ETV Bharat / education-and-career

Exclusive; JEE ಮೇನ್ಸ್​ನಲ್ಲಿ ಶೇ 100ರಷ್ಟು ಸ್ಕೋರ್​ ಮಾಡಿದ ಅರ್ನವ್​: ಈ ಸಾಧನೆಗೆ ಹೀಗಿತ್ತು ಆತನ ತಯಾರಿ! - JEE PREPARATION TIP BY TOPPER

ಪರೀಕ್ಷೆ ಫಲಿತಾಂಶಕ್ಕಿಂತ ಸಿದ್ಧತೆ ಅತ್ಯಗತ್ಯ. ಇದೇ ನನ್ನ ಅಂಕಗಳಿಕೆಗೆ ಸಹಾಯ ಮಾಡಿತು ಎಂದು ಜೆಇಇ ಶೇ100ರಷ್ಟು ಸ್ಕೋರ್​ ಮಾಡಿದ ಕೋಟಾ ವಿದ್ಯಾರ್ಥಿ ಅರ್ನವ್​ ಹೇಳಿದ್ದಾರೆ.

arnav-singh-jee-main-2025-topper-100-percentile-interview
ಅರ್ನವ್ (ಈಟಿವಿ ಭಾರತ್​​)
author img

By ETV Bharat Karnataka Team

Published : Feb 13, 2025, 11:49 AM IST

ಕೋಟಾ, ರಾಜಸ್ಥಾನ: ಜೆಇಇ ಮೇನ್ಸ್​ -2025ರ ಪರೀಕ್ಷೆಯಲ್ಲಿ ಕೋಟಾ ಮೂಲದ ವಿದ್ಯಾರ್ಥಿ ಅರ್ನವ್​ ಸಿಂಗ್​ ಗಮನಾರ್ಹ ಸಾಧನೆ ಮಾಡಿದ್ದಾರೆ. ಜನವರಿಯಲ್ಲಿ ಪ್ರಕಟವಾದ ಜಂಟಿ ಪ್ರವೇಶ ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಗಳಿಸುವ ಮೂಲಕ ಮೇರು ಸಾಧನೆ ಮಾಡಿದ್ದಾರೆ. ತಮ್ಮ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಅರ್ನವ್​, ತಮ್ಮ ಅಧ್ಯಯನದ ಸಿದ್ಧತೆ ಮತ್ತು ತಂದೆಯ ಬೆಂಬಲದಿಂದ ಈ ಸಾಧನೆ ಮಾಡಲು ಸಹಾಯ ಮಾಡಿತು ಎಂದಿದ್ದಾರೆ.

ಈಟಿವಿ ಭಾರತ್​ ಸಂದರ್ಶನದಲ್ಲಿ ಮಾತನಾಡಿದ ಅರ್ನವ್​ ತಂದೆ ಅಜಿತ್​ ಸಿಂಗ್​, ತಮ್ಮ ಮಗನಿಗೆ ತಾವು ಇಂತಹದ್ದೇ ಫಲಿತಾಂಶ ಬರಬೇಕು ಎಂದು ಒತ್ತಡ ಹಾಕಲಿಲ್ಲ. ಆದರೆ, ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸುವಂತೆ ಸಲಹೆ ನೀಡಿದೆ. ಆತ ಶೇ 100ರಷ್ಟು ಅಂಕ ಪಡೆದವರ ಕ್ಲಬ್​ ಸೇರದಿದ್ದರೂ ನಾನು ದುಃಖಿಸುತ್ತಿರಲಿಲ್ಲ. ಕಾರಣ ಅರ್ನವ್​ ಫಲಿತಾಂಶದ ಚಿಂತೆಬಿಟ್ಟು ಉತ್ತಮ ಓದಿನ ಕಡೆ ಗಮನ ಹರಿಸಿದ್ದ. ಯಾವುದೇ ಒತ್ತಡ ಇಲ್ಲದೇ ವಿಷಯವನ್ನು ಮನನ ಮಾಡಿಕೊಳ್ಳುವತ್ತ ಚಿತ್ತ ಹರಿಸಿದ್ದ ಎಂದು ತಿಳಿಸಿದ್ದಾರೆ.

ಅಜಿತ್​ ಸಿಂಗ್​ ಕೂಡ ಖಾಸಗಿ ಸಂಸ್ಥೆಯಲ್ಲಿ ಗಣಿತ ತರಬೇತುದಾರರಾಗಿದ್ದಾರೆ. ಮೂಲತಃ ಬಿಹಾರದವರಾಗಿರುವ ಅರ್ನವ್​ ಹುಟ್ಟಿ ಬೆಳೆದಿದ್ದು, ಪಶ್ಚಿಮ ಬಂಗಾಳದ ದುರ್ಗಪುರದಲ್ಲಿ. ಆ ಬಳಿಕ ಅವರು ಮಹಾರಾಷ್ಟ್ರದ ನಾಗ್ಪುರ್​ಗೆ ಸ್ಥಳಾಂತರಗೊಂಡರು. ಬಳಿಕ ಇವರು ಭೋಪಾಲ್​ನಲ್ಲಿ ನೆಲೆಸಿದ್ದರು. 2019ರಿಂದ ಅರ್ನವ್​ ಕೋಟಾದಲ್ಲಿ ಕಲಿಕೆ ಆರಂಭಿಸಿದ್ದು, ಅವರ ತಂದೆ 2019 ರಿಂದ ಶಿಕ್ಷಣ ವೃತ್ತಿಯಲ್ಲಿ ತೊಡಗಿದ್ದಾರೆ. ತಾಯಿ ನೇಹಾ ಭಾರತಿ ಗೃಹಿಣಿಯಾಗಿದ್ದಾರೆ.

10ನೇ ತರಗತಿಯಿಂದಲೇ ಐಐಟಿ ಕನಸು: ಅರ್ನವ್​ ಯಶಸ್ಸಿನಗಾಥೆ 10ನೇ ತರಗತಿಯಿಂದಲೇ ಶುರುವಾಗಿದೆ. ಆತ ಆಗಿನಿಂದಲೇ, ಅಂದರೆ ಭೋಪಾಲ್​ನಲ್ಲಿರುವಾಗಲೇ ಐಐಟಿ ಪ್ರವೇಶ ಪರೀಕ್ಷೆಗೆ ತಯಾರಿ ಆರಂಭಿಸಿದ್ದೆ. ಕೋಟಾಗೆ ಬಂದ ಬಳಿಕ ನಾನು ನನ್ನ ಶಾಲಾ ಮತ್ತು ಕೋಚಿಂಗ್​ ಎರಡನ್ನು ಸರಿದೂಗಿಸಿಕೊಂಡು ಹೋಗಲು ಮುಂದಾದೆ. ಕೋಟಾದ ಕೋಚಿಂಗ್​ ವೇಳೆ ಜೆಇಇ ಮತ್ತು ಬೋರ್ಡ್​ ಪರೀಕ್ಷೆ ಎರಡಕ್ಕೂ ಸಮಯವನ್ನು ಮಾಡಿಕೊಂಡು ಅಭ್ಯಾಸ ಮಾಡಿದೆ ಎನ್ನುತ್ತಾರೆ ಅರ್ನವ್​.

ಮಕ್ಕಳ ಕಡೆಯಿಂದ ಅಧಿಕ ನಿರೀಕ್ಷೆ ಹೊಂದುವುದು ತಪ್ಪು. ಇದರ ಬದಲಾಗಿ ಅವರು ವ್ಯವಸ್ಥಿತವಾಗಿ ತಯಾರಿ ಮಾಡಿಕೊಳ್ಳುವುದರತ್ತ ಗಮನ ಕೇಂದ್ರೀಕರಿಸಬೇಕು. ಸಿದ್ಧತೆ ಸರಿಯಾಗಿದ್ದಲಿ ಮಾತ್ರವೇ ಯಶಸ್ಸು ಸಿಗುತ್ತದೆ . ಸಿದ್ಧತೆ ಸಮಯದಲ್ಲಿ ಮಕ್ಕಳನ್ನು ಶಾಂತವಾಗಿ, ಅವರ ಮನಸ್ಥಿತಿ ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳಿ. ಬದಲಾಗಿ ಉತ್ತಮ ಫಲಿತಾಂಶ ಬರಬೇಕು ಎಂದು ನಿರೀಕ್ಷೆ ಮಾಡುವುದರಿಂದ ಅದು ಅವರ ಸಿದ್ಧತೆಗೆ ಅಡ್ಡಿಯಾಗುತ್ತದೆ. ಶೈಕ್ಷಣಿಕ ಗುರಿಗಳ ಸಾಧನೆಗೆ ಆರೋಗ್ಯಯುತ ಮತ್ತು ಉತ್ತಮ ವ್ಯಕ್ತಿತ್ವವೂ ಪ್ರಮುಖವಾಗಿದೆ ಎನ್ನುವುದು ಅರ್ನವ್​ ಅವರ ಅನಿಸಿಕೆ ಆಗಿದೆ.

ವ್ಯವಸ್ಥಿತ ಸಿದ್ಧತೆ ಅತ್ಯಗತ್ಯ: ಅರ್ನವ್​ ಶೇ 100ರಷ್ಟು ಅಂಕ ಪಡೆಯಲು ಯಾವುದೇ ಪೂರ್ವ ಯೋಜನೆ ಹೊಂದಿರಲಿಲ್ಲ. ಪರೀಕ್ಷೆಗೆ ಮುನ್ನ ಅರ್ನವ್​ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದರು. ಸದಾ ಶಾಂತ ಚಿತ್ತದಿಂದ ಇದ್ದು, ಯಾವುದೇ ಫಲಿತಾಂಶ ಬಂದರೂ ಸ್ವೀಕರಿಸಲು ಸಿದ್ದನಾಗಿದ್ದ. ಪರೀಕ್ಷೆ ಬಳಿಕವೂ ಎಷ್ಟು ಅಂಕ ಬರುತ್ತದೆ ಎಂಬ ಬಗ್ಗೆ ಅರ್ನವ್​ ಯೋಚನೆ ಮಾಡಿರಲಿಲ್ಲ . ಅಂತಿಮ ಕೀ ಉತ್ತರ ಬಂದಾಗ ಆತ 295 ಅಂಕ ಪಡೆದಿರುವುದು ಗೊತ್ತಾಯಿತು. ಆದರೆ, ಶೇ 100ರಷ್ಟು ಅನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ ಅರ್ನವ್​ ತಂದೆ ಅಜಿತ್​.

10ನೇ ತರಗತಿಯಲ್ಲಿ ಅರ್ನವ್​ 97ರಷ್ಟು ಅಂಕ ಗಳಿಸಿದ್ದು, ಭವಿಷ್ಯದ ಗುರಿ ಬಗ್ಗೆ ಏಕಚಿತ್ತ ಹೊಂದಿದ್ದ. ನಿರ್ದಿಷ್ಟ ಸಿದ್ಧತೆ ಹೊಂದಿರಲಿಲ್ಲ. ಆದರೆ, ಗಣಿತದಲ್ಲಿ ಆತ ಆಸಕ್ತಿ ಹೊಂದಿದ್ದು, ಓಲಂಪಿಯಾಡ್​​ನಲ್ಲಿ ಕ್ಯಾಪ್​ ಮಟ್ಟದಲ್ಲಿ ಭಾಗಿಯಾಗಿದ್ದ. ಆತನ ಪ್ರಮುಖ ಗುರಿ ಐಐಟಿ ಬಾಂಬೆಯಲ್ಲಿ ಬಿಟೆಕ್​ ಕಂಪ್ಯೂಟರ್​ ಸೈನ್​ ಓದುವುದಾಗಿದೆ. ಅದಕ್ಕೆ ಜೆಇಇ ಅಡ್ವಾನ್ಸ್​ ಪಾಸಾಗಬೇಕಿದೆ ಎಂದು ಆತನ ಕನಸಿನ ಕುರಿತು ತಂದೆ ಮಾಹಿತಿ ಹಂಚಿಕೊಂಡರು.

ನಿತ್ಯದ ಓದು: ನಾನು ಪ್ರತಿನಿತ್ಯ ಸಂತಸದಿಂದ ನನ್ನ ಹೋಮ್​ವರ್ಕ್​ ಮುಗಿಸುತ್ತಿದ್ದೆ . ಇದರ ಜೊತೆಗೆ ಅಭ್ಯಾಸ ಹಾಗೂ ಅಭ್ಯಾಸದ ವೇಳೆ ಬಂದ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದರಿಂದ ವಿಷಯವನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಯಿತು. ನಾನು ದಿನಕ್ಕೆ 10- 12 ಗಂಟೆ ಓದುತ್ತಿದ್ದೆ. ನನ್ನ ಅನುಮಾನಗಳನ್ನು ಪರಿಹರಿಸುವಲ್ಲಿ ತಂದೆ ಸಹಾಯ ಮಾಡುತ್ತಿದ್ದರು.

ಕೋಟಾದಲ್ಲಿರುವ ವಿಶಿಷ್ಟ ಓದಿನ ಪರಿಸರ ಕುರಿತು ಕೂಡ ಅಜಿತ್ ಅವರು​ ಮಾತನಾಡಿದ್ದು, ಇಲ್ಲಿ ವಿದ್ಯಾರ್ಥಿಗಳ ಮಧ್ಯೆ ತೀವ್ರ ಸ್ಪರ್ಧೆ ಇಲ್ಲ. ವಿದ್ಯಾರ್ಥಿಗಳು ಕೂಡ ಪ್ರೋತ್ಸಾಹದಾಯಕ ಗುಂಪೊಂದನ್ನು ಸೃಷ್ಟಿಸಿದ್ದಾರೆ. ಅರ್ನವ್​​ ಸ್ನೇಹಿತರಾದ ರಜಿತ್​, ಸಕ್ಷಮ್​ ಮತ್ತು ಓಂ ಕೂಡ ಶೇ 100 ಅಂಕ ಗಳಿಸಿದ್ದಾರೆ. ಈ ರೀತಿಯ ಸಮಾನ ಮನಸ್ಕರ ವಿಶಿಷ್ಟ ಗುಂಪು ಕೋಟಾದಲ್ಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಪ್ರಮುಖ ಆದ್ಯತೆಯಾಗಿದೆ ಎಂದು ಅಜಿತ್​ ಹೇಳಿದ್ದಾರೆ.

ಇದನ್ನೂ ಓದಿ: JEE ಮೇನ್ಸ್ ಫಲಿತಾಂಶ:100ಕ್ಕೆ 100ರಷ್ಟು ಅಂಕ ಪಡೆದ 14 ವಿದ್ಯಾರ್ಥಿಗಳು: ಕರ್ನಾಟಕದ ಕುಶಾಗ್ರ ಗುಪ್ತಾನೂ ಟಾಪರ್

ಇದನ್ನೂ ಓದಿ: ಒತ್ತಡದ ಕುರಿತು ಪೋಷಕರಲ್ಲಿ ಮನಬಿಚ್ಚಿ ಮಾತನಾಡಿ: ವಿದ್ಯಾರ್ಥಿಗಳಿಗೆ ದೀಪಿಕಾ ಪಡುಕೋಣೆ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.