಂಪನಿಯು ಪ್ರತಿದಿನ 2GB ಡೇಟಾವನ್ನು ನೀಡುತ್ತದೆ. ಈ ಮಿತಿಯನ್ನು ದಾಟಿದ ನಂತರ ವೇಗವು 80kbps ಗೆ ಇಳಿಯುತ್ತದೆ. ನೀವು ಪ್ರತಿದಿನ 100 ಉಚಿತ SMS ಅನ್ನು ಸಹ ಪಡೆಯುತ್ತೀರಿ. ಅಂದರೆ ಈ ಯೋಜನೆಯು ಅನಿಯಮಿತ ಕರೆ, 60GB ಡೇಟಾ ಮತ್ತು 3,000 ಉಚಿತ SMS ನೀಡುತ್ತದೆ.
199 ರೂ. ಜಿಯೋ ಪ್ರಿಪೇಯ್ಡ್ ಪ್ಲಾನ್: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋದ ಪ್ರಿಪೇಯ್ಡ್ ಯೋಜನೆಗಳ ಪಟ್ಟಿಯಲ್ಲಿ ಒಂದು ಪ್ಲಾನ್ 199 ರೂ.ಗಳಿಗೆ ಲಭ್ಯವಿದೆ. ಈ ಪ್ಲಾನ್ನಲ್ಲಿ ಬಳಕೆದಾರರು ಪ್ರತಿದಿನ 1.5GB ಡೇಟಾವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ ಅವರು ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ನಿತ್ಯ 100 ಎಸ್ಎಮ್ಎಸ್ ಸೌಲಭ್ಯ ಹೊಂದಲಿದ್ದಾರೆ. ಆದ್ರೆ ಈ ಯೋಜನೆಯ ಮಾನ್ಯತೆ ಕೇವಲ 18 ದಿನಗಳು.
ಇನ್ನು ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 27 GB ಡೇಟಾವನ್ನು ಪಡೆಯುತ್ತಾರೆ. ಇನ್ನು ಈ ಪ್ಲಾನ್ನಲ್ಲಿ ಬಳಕೆದಾರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನಂತಹ ಸೇವೆಗಳ ಸೌಲಭ್ಯವನ್ನು ಸಹ ಸಿಗಲಿದೆ. ಈ ಯೋಜನೆಯು ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಅಥವಾ ಅನ್ಲಿಮಿಟೆಡ್ 5G ಡೇಟಾದೊಂದಿಗೆ ಬರುವುದಿಲ್ಲ ಎಂಬುದು ಗಮನಾರ್ಹ.
ಏರ್‌ಟೆಲ್‌ನ 199 ರೂ. ಪ್ರಿಪೇಯ್ಡ್ ಪ್ಲಾನ್: ಭಾರತದ ಎರಡನೇ ಅತಿದೊಡ್ಡ ಕಂಪನಿ ಏರ್‌ಟೆಲ್ ಕೂಡ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ 199 ರೂಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ, ಬಳಕೆದಾರರು ಅನ್ಲಿಮಿಟೆಡ್ ಲೋಕಲ್, ಎಸ್‌ಟಿಡಿ ಮತ್ತು ರೋಮಿಂಗ್ ಕಾಲ್ಸ್, ಪ್ರತಿದಿನ 100 ಎಸ್‌ಎಂಎಸ್ ಪಡೆಯುತ್ತಾರೆ. ಅಷ್ಟೇ ಅಲ್ಲ ಈ ಯೋಜನೆಯ ಮಾನ್ಯತೆ 28 ದಿನಗಳು. ಆದ್ರೆ ಈ 28 ದಿನಗಳಿಗೆ ಕೇವಲ 2 ಜಿಬಿ ಮಾತ್ರ ಇಂಟರ್ನೆಟ್ ಸೌಲಭ್ಯ ಪಡೆಯಲಿದ್ದೀರಿ ಎಂಬುದು ನೆನಪಿನಲ್ಲಿಡಿ.
ಈ ಎಲ್ಲಾ ಪ್ರಯೋಜನಗಳ ಹೊರತಾಗಿ ಈ ಪ್ಲಾನ್ನೊಂದಿಗೆ ಬಳಕೆದಾರರು ಉಚಿತ ಹೆಲೋಟ್ಯೂನ್‌ಗಳ ಸೌಲಭ್ಯವನ್ನು ಪಡೆಯುತ್ತಾರೆ. ಜೊತೆಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಅಪ್ಲಿಕೇಶನ್‌ನ ಫ್ರೀ ಕಂಟೆಂಟ್ ಸಹ ಪಡೆಯುತ್ತಾರೆ. ಈ ಯೋಜನೆಯಿಂದಲೂ ಬಳಕೆದಾರರು ಏರ್‌ಟೆಲ್ ಎಕ್ಸ್‌ಟ್ರೀಮ್‌ನ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವುದಿಲ್ಲ ಅಥವಾ ಏರ್‌ಟೆಲ್‌ನ ಉಚಿತ ಅನಿಯಮಿತ 5G ಡೇಟಾವನ್ನು ಪಡೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಓದಿ: ಜಿಯೋ-ಏರ್ಟೆಲ್ನಲ್ಲಿ ಯಾವುದು ಬೆಸ್ಟ್ ಪ್ಲಾನ್?, ಇಲ್ಲಿವೆ ನಿಮಗೆ ಅಗ್ಗದ ಯೋಜನೆಗಳು