ನವದೆಹಲಿ: ಹಲವು ಜನಪ್ರಿಯ ಡಿಜಿಟಲ್ ಫ್ಲಾಟ್ಫಾರ್ಮ್ಗಳಿಗೆ ಸವಾಲು ಹಾಕುವ ರೀತಿ ತಮ್ಮ 'ಎಕ್ಸ್' ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯವನ್ನು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಪರಿಚಯಿಸುತ್ತಲೇ ಇದ್ದಾರೆ. ಇತ್ತೀಚಿಗಷ್ಟೆ ಯೂಟ್ಯೂಬ್ ರೀತಿ ವಿಡಿಯೋ ಸ್ಟ್ರಿಮಿಂಗ್ಗೆ ಅವಕಾಶ ನೀಡುವ ಕುರಿತು ಘೋಷಿಸಿದ್ದರು. ಈಗ ಇದನ್ನು ಕಾರ್ಯರೂಪಕ್ಕೆ ತಂದಿರುವ ಅವರು ತಮ್ಮ ಫ್ಲಾಟ್ಫಾರ್ಮ್ ಅನ್ನು ಯಾವುದೇ ಮನರಂಜನೆ ವೇದಿಕೆಗಿಂತ ಕಡಿಮೆ ಇಲ್ಲ ಎಂದು ಸಾರಲು ಸಜ್ಜಾಗಿದ್ದಾರೆ.
ಇನ್ನು ಮುಂದೆ ಎಕ್ಸ್ ಚಂದಾದಾರರು ದೀರ್ಘಾವಧಿಯ ಸಂಪೂರ್ಣ ಸಿನಿಮಾವನ್ನೇ ಪೋಸ್ಟ್ ಮಾಡಬಹುದು. ಅಷ್ಟೇ ಅಲ್ಲ, ಈ ರೀತಿ ಸಿನಿಮಾ ಪೋಸ್ಟ್ ಮಾಡುವ ಮೂಲಕ ಹಣವನ್ನು ಗಳಿಸಬಹುದಾಗಿದೆ ಎಂದು ಟೆಸ್ಲಾ ಸಂಸ್ಥಾಪಕ ಮಸ್ಕ್ ಘೋಷಿಸಿದ್ದಾರೆ.
'ಎಕ್ಸ್ನಲ್ಲಿ ಚಂದಾದಾರಿಕೆ ಪಡೆಯುವ ಮೂಲಕ ನೀವು ನಿಮ್ಮ ಸಿನಿಮಾ, ಟಿವಿ ಸೀರಿಸ್ ಅಥವಾ ಪೋಡಕಾಸ್ಟ್ಗಳನ್ನು ನಮ್ಮ ಫ್ಲಾಟ್ಫಾರ್ಮ್ನಲ್ಲಿ ಹಂಚಿಕೊಂಡು ಹಣ ಗಳಿಸಬಹುದು' ಎಂದು ಮಸ್ಕ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಮಸ್ಕ್ ಅವರ ಈ ಹೊಸ ಪ್ರಯತ್ನಕ್ಕೆ ಬಳಕೆದಾರರಿಂದ ಕೂಡ ಮೆಚ್ಚುಗೆ ವ್ಯಕ್ತವಾಗಿದ್ದಾರೆ. ಎಕ್ಸ್ ಚಂದದಾರರು ಪೋಸ್ಟ್ ಮಾಡಿದ ಸಿನಿಮಾದಿಂದ ಇತರೆ ಬಳಕೆದಾರರು, ಸಬ್ಸ್ಕೈಬ್ ಮಾಡದೆಯೇ ಚಲನಚಿತ್ರವನ್ನು ಖರೀದಿಸಬಹುದು. ಎಕ್ಸ್ ನಿಜವಾದ ಚಲನಚಿತ್ರ ವೇದಿಕೆಯಾಗುತ್ತದೆ ಎಂದಿದ್ದಾರೆ.