ಮುಂಬೈ (ಮಹಾರಾಷ್ಟ್ರ): ಜನಪ್ರಿಯ ಒಟಿಟಿ ಸಿರೀಸ್ 'ಆಶ್ರಮ್' ನ ಮುಂದಿನ ಭಾಗ ಇಷ್ಟರಲ್ಲೇ ಬಿಡುಗಡೆಯಾಗಲಿದೆ. 'ಏಕ್ ಬದನಾಮ್ ಆಶ್ರಮ್ ಸೀಸನ್-3 ಪಾರ್ಟ್-2' ನಲ್ಲಿ ಬಾಬ್ಬಿ ಡಿಯೋಲ್ ಮತ್ತೊಮ್ಮೆ ಬಾಬಾ ನಿರಾಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಒಟಿಟಿ ಸಿರೀಸ್ ಮೂಲಕ ಬಾಬ್ಬಿ ಡಿಯೋಲ್ ಒಟಿಟಿ ವೇದಿಕೆಯಲ್ಲಿನ ಜನಪ್ರಿಯ ನಟರೊಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಬುಧವಾರ ಮುಂಬೈನಲ್ಲಿ 'ಆಶ್ರಮ್' ಮುಂದಿನ ಭಾಗದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಿತು. ಆರಂಭದಲ್ಲಿ ಇಂಥದೊಂದು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ತಾವು ಹಿಂಜರಿದಿದ್ದು ಹಾಗೂ ಪತ್ನಿ ತಾನಿಯಾ ಡೀಯೋಲ್ ಅವರ ಮನವೊಲಿಕೆಯಿಂದ ನಟಿಸಲು ಒಪ್ಪಿದ್ದು ಮುಂತಾದ ವಿಚಾರಗಳನ್ನು ಬಾಬ್ಬಿ ಡಿಯೋಲ್ ಈ ಸಂದರ್ಭದಲ್ಲಿ ಹಂಚಿಕೊಂಡರು.
ಪ್ರಕಾಶ್ ಝಾ ನಿರ್ದೇಶನದ ಈ ಸರಣಿಯಲ್ಲಿ ಅದಿತಿ ಪೊಹಾಂಕರ್, ದರ್ಶನ್ ಕುಮಾರ್, ಚಂದನ್ ರಾಯ್ ಸನ್ಯಾಲ್, ವಿಕ್ರಮ್ ಕೊಚ್ಚರ್, ತ್ರಿಧಾ ಚೌಧರಿ, ಅನುಪ್ರಿಯಾ ಗೋಯೆಂಕಾ, ರಾಜೀವ್ ಸಿದ್ಧಾರ್ಥ ಮತ್ತು ಇಶಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಾಬಾ ನಿರಾಲಾ ಅವರ ಸಾಮ್ರಾಜ್ಯ ದುರ್ಬಲವಾಗುವುದು, ಅವರ ನಿಕಟ ಮಿತ್ರರಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವುದು ಮತ್ತು ಪಮ್ಮಿಯ ನಿರ್ಭೀತ ಮರಳುವಿಕೆಯು ಟ್ರೈಲರ್ನಲ್ಲಿ ಕಾಣಿಸುತ್ತದೆ.
ಟ್ರೈಲರ್ ಅನ್ನು ಇಲ್ಲಿ ನೋಡಬಹುದು.
'ಏಕ್ ಬದ್ನಾಮ್ ಆಶ್ರಮ್' ಒಟಿಟಿ ಪ್ಲಾಟ್ ಫಾರ್ಮ್ಗಳಲ್ಲಿ ಅತ್ಯಂತ ಜನಪ್ರಿಯ ಭಾರತೀಯ ಸರಣಿಗಳಲ್ಲಿ ಒಂದಾಗಿದೆ. ಇದು ತನ್ನ ಮುಂಬರುವ ಸೀಸನ್ ನೊಂದಿಗೆ ಮತ್ತೊಮ್ಮೆ ಪರದೆಯ ಮೇಲೆ ಪ್ರಾಬಲ್ಯ ಸಾಧಿಸಲು ಸಜ್ಜಾಗಿದೆ. ಮುಂದಿನ ಸೀಸನ್ ಶೀಘ್ರದಲ್ಲೇ ಅಮೆಜಾನ್ ಎಂಎಕ್ಸ್ ಪ್ಲೇಯರ್ ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಸರಣಿಯು ಫೆಬ್ರವರಿ 27 ರಿಂದ ಅಮೆಜಾನ್ ಎಂಎಕ್ಸ್ ಪ್ಲೇಯರ್ನಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಿರುತ್ತದೆ. ಅಮೆಜಾನ್ ಮೊಬೈಲ್ ಅಪ್ಲಿಕೇಶನ್, ಪ್ರೈಮ್ ವಿಡಿಯೋ, ಫೈರ್ ಟಿವಿ ಮತ್ತು ಕನೆಕ್ಟೆಡ್ ಟಿವಿಗಳ ಮೂಲಕ ವೀಕ್ಷಕರು ಇದನ್ನು ವೀಕ್ಷಿಸಬಹುದು.
ಇದನ್ನೂ ಓದಿ : ಸೂರ್ಯಕಾಂತಿ ನಾನು, ನನ್ನ ಸೂರ್ಯ ನೀನು : ಡಾಲಿ ಧನಂಜಯ್ ಬಗ್ಗೆ ಪತ್ನಿ ಧನ್ಯತಾ ಮನದಾಳ - DHANYATHA DHANANJAY