SKODA KYLAQ FULL PRICE LIST: ಸ್ಕೋಡಾ ಆಟೋ ಇಂಡಿಯಾ ತನ್ನ ಅತ್ಯಂತ ಚಿಕ್ಕ ಕಾಂಪ್ಯಾಕ್ಟ್ ಎಸ್‌ಯುವಿ ಸ್ಕೋಡಾ ಕೈಲಾಕ್‌ನ ಎಲ್ಲಾ ರೂಪಾಂತರಗಳ ಬೆಲೆಗಳ ಮಾಹಿತಿಯನ್ನು ನೀಡಿದೆ. ಡಿಸೆಂಬರ್ 2 ರಿಂದ ಅಂದ್ರೆ ಕಳೆದ ಸೋಮವಾರದಿಂದ ಸ್ಕೋಡಾ ಕೈಲಾಕ್ ಬುಕ್ಕಿಂಗ್ ಆರಂಭವಾಗಿದೆ.
ಸ್ಕೋಡಾ ಕೈಲಾಕ್ ಅನ್ನು ಒಟ್ಟು ನಾಲ್ಕು ಟ್ರಿಮ್‌ಗಳಲ್ಲಿ ನೀಡಲಾಗಿದೆ. ಇದರಲ್ಲಿ ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ ಮತ್ತು ಪ್ರೆಸ್ಟೀಜ್ ಸೇರಿವೆ. ಈ ಕಾರು ಟೊರ್ನಾಡೊ ರೆಡ್, ಬ್ರಿಲಿಯಂಟ್ ಸಿಲ್ವರ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್, ಲಾವಾ ಬ್ಲೂ, ಡೀಪ್ ಬ್ಲ್ಯಾಕ್ ಮತ್ತು ಆಲಿವ್ ಗೋಲ್ಡ್ ಸೇರಿದಂತೆ ಏಳು ಬಣ್ಣಗಳಲ್ಲಿ ಲಭ್ಯವಿವೆ. ಕಂಪನಿಯು ಈ ಕಾರಿನೊಂದಿಗೆ 3 ವರ್ಷಗಳು/ಒಂದು ಲಕ್ಷ ಕಿ.ಮೀ. ಪ್ರಮಾಣಿತ ವಾರಂಟಿಯನ್ನು ಸಹ ನೀಡುತ್ತಿದೆ.
Skoda Kylaq ಟ್ರಿಮ್ | ಪೆಟ್ರೋಲ್ ಎಂಟಿ | ಪೆಟ್ರೋಲ್ ಎಂಟಿ |
Classic | 7.89 ಲಕ್ಷ ರೂ. | - |
Signature | 9.59 ಲಕ್ಷ ರೂ. | 10.59 ಲಕ್ಷ ರೂ. |
Signature+ | 11.40 ಲಕ್ಷ ರೂ. | 12.40 ಲಕ್ಷ ರೂ. |
Prestige | 13.35 ಲಕ್ಷ ರೂ. | 14.40 ಲಕ್ಷ ರೂ. |
ಸ್ಕೋಡಾ ಕೈಲಾಕ್‌ನ ವೈಶಿಷ್ಟ್ಯಗಳು: ಸ್ಕೋಡಾ ಕೈಲಾಕ್ ಲೈನ್-ಅಪ್‌ನ ಆರಂಭಿಕ ಬೆಲೆ ರೂ 7.89 ಲಕ್ಷ. ಇದು ಪ್ರವೇಶ ಮಟ್ಟದ ಕ್ಲಾಸಿಕ್ ಟ್ರಿಮ್ ಆಗಿದೆ. ಈ ಟ್ರಿಮ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವ್ಹೀಲ್, ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳು, ಎಲ್ಲಾ ಎಲ್‌ಇಡಿ ಲೈಟ್‌ಗಳು ಮತ್ತು ಇತರ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಈ ರೂಪಾಂತರದಲ್ಲಿ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಇಲ್ಲ.
ಸ್ಕೋಡಾ ಕೈಲಾಕ್ ಸಿಗ್ನೇಚರ್ ಮ್ಯಾನುವಲ್ ಗೇರ್ ಬಾಕ್ಸ್ಗೆ 9.59 ಲಕ್ಷ ರೂ. ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ಗೆ ಬೆಲೆ 10.59 ಲಕ್ಷ ರೂ. ಪಾವತಿಸಬೇಕಾಗಿದೆ. ಇದು 16-ಇಂಚಿನ ಅಲಾಯ್ ವ್ಹೀಲ್, ಕ್ರೂಸ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ಬ್ಯಾಕ್ ಎಸಿ ವೆಂಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಪ್-ಸ್ಪೆಕ್ ಸ್ಕೋಡಾ ಕೈಲಾಕ್ ಪ್ರೆಸ್ಟೀಜ್ ಮ್ಯಾನುವಲ್ ಆವೃತ್ತಿಗೆ ರೂ. 13.35 ಲಕ್ಷ ಮತ್ತು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಆಟೋಮ್ಯಾಟಿಕ್ ಆವೃತ್ತಿಗೆ ರೂ. 14.40 ಲಕ್ಷ ನಿಗದಿಪಡಿಸಲಾಗಿದೆ. ಇದು ಸಿಂಗಲ್-ಪೇನ್ ಸನ್‌ರೂಫ್, 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ಸ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್ ಮತ್ತು ವೈಪರ್ಸ್, ಕಾರ್ನರಿಂಗ್ ಫಂಕ್ಷನ್‌ನೊಂದಿಗೆ LED ಫಾಗ್ ಲ್ಯಾಂಪ್ಸ್, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.
ಸ್ಕೋಡಾ ಕೈಲಾಕ್ ಪವರ್‌ಟ್ರೇನ್ ಮತ್ತು ವಿಶೇಷತೆಗಳು: ಈ ಕಾರನ್ನು ಕೇವಲ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಪರಿಚಯಿಸಲಾಗಿದೆ. ಇದು ಸ್ಕೋಡಾ ಮತ್ತು ವೋಕ್ಸ್‌ವ್ಯಾಗನ್‌ನ ಇತರ ಕೆಲವು ಕಾರುಗಳಲ್ಲಿಯೂ ಕಂಡುಬರುತ್ತದೆ. ಈ ಎಂಜಿನ್ 114bhp ಪವರ್ ಮತ್ತು 178nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್-ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಕಾರು 10.5 ಸೆಕೆಂಡುಗಳಲ್ಲಿ 0-100 km/h ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಸ್ಕೋಡಾ ಹೇಳಿಕೊಂಡಿದೆ.
ಓದಿ: ವಾಹನ ಪ್ರಿಯರಿಗೆ ಗುಡ್ ನ್ಯೂಸ್: ಕೆಟಿಎಂ ಇಂಡಿಯಾ ಬೈಕ್ ಮೇಲೆ ಭಾರೀ ಡಿಸ್ಕೌಂಟ್!