SMARTWATCH BANDS: ತಂತ್ರಜ್ಞಾನ ಬೆಳದಂತೆ ಮಾನವರಿಗೆ ಅಪಾಯವೂ ಸಹ ಹೆಚ್ಚುತ್ತಲೇ ಸಾಗುತ್ತಿದೆ. ಸದ್ಯ ಈಗ ಎಲ್ಲಡೆ ಸ್ಮಾರ್ಟ್ವಾಚ್ ಮತ್ತು ಫಿಟ್‌ನೆಸ್ ಟ್ರ್ಯಾಕರ್‌ಗಳಿಗೆ ಜನರು ಮಾರು ಹೋಗುತ್ತಿದ್ದಾರೆ. ಆದರೆ ಇದರಿಂದ ಎಷ್ಟು ಅಪಾಯವಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಸಂಶೋಧಕರು ಪ್ರತಿಯೊಬ್ಬರಿಗೂ ಹೆಚ್ಚರಿಸಿದ್ದಾರೆ. ಅದೇನು ಎಂಬುದು ತಿಳಿಯೋಣ ಬನ್ನಿ.
ಸ್ಮಾರ್ಟ್‌ವಾಚ್‌ಗಳು ಮತ್ತು ಫಿಟ್‌ನೆಸ್ ಟ್ರ್ಯಾಕರ್‌ಗಳಿಗೆ ಅಳವಡಿಸಿರುವ ರಿಸ್ಟ್ಬ್ಯಾಂಡ್ಗಳಿಂದ ಬಳಸುವವರಿಗೆ ಅಪಾಯ ಹೆಚ್ಚಿದೆ ಎನ್ನುತ್ತಿದ್ದಾರೆ ಸಂಶೋಧಕರು. ಇವುಗಳು ಚರ್ಮವನ್ನು ಶಾಶ್ವತವಾಗಿ ರಾಸಾಯನಿಕಗಳಿಗೆ ಒಡ್ಡಬಹುದು ಎಂದು ಎಸಿಎಸ್‌ನ ಎನ್ವಿರಾನ್ಮೆಂಟಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಲೆಟರ್ನಲ್ಲಿ ಪ್ರಕಟವಾದ ಅಧ್ಯಯನ ಬಹಿರಂಗ ಪಡಿಸಿದೆ. ಫ್ಲೋರಿನೇಟೆಡ್ ಸಿಂಥೆಟಿಕ್ ರಬ್ಬರ್‌ನಿಂದ ಮಾಡಿದ ರಿಸ್ಟ್‌ಬ್ಯಾಂಡ್‌ಗಳು ಹೆಚ್ಚಿನ ಮಟ್ಟದ ಪರ್ಫ್ಲೋರೋಹೆಕ್ಸಾನೋಯಿಕ್ ಆಮ್ಲವನ್ನು (PFHxA) ಒಳಗೊಂಡಿರುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಶಾಶ್ವತ ರಾಸಾಯನಿಕದ ಒಂದು ವಿಧನಾವಾಗಿದೆ. ಇದು ಕಡಿಮೆ ಬೆಲೆಯ ಉತ್ಪನ್ನಗಳಲ್ಲಿ ಕಂಡು ಬರುವ ಬದಲು, ಈಗ ದುಬಾರಿ ರಿಸ್ಟ್‌ಬ್ಯಾಂಡ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಅಧ್ಯಯನ ಹೇಳಿದೆ.
ನಮ್ಮ ಚರ್ಮದೊಂದಿಗೆ ದೀರ್ಘಕಾಲದ ಸಂಪರ್ಕದಲ್ಲಿರುವ ವಸ್ತುಗಳಲ್ಲಿ ಒಂದು ರೀತಿಯ ಶಾಶ್ವತ ರಾಸಾಯನಿಕಗಳ ಅತಿ ಹೆಚ್ಚು ಸಾಂದ್ರತೆ ಇರುವುದು ಎದ್ದು ಕಾಣುತ್ತದೆ ಎಂದು ಅಧ್ಯಯನದ ಕರೆಸ್ಪಾಂಡಿಂಗ್ ಲೇಖಕರಾದ ಗ್ರಹಾಂ ಪೀಸ್ಲೀ ಅವರ ಮಾತಾಗಿದೆ.
PFHxA ರಾಸಾಯನಿಕವು ಚರ್ಮ ಅಥವಾ ಆರೋಗ್ಯದ ಮೇಲೆ ಯಾವರೀತಿ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ವಿಜ್ಞಾನಿಗಳು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಇದರ ಬಗ್ಗೆ ಸಂಶೋಧನೆ ಮುಂದುವರಿದಿದೆ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಸಾಮಾನ್ಯ ಪರಿಸ್ಥಿತಿಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಚರ್ಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೂಚಿಸುತ್ತವೆ ಅಂತಾ ಲೇಖಕರು ಎಚ್ಚರಿಸಿದ್ದಾರೆ.
ಶಾಶ್ವತ ರಾಸಾಯನಿಕ: ಪರ್- ಅಂಡ್ ಪಾಲಿಫ್ಲೋರೊಅಲ್ಕೈಲ್ ಸಬ್ಸ್ಟೆನ್ಸೆಸ್ (PFAS) ರಾಸಾಯನಿಕಗಳು ಅವುಗಳ ಬಾಳಿಕೆ ಮತ್ತು ನೀರು, ಬೆವರು ಮತ್ತು ಎಣ್ಣೆಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಗುಣಲಕ್ಷಣಗಳು ಸ್ಮಾರ್ಟ್ವಾಚ್ ಮತ್ತು ಫಿಟ್‌ನೆಸ್ ಟ್ರ್ಯಾಕರ್ ರಿಸ್ಟ್‌ಬ್ಯಾಂಡ್‌ಗಳನ್ನು ಒಳಗೊಂಡಂತೆ ಸ್ಟೇನ್-ರೆಸಿಸ್ಟೆಂಟ್ ಬೆಡ್ಡಿಂಗ್ ಮತ್ತು ಫಿಟ್‌ನೆಸ್ ಉಡುಗೆಗಳಂತಹ ಅನೇಕ ಗ್ರಾಹಕ ಉತ್ಪನ್ನಗಳಲ್ಲಿ ಕಂಡು ಬರುತ್ತವೆ.