ಕರ್ನಾಟಕ

karnataka

ETV Bharat / technology

ಮಹಿಳೆಯರ ರಕ್ಷಣೆಗೆ ಬಂತು ಆ್ಯಪ್: 'ಪ್ಯಾನಿಕ್' ಬಟನ್ ಒತ್ತಿದ್ರೆ ಸಾಕು, ನೀವಿದ್ದಲ್ಲಿಗೆ ಪೊಲೀಸ್​ ಹಾಜರ್! - Suraksha App Women Safety

ಮಹಿಳೆಯರ ರಕ್ಷಣೆಗೆ ಆ್ಯಪ್​ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಸಂಕಷ್ಟದಲ್ಲಿದ್ದಾಗ 'ಪ್ಯಾನಿಕ್' ಬಟನ್ ಒತ್ತಿದ್ರೆ ಸಾಕು, ನೀವು ಇದ್ದ ಕಡೆ ಪೊಲೀಸರು ಹಾಜರಾಗ್ತಾರೆ. ಇದಕ್ಕಾಗಿ ಆ್ಯಪ್​ವೊಂದನ್ನು ಸಿದ್ಧಪಡಿಸಲಾಗಿದೆ.

SURAKSHA APP DETAILS  SURAKSHA APP FOR DAVANAGERE WOMEN  POLICE RESPONSE  DAVANAGERE
'ಪ್ಯಾನಿಕ್' ಬಟನ್ ಒತ್ತಿದ್ರೆ ಸಾಕು, ನೀವಿದ್ದಲ್ಲಿ ಪೊಲೀಸರು ಹಾಜರ್ (ETV Bharat)

By ETV Bharat Tech Team

Published : Sep 17, 2024, 2:25 PM IST

Updated : Sep 17, 2024, 3:33 PM IST

ಮಹಿಳೆಯರ ರಕ್ಷಣೆಗೆ ಬಂತು ಆ್ಯಪ್ ಬಗ್ಗೆ ಎಸ್​ಪಿ ಮಾಹಿತಿ (ETV Bharat)

ದಾವಣಗೆರೆ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಪ್ಪಿಸಲು ದಾವಣಗೆರೆ ಜಿಲ್ಲಾ ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ವಿಶೇಷ 'ಸುರಕ್ಷ' ಆ್ಯಪ್‌ವೊಂದನ್ನು ಜಾರಿಗೆ ತಂದಿದ್ದಾರೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಪ್ಯಾನಿಕ್​ ಬಟನ್​ ಒತ್ತಿದ್ರೆ ತಕ್ಷಣ ನಿಮ್ಮ ರಕ್ಷಣೆಗೆ ಬರುತ್ತಾರೆ ಪೊಲೀಸ್​;ಮಹಿಳೆಯರು, ವಿದ್ಯಾರ್ಥಿನಿಯರು ಸಂಕಷ್ಟದಲ್ಲಿದ್ದಾಗ ಈ ಆ್ಯಪ್ ಸಹಕಾರಿಯಾಗಲಿದೆ. ಇದರಲ್ಲಿರುವ ​ಪ್ಯಾನಿಕ್ ಬಟನ್ ಒತ್ತಿದ್ರೆ ಪೊಲೀಸ್ ಸಿಬ್ಬಂದಿ ನೀವಿರುವಲ್ಲೇ ಹಾಜರ್ ಆಗಲಿದ್ದಾರೆ. ಈಗಾಗಲೇ ಈ ಆ್ಯಪ್ ಅನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಉದ್ಘಾಟಿಸಿದ್ದು, ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಮಹಿಳೆಯರ ರಕ್ಷಣೆಗೆ ಬಂತು ಆ್ಯಪ್ (ETV Bharat)

ಆ್ಯಪ್​ ಕಾರ್ಯದ ಎಸ್​ಪಿ ಮಾಹಿತಿ; ಮಹಿಳೆಯರು ಕಷ್ಟದಲ್ಲಿದ್ದರೆ, ಸಮಸ್ಯೆ ಎದುರಾದರೆ, ಪುಂಡರು ನಿಮ್ಮ‌ ಹಿಂದೆ ಬಿದ್ದರೆ ಆ್ಯಪ್‌ನಲ್ಲಿರುವ ಕೆಂಪು ಬಣ್ಣದ ಪ್ಯಾನಿಕ್ ಬಟನ್ ಒತ್ತಿದ್ರೆ ನಿಮಗೆ ಸಹಾಯವಾಗುತ್ತದೆ. ಇನ್ನು ಈ ಪ್ಯಾನಿಕ್ ಬಟನ್ ಒತ್ತಿದ್ರೆ ಸಮಸ್ಯೆಗೊಳಗಾಗಿರುವ ಮಹಿಳೆಯ ಮೊಬೈಲ್ ಲೊಕೇಷನ್ ದಾವಣಗೆರೆ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್​ಗೆ ರವಾನೆಯಾಗುತ್ತದೆ. ಬಳಿಕ ಎಮರ್ಜೆನ್ಸಿ ರೆಸ್ಸ್ಪಾನ್ಸ್ ಸರ್ವೀಸ್ ಸಿಸ್ಟಮ್​ಗೆ ಬರುತ್ತದೆ. ತಕ್ಷಣ ಪೊಲೀಸರು ನೀವಿರುವ ಸ್ಥಳಕ್ಕೆ ಧಾವಿಸಿ ರಕ್ಷಣೆ ನೀಡುತ್ತಾರೆ ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದರು.

112 ಹಾಗು ಸುರಕ್ಷ ಆ್ಯಪ್​ಗೆ ಏನು ವ್ಯತ್ಯಾಸ?:ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು ಸಮಸ್ಯೆಯಲ್ಲಿ ಸಿಲುಕಿದಾಗ 112ಕ್ಕೆ ಕರೆ ಮಾಡಲಾಗದ ಪರಿಸ್ಥಿತಿ ಎದುರಾದಾಗ ಸುರಕ್ಷ ಆ್ಯಪ್‌ನಲ್ಲಿರುವ ಪ್ಯಾನಿಕ್ ಬಟನ್ ಒತ್ತಿದಾಗ ಸಹಾಯ ದೊರೆಯುತ್ತದೆ. ಮಹಿಳೆಯರ ರಕ್ಷಣೆಗಾಗಿ ವಿಶೇಷವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದರು.

ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ?:ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವವರು ಮೊದಲು ಪ್ಲೇ ಸ್ಟೋರ್‌ನಲ್ಲಿರುವ ದಾವಣಗೆರೆ ಸ್ಮಾರ್ಟ್ ಸಿಟಿ ಡಿವಿಜಿ ಹೆಲ್ಪ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಆ ಅಪ್ಲಿಕೇಶನ್ ತೆರೆದರೆ ಸುರಕ್ಷ ಆ್ಯಪ್ ಸಿಗುತ್ತದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದನ್ನು ಓಪನ್ ಮಾಡಿದರೆ ತಕ್ಷಣ ಮೊದಲಿಗೆ ನಿಮ್ಮ ಹೆಸರು, ದೂರವಾಣಿ ಸಂಖ್ಯೆ ಅಟೋಮೆಟಿಕ್ ಆಗಿ ತೆರೆದುಕೊಳ್ಳಲಿದೆ. ಅದರೆ ಲೊಕೇಷನ್ ಅಪ್​ಡೇಟ್ ಮಾಡಬೇಕಾಗುತ್ತದೆ. ಲೊಕೇಷನ್ ಟ್ಯಾಗ್ ಮಾಡಿದ ತಕ್ಷಣ ಕಮಾಂಡೋ ಸೆಂಟರ್​ಗೆ ಸಂದೇಶ ಹೋಗುತ್ತದೆ. ಪೊಲೀಸರಿಗೆ ಲೊಕೇಷನ್ ಸಿಕ್ಕ ತಕ್ಷಣ ನೀವಿರುವ ಕಡೆ ಆಗಮಿಸಿ ನಿಮ್ಮನ್ನು ರಕ್ಷಣೆ ಮಾಡುತ್ತಾರೆ.

ಓದಿ:ಮಹಿಳೆಯರ ಗಮನಕ್ಕೆ; ಇವುಗಳು ನಿಮ್ಮ ಬಳಿಯಿದ್ರೆ, ನೀವು ಎಲ್ಲಿಗೆ ಹೋದರೂ ಸುರಕ್ಷಿತ! - Women Safety Gadgets

Last Updated : Sep 17, 2024, 3:33 PM IST

ABOUT THE AUTHOR

...view details