ಸಿಯೋಲ್: ವಿವಾಹ ಕಾಯ್ದೆಗೆ ತೀವ್ರ ವಿರೋಧ, ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವ ದಕ್ಷಿಣ ಕೊರಿಯಾದ ತುರ್ತು ಪರಿಸ್ಥಿತಿಗೆ ಒಳಪಟ್ಟಿದೆ. ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರು ದೇಶವನ್ನು ಸಮಸ್ಥಿತಿಗೆ ತರಲು ಸೇನಾ ಆಡಳಿತ ಜಾರಿಗೆ ತಂದಿದ್ದಾಗಿ ಮಂಗಳವಾರ ಘೋಷಿಸಿದರು.
ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಸೇನಾಡಳಿತದ ಮೂಲಕ ಮುಕ್ತ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರವನ್ನು ಮರು ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳಿಂದ ಎದುರಾಗಿರುವ ಬೆದರಿಕೆಯಿಂದ ಸ್ವತಂತ್ರ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ದೇಶ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ದೇಶದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಜನರ ಸ್ವಾತಂತ್ರ್ಯ ಮತ್ತು ಅವರ ಸುರಕ್ಷತೆಯನ್ನು ಖಾತರಿಪಡಿಸಲು ಇದು ಅನಿವಾರ್ಯ ಕ್ರಮವಾಗಿದೆ. ರಾಷ್ಟ್ರೀಯ ಸಂಸತ್ತು ಮಾದಕ ವಸ್ತು ಅಪರಾಧ ತಡೆ, ನಾಗರಿಕರ ಸುರಕ್ಷತೆ ಕ್ರಮಗಳಿಗೆ ನಿಗದಿಯಾಗಿದ್ದ ಬಜೆಟ್ ಅನುದಾನವನ್ನು ಕಡಿತಗೊಳಿಸಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಯೂನ್ ಸುಕ್ ಹೇಳಿದ್ದಾರೆ.
ಪ್ರತಿಪಕ್ಷಗಳಿಂದ ತೀವ್ರ ವಿರೋಧ: ಅಧ್ಯಕ್ಷ ಯೂನ್ ಅವರ ಈ ಕ್ರಮವನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಸರ್ಕಾರ ದೇಶವನ್ನು ಅಧಃಪತನಕ್ಕೆ ತಳ್ಳುತ್ತಿದೆ. ತುರ್ತು ಪರಿಸ್ಥಿತಿಯನ್ನು ಜನತೆಯ ಜತೆ ಸೇರಿ ವಿರೋಧಿಸುವುದಾಗಿ ಡೆಮಾಕ್ರಟಿಕ್ ಪಕ್ಷದ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಹಿಂದೂ ನಾಯಕ ಕೃಷ್ಣದಾಸ್‌ಗಿಲ್ಲ ಜಾಮೀನು; ದಾಳಿ ಭೀತಿಯಿಂದ ವಾದ ಮಂಡಿಸಲು ವಕೀಲರ ಹಿಂದೇಟು