IQOO 13 Launched in India: ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ ಲಗ್ಗೆಯಿಟ್ಟಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ಐಕ್ಯೂ ತನ್ನ ಹೊಸ 'ಐಕ್ಯೂ 13' ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇತ್ತೀಚೆಗೆ ಈ ಫೋನ್ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ ಇದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಮಾಹಿತಿ ಈ ಕೆಳಗಿನಂತಿದೆ..
ಈ ಮೊಬೈಲ್ ಪವರ್ಫುಲ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಒಳಗೊಂಡಿದೆ. ಚೀನಾದಲ್ಲಿ ಬಿಡುಗಡೆಯಾದ 'ಐಕ್ಯೂ 13' ಗೆ ಹೋಲಿಸಿದರೆ, ಭಾರತೀಯ ರೂಪಾಂತರವು ಶಕ್ತಿಶಾಲಿಯಾದ ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್‌ಫೋನ್ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.
'ಐಕ್ಯೂ 13' ಫೀಚರ್ಗಳು:
- ಡಿಸ್ಪ್ಲೇ: 6.82-ಇಂಚಿನ LTPO AMOLED ಫ್ಲಾಟ್ ಸ್ಕ್ರೀನ್
- ರೆಸಲ್ಯೂಶನ್: 2K
- ರಿಫ್ರೆಶ್ ರೇಟ್: 144Hz
- ಪ್ರೊಸೆಸರ್: Qualcomm Snapdragon 8 Elite
- ರಿಯರ್ ಕ್ಯಾಮೆರಾ: 50MP ಪ್ರಾಥಮಿಕ (ಸೋನಿ IMX921) + 50MP ಅಲ್ಟ್ರಾ-ವೈಡ್ + 50MP ಟೆಲಿಫೋಟೋ
- ಫ್ರಂಟ್ ಕ್ಯಾಮೆರಾ: 32MP
- ಬ್ಯಾಟರಿ: 6,000mAh
- ಚಾರ್ಜಿಂಗ್: 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್
- ಆಪರೇಟಿಂಗ್ ಸಿಸ್ಟಮ್: Android 15 ಆಧಾರಿತ FunTouchOS 15
- ಅಪ್ಡೇಟ್ಸ್: 4 Android ಅಪ್ಡೇಟ್ಸ್, 5 ವರ್ಷಗಳ ಭದ್ರತಾ ಅಪ್ಡೇಟ್ಸ್
- ಪ್ರೊಟೆಕ್ಷನ್: IP68/IP69
ಇದರಲ್ಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಜೊತೆಗೆ ಕ್ಯೂ2 ಸೂಪರ್ ಕಂಪ್ಯೂಟಿಂಗ್ ಅನ್ನು ಗೇಮಿಂಗ್‌ಗಾಗಿ ನೀಡಲಾಗಿದೆ. ಇದು 2K ಗೇಮ್ ಸೂಪರ್ ರೆಸಲ್ಯೂಶನ್ ಹೊಂದಿದೆ. ಇದು ಗ್ರಾಫಿಕ್ಸ್ ಅನ್ನು ಇನ್ನಷ್ಟು ಸುಧಾರಿಸುತ್ತದೆ. ಅಲ್ಲದೆ, ಈ ಸ್ಮಾರ್ಟ್‌ಫೋನ್‌ನಲ್ಲಿರುವ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯು ಫೋನ್ ಅನ್ನು ಹೆಚ್ಚು ಬಿಸಿಯಾಗದಂತೆ ರಕ್ಷಿಸುತ್ತದೆ.
ಕ್ಯಾಮೆರಾ ಸೆಟಪ್: ಸ್ಮಾರ್ಟ್ಫೋನ್ 50MP ರಿಯರ್ ಕ್ಯಾಮೆರಾ, 50MP ಅಲ್ಟ್ರಾವೈಡ್ ಸೆನ್ಸಾರ್ ಮತ್ತು 50MP 2x ಟೆಲಿಫೋಟೋ ಸೆನ್ಸಾರ್ ಹೊಂದಿದೆ. ಇದು ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಇದು 6,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿ ಜೊತೆ ಫೋನ್ IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡಿಸೈನ್: ಸ್ಮಾರ್ಟ್ಫೋನ್ 'ಮಾನ್ಸ್ಟರ್ ಹ್ಯಾಲೊ' ಲೈಟ್ ಎಪೆಕ್ಟ್ ಹೊಂದಿದೆ. ಈ ಡಿಸೈನ್ ಕ್ಯಾಮೆರಾ ಮಾಡ್ಯೂಲ್ ಸುತ್ತ ಸುತ್ತುತ್ತದೆ. ಕಾಲ್, ಮೆಸೇಜ್ ಅಥವಾ ಮೊಬೈಲ್‌ನಲ್ಲಿ ಚಾರ್ಜ್ ಮಾಡುವಂತಹ ಸೂಚನೆಗಳನ್ನು ನೀಡಲು ಇದು ಉಪಯುಕ್ತವಾಗಿದೆ.
ಕಲರ್ ಆಪ್ಷನ್: ಇದು ಎರಡು ಬಣ್ಣದ ಆಯ್ಕೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ. ಮೊದಲನೆಯದು 'ನಾರ್ಡೊ ಗ್ರೇ' (ಇಟಾಲಿಯನ್ ರೇಸಿಂಗ್ ಕಾರ್ ವಿನ್ಯಾಸವನ್ನು ಆಧರಿಸಿದೆ) ಮತ್ತು ಎರಡನೆಯದು 'ಲೆಜೆಂಡ್ ಎಡಿಷನ್' (BMW ಮೋಟಾರ್‌ಸ್ಪೋರ್ಟ್‌ಗೆ ಹೋಲುವ ಮೂರು ಬಣ್ಣದ ಪಟ್ಟಿಗಳೊಂದಿಗೆ ಬರುತ್ತದೆ).
ಬೆಲೆ: 'ಐಕ್ಯೂ 13' 12GB RAM + 256GB ರೂಪಾಂತರದ ಬೆಲೆ 54,999 ರೂಪಾಯಿ ಒಳಗೊಂಡಿದೆ. ಆದ್ರೆ ಬ್ಯಾಂಕ್ ಆಫರ್ನಿಂದ ಈ ಫೋನ್ 51,999 ರೂ.ಗೆ ಲಭ್ಯವಾಗಲಿದೆ. 'ಐಕ್ಯೂ 13' 16GB RAM + 512GB ರೂಪಾಂತರದ ಬೆಲೆ 59,999 ರೂಪಾಯಿ ಒಳಗೊಂಡಿದ್ದು, ಬ್ಯಾಂಕ್ ಆಫರ್ನಲ್ಲಿ 56,999 ರೂ.ಗೆ ಲಭ್ಯವಾಗಲಿದೆ.
ಓದಿ: ವಾಹನ ಪ್ರಿಯರಿಗೆ ಗುಡ್ ನ್ಯೂಸ್: ಕೆಟಿಎಂ ಇಂಡಿಯಾ ಬೈಕ್ ಮೇಲೆ ಭಾರೀ ಡಿಸ್ಕೌಂಟ್!